ಪ್ರತಿಯೊಂದು ರಾಶಿಯ ಹೆಣ್ಣುಮಕ್ಕಳಿಗೂ ವಿಭಿನ್ನ ಗುಣಗಳಿರುತ್ತವೆ. ಕೆಲವು ರಾಶಿಯ ಹೆಣ್ಣುಮಕ್ಕಳನ್ನು ಮದುವೆಯಾದರೆ ಜೀವನ ಚೆನ್ನಾಗಿರುತ್ತದೆ. ಇಂತಹ ಹೆಣ್ಣುಮಕ್ಕಳು ಗಂಡಂದಿರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಿ ಸಿರಿವಂತರನ್ನಾಗಿ ಮಾಡುತ್ತಾರೆ. ಅಂತಹ ರಾಶಿಗಳ ಬಗ್ಗೆ ತಿಳಿಯೋಣ.
26
ಕುಂಭ ರಾಶಿ ಮಹಿಳೆಯರು:
ಇವರು ಬುದ್ಧಿವಂತರು, ಎಲ್ಲರೊಂದಿಗೂ ಚೆನ್ನಾಗಿ ಬೆರೆಯುತ್ತಾರೆ. ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ವಿಭಿನ್ನವಾದದ್ದನ್ನು ಮಾಡುತ್ತಿರುತ್ತಾರೆ ಮತ್ತು ಅದರಲ್ಲಿ ಯಶಸ್ಸನ್ನೂ ಗಳಿಸುತ್ತಾರೆ. ಹಣಕಾಸಿನ ನಿರ್ಧಾರಗಳಲ್ಲಿ ನಿಸ್ಸೀಮರು. ಗಂಡನನ್ನು ತುಂಬಾ ಪ್ರೀತಿಸುತ್ತಾರೆ.
36
ವೃಷಭ ರಾಶಿ ಮಹಿಳೆಯರು:
ಜ್ಯೋತಿಷ್ಯದಲ್ಲಿ 2ನೇ ರಾಶಿ ವೃಷಭ. ಈ ರಾಶಿಯ ಅಧಿಪತಿ ಶುಕ್ರ. ಇವರು ಸಂಪತ್ತು, ಕಾಂತಿ, ಆಕರ್ಷಣೆ ಮತ್ತು ಪ್ರೀತಿಯ ಅಂಶಗಳು. ಈ ರಾಶಿಯ ಹೆಣ್ಣುಮಕ್ಕಳು ಜವಾಬ್ದಾರಿಯುತ ಮತ್ತು ಕಾಳಜಿಯುಳ್ಳವರಾಗಿರುತ್ತಾರೆ. ಹಣಕಾಸಿನ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತಾರೆ. ಹಣವನ್ನು ಉಳಿಸುವ ಬಗೆಯನ್ನು ಚೆನ್ನಾಗಿ ತಿಳಿದಿರುತ್ತಾರೆ. ಇದರಿಂದ ಮನೆಯಲ್ಲಿ ಸಂತೋಷ, ಶಾಂತಿ ನೆಲೆಸಿರುತ್ತದೆ. ಕುಟುಂಬದಲ್ಲಿ ಸಂತಸ ತುಂಬಿರುತ್ತದೆ.
46
ಮೀನ ರಾಶಿ ಮಹಿಳೆಯರು:
ಇವರಿಗೆ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚು. ಅದೇ ರೀತಿ ಪ್ರೀತಿಯ ಮೇಲೂ ಅಪಾರವಾದ ಪ್ರೀತಿ. ಜೀವನ ಸಂಗಾತಿಗೆ ಬೆಂಬಲ ನೀಡುತ್ತಾರೆ. ಹಣಕಾಸಿನ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಕನಸುಗಳನ್ನು ನನಸಾಗಿಸಲು ಶ್ರಮಿಸುತ್ತಾರೆ. ಭಾವುಕರಾಗಿರುತ್ತಾರೆ. ಈ ರಾಶಿಯ ಹೆಣ್ಣುಮಕ್ಕಳು ಸಿಕ್ಕರೆ ಜೀವನ ಸುಂದರ.
56
ಕರ್ಕಾಟಕ ರಾಶಿ ಮಹಿಳೆಯರು:
ಈ ರಾಶಿಯ ಹೆಣ್ಣುಮಕ್ಕಳು ಕಾಳಜಿಯುಳ್ಳವರು ಮತ್ತು ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಮನೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಸುತ್ತಮುತ್ತಲಿನವರನ್ನು ಸಂತೋಷವಾಗಿಡಲು ಇಷ್ಟಪಡುತ್ತಾರೆ. ಜೀವನ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಹಣಕಾಸಿನ ವಿಷಯದಲ್ಲಿ ಚಾಣಾಕ್ಷರು. ಇದರಿಂದ ಕುಟುಂಬಕ್ಕೆ ಸಹಾಯಕಾರಿ. ಜೀವನ ಸಂಗಾತಿಗೆ ಸಂಪತ್ತು ಮತ್ತು ಯಶಸ್ಸು ಸಿಗುತ್ತದೆ.
66
ಸಿಂಹ ರಾಶಿ ಹೆಣ್ಣುಮಕ್ಕಳು:
ಸಿಂಹ ರಾಶಿಯ ಹೆಣ್ಣುಮಕ್ಕಳು ಆತ್ಮಗೌರವವನ್ನು ಇಷ್ಟಪಡುತ್ತಾರೆ. ಆತ್ಮವಿಶ್ವಾಸ ಮತ್ತು ಧೈರ್ಯ ಹೊಂದಿರುತ್ತಾರೆ. ಇವರ ವ್ಯಕ್ತಿತ್ವ ಅತ್ತೆಯನ್ನೂ ಮೆಚ್ಚಿಸುತ್ತದೆ. ಇತರರನ್ನು ಚೆನ್ನಾಗಿ ಮಾರ್ಗದರ್ಶನ ಮಾಡುತ್ತಾರೆ. ಗಂಡನ ಆಸೆ-ಆಕಾಂಕ್ಷೆಗಳನ್ನು ಈಡೇರಿಸಲು ಸಹಾಯ ಮಾಡುತ್ತಾರೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.