ಕೊರೋನಾ ವೈರಸ್ ಹರದದಂತೆ ತಡೆಯಲು ವಿಶ್ವದಲ್ಲಿನ ಎಲ್ಲರೂ ಮನೆಯೊಳಗೆ ಬಂಧಿಯಾಗಿದ್ದಾರೆ. ಇದರ ನಡುವೆ ಮೊಂಟನಾ ಸಿಟಿಯ ಜನ ಮಾತ್ರ ಕೊಂಚ ಭಿನ್ನ. ಕೊರೋನಾ ನಡುವೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕೋವಿಡ್ ಕ್ರ್ಯೂಸ್ ಅನ್ನೋ ಕಾರ್ಯಕ್ರಮ ಆಯೋಜಿಸಿ ಯಶಸ್ವಿಯಾಗಿದ್ದಾರೆ. ಕಾರುಗಳ ವಿಹಾರ ರ‍್ಯಾಲಿ ಮೂಲಕ ವಿಂಟೇಜ್ ಹಾಗೂ ಹಲವು ಕಾರುಗಳು ರಸ್ತೆಯಲ್ಲಿ ಮಿಂಚಿತು. ಇದನ್ನು ನೋಡಲು ಸಾವಿರಾರು ಜನ ಸೇರಿದ್ದರು.