ಭಾರತದ ಅತ್ಯಂತ ಐಷಾರಾಮಿ ಕಾರು ಮರ್ಸಿಡಿಸ್-ಬೆಂಜ್ ಇದೀಗ ಗ್ರಾಹಕರ ಅಭಿರುಚಿ, ಬೇಡಿಕೆಗೆ ಅನುಗುಣವಾಗಿ ಹೊಚ್ಚ ಹೊಸ ಮರ್ಸಿಡಿಸ್-ಎಎಂಜಿ ಜಿ 63 'ಕಲೆಕ್ಟರ್ಸ್ ಎಡಿಷನ್ ಬಿಡುಗಡೆ ಮಾಡಿದೆ. ಭಾರತೀಯರಿಗಾಗಿ ಈ ಹೊಸ ವಾಹನ ವಿನ್ಯಾಸಗೊಳಿಸಲಾಗಿದೆ. ಇದು ಲಿಮಿಟೆಡ್ ಎಡಿಶನ್ ಕಾರು, ಕೇವಲ 30 ಕಾರುಗಳು ಮಾತ್ರ ಲಭ್ಯವಿದೆ. ಹೀಗಾಗಿ ಮೊದಲು ಬುಕ್ ಮಾಡಿದರಿಗೆ ಮಾತ್ರ ಲಭ್ಯವಿದೆ.
ಮರ್ಸಿಡಿಸ್-ಬೆಂಜ್ ಸಂಶೋಧನೆ ಮತ್ತು ಅಭಿವೃದ್ಧಿ ಭಾರತ (ಏಂಬಿಆರ್‌ಡಿಐ) ಸಹಯೋಗದಲ್ಲಿ ಜಂಟಿಯಾಗಿ ತಯಾರಿಸಲಾಗಿರುವ ಎಎಂಜಿ ಜಿ 63 'ಕಲೆಕ್ಟರ್ಸ್ ಎಡಿಷನ್' ಭಾರತದ ಜಾಣ ಗ್ರಾಹಕರಿಗೆ ಹೆಚ್ಚು ವೈಯಕ್ತಿಕಗೊಳಿಸಿದ ಮತ್ತು ವಿಶೇಷ ಶ್ರೇಷ್ಠತೆ ಹಾಗೂ ದುಬಾರಿ ಐಷಾರಾಮಿತನವನ್ನು ನೀಡುತ್ತದೆ. ಇದರ ಆರಂಭಿಕ ಬೆಲೆ 4.30 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).