ಅರ್ಜೆಂಟೀನ ಪೊಲೀಸರಿಗೆ ಭಾರತದ ರಾಯಲ್ ಎನ್‌ಫೀಲ್ಡ್ ಬೈಕ್!

First Published | Sep 15, 2020, 9:16 PM IST

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಇರುವ ಬೇಡಿಕೆಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಇದೀಗ ಇತರ ದೇಶದಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.  ಇದೇ ಮೊದಲ ಬಾರಿಗೆ ಭಾರತದ ಬೈಕ್ ವಿದೇಶಿ ಪೊಲೀಸ್ ಇಲಾಖೆಯ ಪ್ರಮುಖ ಬೈಕ್ ಆಗಿ ಸೇರಿಕೊಂಡಿದೆ. ಈ ಹೆಗ್ಗಳಿಕೆಗೆ ರಾಯಲ್ ಎನ್‌ಫೀಲ್ಡ್ ಪಾತ್ರವಾಗಿದೆ.  

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಹೆಚ್ಚು ಜನಪ್ರಿಯವಾಗಿದೆ. ಎಲ್ಲಾ ವಯಸ್ಕರು ರಾಯಲ್ ಎನ್‌ಫೀಲ್ಡ್ ಬೈಕ್ ಇಷ್ಟಪಡುತ್ತಾರೆ. ಅದರಲ್ಲೂ ಲಾಂಗ್ ರೈಡ್ ಹೋಗುವ ಅನೇಕರ ಮೊದಲ ಆಯ್ಕೆ ರಾಯಲ್ ಎನ್‌ಫೀಲ್ಡ್ ಬೈಕ್ ಆಗಿದೆ.
undefined
ಭಾರತದಲ್ಲಿ ಭಾರಿ ಬೇಡಿಕೆ ಬೈಕ್ ಆಗಿರುವ ರಾಯಲ್ ಎನ್‌ಫೀಲ್ಡ್ ಇದೀಗ ವಿದೇಶದಲ್ಲೂ ಅಷ್ಟೇ ಜನಪ್ರಿಯತೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ವಿದೇಶಿ ಪೊಲೀಸರು ಭಾರತದ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಿದ್ದಾರೆ.
undefined

Latest Videos


ಅರ್ಜೆಂಟೀನ ಪೊಲೀಸರು ಭಾರತದ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಖರೀದಿಸಿದ್ದಾರೆ. ಈ ಮೂಲಕ ಭಾರತದ ಬೈಕ್ ವಿದೇಶಿ ಪೊಲೀಸರ ಇಲಾಖೆ ಸೇರಿಕೊಂಡಿದೆ.
undefined
ಅರ್ಜಂಟೀನದಿಂದ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದ ಕಾರಣ ಕಳೆದ ವರ್ಷ ರಾಯಲ್ ಎನ್‌ಫೀಲ್ಡ್ ಅರ್ಜಂಟೀನದಲ್ಲಿ ಘಟಕ ತೆರೆಯುವುದಾಗಿ ಘೋಷಿಸಿತ್ತು.
undefined
ಇದೀಗ ಅರ್ಜಂಟೀನಾ ಘಟಕದಲ್ಲಿ ಭಾರತಿಂದ ರಫ್ತು ಮಾಡಲಾಗದ ರಾಯಲ್ ಎನ್‌ಫೀಲ್ಡ್ ಬಿಡಿ ಭಾಗಗಳನ್ನು ಜೋಡಣೆ ಮಾಡಿ ಬೈಕ್ ವಿತರಣೆ ಮಾಡಲಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಪರಿಶೀಲಿಸಿದ ಅರ್ಜಂಟೀನ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಳಿಕ ಒಪ್ಪಂದ ಮಾಡಿಕೊಂಡಿದ್ದಾರೆ
undefined
BS-VI 411-cc ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 24.3bhp ಪವರ್ ಹಾಗೂ 32Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
undefined
ರಾಯಲ್ ಎನ್‌ಫೀಲ್ಡ್‌ಗೆ ಇದು 2ನೇ ಪೊಲೀಸ್ ಪಾರ್ಟ್ನರ್‍‌ಶಿಪ್ ಆಗಿದೆ. ಅರ್ಜಂಟೀನಾ ಪೊಲೀಸ್ ಜೊತೆಗಿನ ಒಪ್ಪಂದಕ್ಕೂ ಮೊದಲು, ಬೆಂಗಳೂರು ಮಹಿಳಾ ಪೊಲೀಸರ ಜೊತೆ ಹಿಮಾಲಯನ್ ಬೈಕ್ ಒಪ್ಪಂದ ಮಾಡಿಕೊಂಡಿತ್ತು.
undefined
click me!