ಭಾರತದಲ್ಲಿ ನಿರ್ಮಾಣವಾದ ಕಿಯಾ ಸೊನೆಟ್ ನೇಪಾಳದಲ್ಲಿ ಲಾಂಚ್: ಬೆಲೆ 22 ಲಕ್ಷ ರೂ!

First Published | Sep 27, 2020, 2:31 PM IST

ಕಿಯಾ ಮೋಟಾರ್ಸ್ ಭಾರತದಲ್ಲಿ ಈಗಾಗಲೇ ಸಬ್ ಕಾಂಪಾಕ್ಟ್ SUV ಕಾರಾದ ಕಿಯಾ ಸೊನೆಟ್ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಬೆಲೆ 6.71 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ. ಭಾರತದಲ್ಲಿ ನಿರ್ಮಾಣವಾದ ಕಿಯಾ ಸೊನೆಟ್ ಕಾರು 70 ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಇದೀಗ ನೇಪಾಳದಲ್ಲೂ ಕಾರು ಬಿಡುಗಡೆಯಾಗಲಿದ್ದು, ಬೆಲೆ ದುಬಾರಿಯಾಗಿದೆ.

ಆಂಧ್ರ ಪ್ರದೇಶದ ಅನಂತಪುರಂ ಘಟಕದಲ್ಲಿ ಕಿಯಾ ಮೋಟಾರ್ಸ್ ಕಾರುಗಳ ಉತ್ಪಾದನೆ. ಇತ್ತೀಚೆಗೆ ಕಿಯಾ ಸೊನೆಟ್ ಕಾರು ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್
ಭಾರತದಲ್ಲಿ ಅತ್ಯಾಧುನಿಕ ಹಾಗೂ ಏಕೈಕ ಘಟಕ ಹೊಂದಿರುವ ಕಿಯಾ ಮೋಟಾರ್ಸ, ಕಿಯಾ ಸೆಲ್ಟೋಸ್, ಕಿಯಾ ಕಾರ್ನಿಲ್ ಬಳಿಕ 3ನೇ ಕಾರಾಗಿ ಕಿಯಾ ಸೊನೆಟ್ ಕಾರು ಬಿಡುಗಡೆ ಮಾಡಿದೆ.
Tap to resize

ಕಿಯಾ ಕಾರುಗಳು ಭಾರತದಿಂದ ಯುರೋಪ್, ಲ್ಯಾಟಿನ್ ಅಮೆರಿಕ, ಏಷ್ಯಾ, ಸೌತ್ ಆಫ್ರಿಕಾ ಸೇರಿದಂತೆ 70 ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಈ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಆಟೋಮೇಕರ್ ಕಿಂಗ್ ಆಗಿ ಬದಲಾಗುತ್ತಿದೆ.
ನೇಪಾಳದಲ್ಲೂ ಕಿಯಾ ಮೋಟಾರ್ಸ್ ತನ್ನು ಹೊಚ್ಚ ಹೊಸ ಕಿಯಾ ಸೊನೆಟ್ ಕಾರು ಬಿಡುಗಡೆ ಮಾಡುತ್ತಿದೆ. ಆದರೆ ನೇಪಾಳದಲ್ಲಿ ಇದರ ಬೆಲೆ 35.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
ಬೇಸ್ ಮಾಡೆಲ್ ಕಾರಿನ ಬೆಲೆಯನ್ನು ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿದರೆ 22.51 ಲಕ್ಷ ರೂಪಾಯಿ ಆಗಲಿದೆ. ಕಿಯಾ ಸೊನೆಟ್ ಕಾರಿನ 4 ವೆರಿಯೆಂಟ್ ನೇಪಾಳದಲ್ಲಿ ಲಭ್ಯವಿದೆ.
ಕಿಯಾ ಸೊನೆಟ್ HTE ವೇರಿಯೆಂಟ್ ಕಾರಿನ ಬೆಲೆ 35.90 ಲಕ್ಷ ನೇಪಾಳ ರೂಪಾಯಿ. ಸೊನೆಟ್ HTX ಕಾರಿನ ಬೆಲೆ 47.90 ಲಕ್ಷ ರೂಪಾಯಿ(ನೇಪಾಳ).
ಕಿಯಾ ಸೊನೆಟ್ ಟಾಪ್ ಮಾಡೆಲ್ GTX+ ವೇರಿಯೆಂಟ್ ಕಾರಿನ ಬೆಲೆ 57.90 ಲಕ್ಷ ರೂಪಾಯಿ(ನೇಪಾಳ ರೂಪಾಯಿ). ಇವು ಎಕ್ಸ್ ಶೋ ರೂಂ ಬೆಲೆಗಳಾಗಿವೆ.
ಕಿಯಾ ಸೊನೆಟ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಕಾರುಗಳು ನೇಪಾಳದಲ್ಲಿ ಬಿಡುಗಡೆಯಾಗಲಿದೆ.

Latest Videos

click me!