ಅವಿಭಕ್ತ ಕುಟುಂಬಗಳೇ ಹೆಚ್ಚಾಗಿರುವ ಭಾರತದಲ್ಲಿ 7 ಸೀಟುಗಳ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ 7 ಸೀಟುಗಳ ಪ್ರಸಿದ್ಧ ಕಾರುಗಳು ಯಾವುದು ಅಂತ ಈಗ ನೋಡೋಣ.
7-ಸೀಟರ್ ವಾಹನಗಳಿಗೆ ಭಾರತದಲ್ಲಿ ಬೇಡಿಕೆ ಸ್ಥಿರವಾಗಿದೆ. ದೊಡ್ಡ ಕುಟುಂಬಗಳು ಜಾಗ ಮತ್ತು ಸೌಕರ್ಯ ಎರಡನ್ನೂ ಒದಗಿಸುವ ದೊಡ್ಡ ಕಾರುಗಳನ್ನೇ ಹೆಚ್ಚಾಗಿ ಬಯಸುತ್ತವೆ. ಮೇ 2025 ರಲ್ಲಿ, ಮಾರುತಿ ಸುಜುಕಿಯ ಎರ್ಟಿಗಾ ಈ ವಿಭಾಗದಲ್ಲಿ ಅತೀ ಹೆಚ್ಚು ಮಾರಾಟವಾಗುವುದರೊಂದಿಗೆ ಮತ್ತೆ ಅಜೇಯ ನಾಯಕನಾಗಿ ಹೊರಹೊಮ್ಮಿದೆ. ₹8.96 ಲಕ್ಷ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯೊಂದಿಗೆ, ಎರ್ಟಿಗಾ ಒಂದು ಪ್ರಾಯೋಗಿಕ ಮತ್ತು ಬಜೆಟ್-ಸ್ನೇಹಿ ಆಯ್ಕೆಯಾಗಿದೆ.
25
ಸ್ಕಾರ್ಪಿಯೋ, ಬೊಲೆರೋ ಸ್ಥಾನ
ಮಹೀಂದ್ರಾ ಸ್ಕಾರ್ಪಿಯೋ ಎರಡನೇ ಸ್ಥಾನದಲ್ಲಿದೆ. ಬೊಲೆರೋ ಮೂರನೇ ಸ್ಥಾನದಲ್ಲಿದೆ. ಈ ಎರಡು ಮಹೀಂದ್ರಾ ಮಾದರಿಗಳು 7 ಸೀಟರ್ ವಿಭಾಗದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿವೆ.
35
ಇನ್ನೋವಾ ಮತ್ತು XUV700
ಟೊಯೋಟಾ ಇನ್ನೋವಾ ಈ ವಿಭಾಗದಲ್ಲಿ ದುಬಾರಿ ಕಾರು ಎನಿಸಿದ್ಯಾದರೂ ಮಾರಾಟದಲ್ಲಿ ಹೆಚ್ಚು ಏರಿಕೆಯಾಗಿದೆ XUV700 ಜನಪ್ರಿಯತೆ ಗಳಿಸುತ್ತಿದೆ.
ಆದರೆ ಕಿಯಾ ಕ್ಯಾರೆನ್ಸ್ ಕಾರು ಮಾರಾಟದಲ್ಲಿ ಕುಸಿತ ಕಂಡಿದೆ. ಮಾರುತಿ XL6 ಮಾರಾಟದಲ್ಲಿ ಮುನ್ನಡೆ ಸಾಧಿಸಿದೆ. ಟೊಯೋಟಾ ಫಾರ್ಚುನರ್, ಟೊಯೋಟಾ ರೂಮಿಯನ್ ಮತ್ತು ಟಾಟಾ ಸಫಾರಿ ಕೂಡ ಈ ಪಟ್ಟಿಯಲ್ಲಿವೆ.
55
7 ಸೀಟರ್ ಕಾರುಗಳು ಏಕೆ ಜನಪ್ರಿಯ?
7 ಸೀಟರ್ ಕಾರುಗಳ ಜನಪ್ರಿಯತೆ ಅವುಗಳ ಕೈಗೆಟುಕುವ ಬೆಲೆ, ಪ್ರಾಯೋಗಿಕತೆ ಮತ್ತು ಕುಟುಂಬ ಬಳಕೆಗೆ ಸೂಕ್ತವಾಗಿದೆ. ಎರ್ಟಿಗಾದಂತಹ ವಾಹನಗಳು ₹9 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಮೌಲ್ಯವನ್ನು ನೀಡುತ್ತವೆ.