ಮಿಂಚಿ ಮರೆಯಾದ ಭಾರತದ 10 ಜಾವಾ-ಯೆಝೆಡಿ ಬೈಕ್!

First Published | May 19, 2019, 12:33 PM IST

ಭಾರತದಲ್ಲಿ ಜಾವಾ ಮೋಟರ್‌ಸೈಕಲ್ ಕಳೆದ ವರ್ಷ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. 1960ರಲ್ಲಿ ಜಾವಾ ಭಾರತದಲ್ಲಿ ಬಿಡುಗಡೆಯಾಗಿತ್ತು. 1996ರಲ್ಲಿ ಜಾವಾ ಸ್ಥಗಿತಗೊಂಡಿತ್ತು. 1973ರಲ್ಲಿ ಜಾವಾ ಬೈಕ್ ಯಝಡಿ ಹೆಸರಲ್ಲಿ ಬಿಡಡುಗಡೆಯಾಯಿತು. 1971ರಲ್ಲಿ ಪ್ಯಾರಿಸ್ ಉದ್ಯಮಿಗಳ ಜಾವಾ ಜೊತೆಗಿನ ಒಪ್ಪಂದ ಅಂತ್ಯಗೊಂಡಿತು. ಹೀಗಾಗಿ ಪ್ಯಾರಿಸ್‌ ಎಂಟ್ರಪ್ರೆನರ್ಸ್ ರಸ್ಟೋಮ್ ಹಾಗೂ  ಫಾರುಖ್ ಇರಾನಿ, ಯೆಜೆಡಿ ಹೆಸರಿನಲ್ಲಿ ಬೈಕ್ ಹೊರತಂದರು. ಜಾವಾ ರೋಡ್‌ಕಿಂಗ್, ಕ್ಲಾಸಿಕ್, ಡಿಲಕ್ಸ್, CLII ಹಾಗೂ ಮೊನಾರ್ಕ್ ಬೈಕ್‌ಗಳನ್ನ ಬಿಡುಗಡೆ ಮಾಡಲಾಯಿತು. ಮಿಂಚಿ ಮರೆಯಾದ 10 ಯಝೆಡಿ ಬೈಕ್ ಇಲ್ಲಿದೆ.

ಯೆಝೆಡಿ ಡಿಲೆಕ್ಸ್: ಯೆಝೆಡಿ ಬೈಕ್‌ಗಳಲ್ಲಿ ಅತ್ಯಂತ ಜನಪ್ರಿಯ ಬೈಕ್ ಎಂದೇ ಗುರುತಿಸಿಕೊಂಡಿತ್ತು
ಯೆಝೆಡಿ 350: ಯಮಹಾ RD350 ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಯೆಝೆಡಿ 350 ಬೈಕ್ ಬಿಡುಗಡೆಯಾಗಿತ್ತು
Tap to resize

ಯೆಝೆಡಿ 60: ಮಹಿಳೆಯರಿಗಾಗಿ ಯೆಝಡಿ 60 ಬೈಕ್ ಬಿಡುಗಡೆ ಮಾಡಲಾಗಿತ್ತು, 60 ಸಿಸಿ ಎಂಜಿನ್ ಹೊಂದಿತ್ತು
ಯೆಝೆಡಿ 175: ಯೆಜೆಡಿ ಕಡಿಮೆ ಬೆಲೆ ಬೈಕ್ ಇದಾಗಿದ್ದು 175 ಸಿಸಿ , ಸಿಂಗಲ್ ಸಿಲಿಂಡರ್ ಎಂಜಿನ್ ಮೂಲಕ ಬಿಡುಗಡೆಯಾಗಿತ್ತು
ಯೆಝೆಡಿ ಕ್ಲಾಸಿಕ್ CL-II: ಕ್ಲಾಸಿಕ್ ಅಪ್‌ಗ್ರೇಡ್ ವರ್ಶನ್ ಬಿಡುಗಡೆ ಮಾಡೋ ಮೂಲಕ ರಾಯಲ್ ಎನ್‌ಫೀಲ್ಡ್‌ಗೆ ತೀವ್ರ ಸ್ಪರ್ಧೆ ನೀಡಿತ್ತು
ಯೆಝೆಡಿ ಕ್ಲಾಸಿಕ್: ಕ್ರೂಸರ್ ಬೈಕ್ ಮೂಲಕ ಬುಲೆಟ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಈ ಬೈಕ್ ಬಿಡುಗಡೆಯಾಗಿತ್ತು
ಯೆಝೆಡಿ ಮೊನಾರ್ಕ್: ರೋಡ್‌ಕಿಂಗ್ ಎಂಜಿನ್ ಹಾಗೂ ಪವರ್ ಹೊಂದಿದ್ದ ಈ ಬೈಕ್ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿತ್ತು
ಯೆಝೆಡಿ ಆಯಿಲ್‌ಕಿಂಗ್: ಯೆಝೆಡಿ ರೋಡ್‌ಕಿಂಗ್ ಬಳಿಕ ಆಯಿಲ್ ಪಂಪ್‌ನೊಂದಿಗೆ ಬಿಡುಗಡೆಯಾದ ಬೈಕ್
ಯೆಝೆಡಿ ರೋಡ್‌ಕಿಂಗ್: 90ರ ದಶಕದಲ್ಲಿ ರಾಯಲ್‌ ಎನ್‌ಫೀಲ್ಡ್ ಪ್ರತಿಸ್ಪರ್ಧಿಯಾಗಿ ಈ ಬೈಕ್ ರಸ್ತೆಗಿಳಿದಿತ್ತು
ಜಾವಾ 250 Type A ಬೈಕ್: 249 cc 2-ಸ್ಟ್ರೋಕ್ ಎಂಜಿನ್ ಹೊಂದಿರುವ ಈ ಬೈಕ್ ಮಾರಾಟದಲ್ಲೂ ದಾಖಲೆ ಬರೆದಿತ್ತು

Latest Videos

click me!