ಆಗಸ್ಟ್ ತಿಂಗಳು ಮುಗಿದು ಸೆಪ್ಟೆಂಬರ್ ಶುರುವಾಗಲಿದೆ. ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, ಈ ಸೆಪ್ಟೆಂಬರ್ ತಿಂಗಳು ಬಹಳ ಮುಖ್ಯವಾಗಿದೆ. ಯಾಕಂದ್ರೆ, ಈ ತಿಂಗಳಲ್ಲಿ ಹಲವು ಶಕ್ತಿಶಾಲಿ ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಾಯಿಸುತ್ತವೆ. ಗ್ರಹಗಳ ಈ ಸಂಚಾರವು ಕೆಲವು ರಾಶಿಗಳಿಗೆ ಯೋಗ ಮತ್ತು ಲಾಭಗಳನ್ನು ತಂದರೆ, ಇನ್ನು ಕೆಲವು ರಾಶಿಗಳಿಗೆ ಕಠಿಣ ಪರೀಕ್ಷೆ ಹಾಗೂ ಹಿನ್ನಡೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ, ಹಣಕಾಸು, ವೃತ್ತಿ ಮತ್ತು ಕುಟುಂಬ ಜೀವನದಲ್ಲಿ ಕೆಲವು ರಾಶಿಯವರು ಈ ತಿಂಗಳು ಹೆಚ್ಚು ಜಾಗರೂಕರಾಗಿರಬೇಕು. ಸೆಪ್ಟೆಂಬರ್ ತಿಂಗಳ ಗ್ರಹಸ್ಥಿತಿಗಳ ಪ್ರಕಾರ, ಯಾವ ರಾಶಿಯವರು ಸವಾಲುಗಳನ್ನು ಮತ್ತು ದುರದೃಷ್ಟವನ್ನು ಎದುರಿಸುವ ಸಾಧ್ಯತೆಯಿದೆ ಎಂಬುದನ್ನು ಇಲ್ಲಿ ವಿವರವಾಗಿ ನೋಡೋಣ.