Published : Feb 19, 2020, 08:00 PM ISTUpdated : Feb 19, 2020, 08:02 PM IST
ಕಿಯಾ ಸೆಲ್ಟೋಸ್ ಕಾರಿನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಹ್ಯುಂಡೈ ಕ್ರೆಟಾ ಇದೀಗ ಹೊಸ ಅವಾತರದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಪ್ರತಿಸ್ಪರ್ಧಿಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ. ನೂತನ ಹ್ಯುಂಡೈ ಕ್ರೆಟಾ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ. ನೂತನ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.