ದೇಶದ ಪ್ರಮುಖ ಉತ್ಪಾದನಾ ಕಂಪನಿ ಮಾರುತಿ ಸುಜುಕಿ ತನ್ನ ಮೇಡ್ ಇನ್ ಇಂಡಿಯಾ ಕಾರ್ ಫ್ರಾಂಕ್ಸ್ ಅನ್ನು ರಫ್ತು ಮಾಡಲು ಪ್ರಾರಂಭಿಸಿದೆ. ಕಂಪನಿಯು ಕಳೆದ ವರ್ಷ ಏಪ್ರಿಲ್‌ನಲ್ಲಿ ಈ ಕಾರನ್ನು ಬಿಡುಗಡೆ ಮಾಡಿತು.
ಈಗಾಗಲೇ ಜನರಿಂದ ಅಪಾರ ಮೆಚ್ಚುಗೆಯನ್ನು ಈ ಕಾರ್ ಪಡೆದುಕೊಂಡಿದೆ. ಮಾರುತಿ ಫ್ರಾಂಕ್ಸ್ ರಫ್ತು ಮಾಡಲಾಗುವ ಮೊದಲ ಕಾರು ಎನ್ನುವುದು ವಿಶೇಷವಾಗಿದೆ.
ಇದು ಮೇಡ್ ಇನ್ ಇಂಡಿಯಾ ಕಾರ್ ಆಗಿದ್ದು, ಜಪಾನ್‌ನಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಗುತ್ತಿದೆ. ಕಂಪನಿಯು ಈ ಕಾರನ್ನು ಭಾರತದಿಂದ ಜಪಾನ್‌ಗೆ ರಫ್ತು ಮಾಡಲಿದೆ.
ಈ ಕಾರುಗಳನ್ನು ಕಂಪನಿಯ ಗುಜರಾತ್ ಪ್ಲ್ಯಾಂಟ್‌ನಲ್ಲಿ ತಯಾರಿಸಲಾಗುತ್ತಿದೆ. 1600 ಯುನಿಟ್‌ಗಳನ್ನು ಪಿಪಾವಾವ್ ಬಂದರಿನ ಮೂಲಕ ಗುಜರಾತ್‌ನಿಂದ ಜಪಾನ್‌ಗೆ ರಫ್ತು ಮಾಡಲಾಗಿದೆ.
ಪ್ರಶಸ್ತಿ ವಿಜೇತ ಫ್ರಾಂಕ್ಸ್ ಕಾರು ಜಪಾನ್‌ಗೆ ರಫ್ತು ಮಾಡಲಾದ ಎರಡನೇ ಮಾದರಿಯಾಗಿದೆ. ಈ ಹಿಂದೆ 2016ರಲ್ಲಿ ಬಲೆನೊವನ್ನು ಕೂಡ ರಫ್ತು ಮಾಡಲಾಗಿತ್ತು.
ಈ ಕಾರನ್ನು ಮೊದಲ ಬಾರಿಗೆ ಗ್ಲೋಬಲ್ ಆಟೋ ಎಕ್ಸ್‌ಪೋ 2023 ರಲ್ಲಿ ಅನಾವರಣಗೊಳಿಸಲಾಯಿತು, ನಂತರ ಕಂಪನಿಯು ಈ ಕಾರನ್ನು 24 ಏಪ್ರಿಲ್ 2023 ರಂದು ಬಿಡುಗಡೆ ಮಾಡಿತು.
ಈ ಕಾರು ಆಧುನಿಕ SUV ವಿನ್ಯಾಸವನ್ನು ಹೊಂದಿದೆ. ಇದರೊಂದಿಗೆ ಟೆಕ್ ಲೋಡೆಡ್ ಪರ್ಸೋನಾ ಆಫರ್ ಕೂಡ ಈ ಕಾರ್‌ನಲ್ಲಿದೆ. ಅದಕ್ಕಾಗಿಯೇ ಇದು ಅಪಾರ ಮೆಚ್ಚುಗೆ ಸಂಪಾದಿಸಿದೆ.
ಬಿಡುಗಡೆಯಾದ ಕೇವಲ 10 ತಿಂಗಳಲ್ಲಿ 1 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿಯ ಮೊದಲ ಕಾರು ಇದಾಗಿದೆ. ಈ ಕಾರು ಇಷ್ಟು ಬೇಗ 1 ಲಕ್ಷ ಮಾರಾಟದ ಅಂಕಿಅಂಶವನ್ನು ತಲುಪಿದ ಮೊದಲ SUV ಆಗಿದೆ.
ಜಪಾನ್ ಮಾತ್ರವಲ್ಲದೆ, ಮಾರುತಿ ಸುಜುಕಿ ಈ ಕಾರ್‌ಗಳನ್ನು ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಂತಹ ದೇಶಗಳಿಗೆ ರಫ್ತು ಮಾಡುತ್ತದೆ.
ಮಾರುತಿ ಸುಜುಕಿ ಫ್ರಾಕ್ಸ್ ಕಾರ್‌ನ ಬೆಲೆಯ ಬಗ್ಗೆ ಮಾತನಾಡುವುದಾದರೆ, ಈ ಕಾರಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 7.51 ಲಕ್ಷ ರೂಪಾಯಿ ಆಗಿದೆ.
ಫ್ರಾಂಕ್ಸ್ 2 ಎಂಜಿನ್ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ, ಗ್ರಾಹಕರು 1.0 ಲೀಟರ್ ಕೆ-ಸೀರೀಸ್ ಟರ್ಬೊ ಬೂಸ್ಟರ್‌ಜೆಟ್ ಎಂಜಿನ್ ಅನ್ನು ಪಡೆಯುತ್ತಾರೆ, ಇದು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಎಟಿಯಂತಹ ಆಯ್ಕೆಗಳೊಂದಿಗೆ ಬರುತ್ತದೆ.
ಸುರಕ್ಷತೆಯ ವಿಚಾರಕ್ಕೆ ಬರೋದಾದರೆ, ಕಂಪನಿಯು ಈ ಶಕ್ತಿಶಾಲಿ SUV ನಲ್ಲಿ 6 ಏರ್‌ಬ್ಯಾಗ್‌ಗಳು, 3 ಪಾಯಿಂಟ್ ELR ಸೀಟ್‌ಬೆಲ್ಟ್‌ಗಳಂತಹ ವೈಶಿಷ್ಟ್ಯಗಳನ್ನು ಒದಗಿಸಿದೆ.
ಇದಲ್ಲದೆ, ಕಂಪನಿಯು ಈ ವಾಹನದಲ್ಲಿ 360 ಡಿಗ್ರಿ ವೀವ್ ಮತ್ತು ಉನ್ನತ ತಂತ್ರಜ್ಞಾನವನ್ನು ಕೂಡ ಸೇರಿಸಿದ್ದು, ದೊಡ್ಡ ಮಟ್ಟದಲ್ಲಿ ಯಶಸ್ಸಿನ ನಿರೀಕ್ಷೆ ಹೊಂದಿದೆ.