ಈ ಸಂಖ್ಯೆಯಲ್ಲಿ ಹುಟ್ಟಿದವರಿಗೆ ದೈಹಿಕ ಸಂಬಂಧ ಮೇಲೆ ಇಂಟರೆಸ್ಟ್ ಜಾಸ್ತಿ

Published : Feb 24, 2026, 04:02 PM IST

Numerology and Physical Relationships ಸಂಖ್ಯಾಶಾಸ್ತ್ರ ಪ್ರಕಾರ, ಪ್ರತಿಯೊಬ್ಬರ ಜೀವನ ಸಂಖ್ಯೆಯು ಅವರ ಪ್ರೀತಿ, ಆಕರ್ಷಣೆ, ದೈಹಿಕ ಇಚ್ಛೆ ಹಾಗೂ ಸಂಬಂಧದ ತೀವ್ರತೆಯನ್ನು ಸೂಚಿಸುತ್ತದೆ. ಕೆಲವು ಸಂಖ್ಯೆಗಳಿ ಇದರಲ್ಲಿ ಹೆಚ್ಚು ಪ್ಯಾಷನ್‌ ಇರುತ್ತದೆ. 

PREV
14
ಲೈಫ್ ಪಾಥ್ 5

ಲೈಫ್ ಪಾಥ್ 5 ಅಂದರೆ ತಿಂಗಳ 5, 14, 23 ರಂದು ಹುಟ್ಟಿದವರಿಗೆ ಪ್ಯಾಷನ್ & ತೀವ್ರ ಆಕರ್ಷಣೆ ಜಾಸ್ತಿ. ತುಂಬಾ ಆಕರ್ಷಕ ಮತ್ತು ಮ್ಯಾಗ್ನೆಟಿಕ್ ವ್ಯಕ್ತಿತ್ವವನ್ನು ಹೊಂದಿರುವವರು. ಪ್ರೀತಿ ಮತ್ತು ದೈಹಿಕ ಸಂಬಂಧಗಳಲ್ಲಿ ತೀವ್ರ ಉತ್ಸಾಹ, ಹೊಸ ಅನುಭವಗಳಿಗೆ ಸದಾ ಸಿದ್ಧ ಇರುತ್ತಾರೆ. ಬೇಗನೆ ಸಂಬಂಧದಲ್ಲಿ ಬೋರ್ ಆಗುತ್ತಾರೆ.

24
ಸಂಖ್ಯೆ 1

ಸಂಖ್ಯೆ 1 — ಪ್ರೀತಿಯಲ್ಲಿ ನಾಯಕರು. ಯಾವುದೇ ತಿಂಗಳ 1, 10, 19, 28ರಂದು ಜನಿಸಿದವರು ಈ ರಾಡಿಕ್ಸ್‌ ಸಂಖ್ಯೆಗೆ ಬರುತ್ತಾರೆ. ಇವರಿಗೆ ಪಡೆಯುವ ಆಸೆ ಹೆಚ್ಚು. ಇವರು ತುಂಬಾ ಶಕ್ತಿಯುತ, ಪ್ಯಾಷನೇಟ್ ಲವರ್. ಆರಂಭದಲ್ಲಿ ಸಂಬಂಧ ಬದ್ಧತೆ ಕಷ್ಟವಾಗಬಹುದು. ಕೆಲವೊಮ್ಮೆ ಹಠಮಾರಿ, ಅಹಂಕಾರಿ ಮತ್ತು ಅತಿಯಾದ ನಿಯಂತ್ರಣ (dominating) ಸ್ವಭಾವವನ್ನು ತೋರಬಹುದು. ಸ್ವತಂತ್ರ ಮನಸ್ಥಿತಿ ಹೆಚ್ಚು

34
ಸಂಖ್ಯೆ 6

ಸಂಖ್ಯೆ 6 — ಮಮತೆ & ಕುಟುಂಬದ ಮೇಲೆ ಪ್ರೀತಿ ಜಾಸ್ತಿ, ಪ್ರೀತಿ, ಮದುವೆ, ಕುಟುಂಬಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಇವರಿಗೆ ಆಳವಾದ ಭಾವನಾತ್ಮಕ ಸಂಪರ್ಕ ಬೇಕು. ಕಾಳಜಿ, ನಂಬಿಕೆ, ನಿಷ್ಠೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಸಂಖ್ಯಾಶಾಸ್ತ್ರದ ಪ್ರಕಾರ 6 ನೇ ಸಂಖ್ಯೆ ಹೊಂದಿರುವ ಜನರು ಗಮನಾರ್ಹವಾದ ಮೋಡಿ ಹೊಂದಿರುತ್ತಾರೆ. ಶುಕ್ರ ಗ್ರಹದ ಪ್ರಭಾವದಡಿಯಲ್ಲಿ, ಈ ವ್ಯಕ್ತಿಗಳು ಸುಂದರ ಮತ್ತು ಆಕರ್ಷಕವಾಗಿರುವುದರಿಂದ ಇತರರತ್ತ ಸುಲಭವಾಗಿ ಆಕರ್ಷಿತರಾಗುತ್ತಾರೆ. ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದವರು 6 ರ ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುತ್ತಾರೆ.

44
ಜೋಡಿ

ಅತ್ಯುತ್ತಮ ಜೋಡಿ ಹೊಂದಾಣಿಕೆ 1 & 8 — ವಿರುದ್ಧ ಗುಣಗಳ ಆಕರ್ಷಣೆ, 5 & 1 ಅಥವಾ 6 — ಪ್ಯಾಷನ್ + ಸ್ಥಿರತೆ, 6 & 9 — ಕುಟುಂಬ & ದೀರ್ಘಕಾಲದ ಬಂಧ

Read more Photos on
click me!

Recommended Stories