ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂಬತ್ತು ಗ್ರಹಗಳು ನಿರ್ದಿಷ್ಟ ಅವಧಿಯಲ್ಲಿ ತಮ್ಮ ರಾಶಿ ಮತ್ತು ನಕ್ಷತ್ರಗಳನ್ನು ಬದಲಾಯಿಸುತ್ತವೆ. ಅಸುರರ ಗುರು ಎಂದು ಪರಿಗಣಿಸಲ್ಪಡುವ ಶುಕ್ರ ಗ್ರಹವು ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದಾನೆ. ಸೌಂದರ್ಯ, ಐಷಾರಾಮಿ, ಪ್ರೀತಿ ಮತ್ತು ಸಂಪತ್ತಿನ ಅಧಿಪತಿಯಾಗಿರುವ ಶುಕ್ರನ ಈ ಬದಲಾವಣೆಯು ಕೆಲವು ರಾಶಿಗಳ ವೈಯಕ್ತಿಕ ಜೀವನ, ಆರ್ಥಿಕ ಸ್ಥಿತಿ ಮತ್ತು ಸಂಬಂಧಗಳಲ್ಲಿ ಬದಲಾವಣೆಗಳನ್ನು ತರುತ್ತದೆ. ಶುಕ್ರ ಈಗ ಸೆಪ್ಟೆಂಬರ್ 3 ರಾತ್ರಿ ಸರಿ ಸುಮಾರು 11:57 ಕ್ಕೆ ಶುಕ್ರ ದೇವನು ಆಶ್ಲೇಷ ನಕ್ಷತ್ರ ಸಾಗಲಿದ್ದಾನೆ. ಇದರಿಂದ ನಾಲ್ಕು ರಾಶಿಗಳಿಗೆ ಒಳ್ಳೆಯ ಬದಲಾವಣೆಗಳಾಗಲಿವೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.