ಸಿಂಹ ರಾಶಿ, ಕನ್ಯಾ ರಾಶಿ ಹಾಗೂ ಕುಂಭರಾಶಿ.. ಕ್ರಮವಾಗಿ ಈ ರಾಶಿಫಲಗಳು ಅನುಭವಿಸಲಿರುವ ಸಂಭಾವ್ಯ ಪರಿಣಾಮಗಳನ್ನು ಮುಂದೆ ನೋಡಿ..
ಸಿಂಹರಾಶಿ: ಈ ರಾಶಿಯ ಜನರ ಮೇಲೆ ಚಂದ್ರಗ್ರಹಣವು ಅಶುಭ ಪರಿಣಾಮ ಬೀರಲಿದೆ. ಇವರ ಜೀವನದಲ್ಲಿ ಈಗಾಗಲೇ ಇರುವ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದು. ಹಣಕಾಸಿನ ಮುಗ್ಗಟ್ಟನ್ನು ಎದುರಿಸಬೇಕಾಗಬಹುದು. ಉದ್ಯೋಗದಲ್ಲಿ ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಬೇಕಾಗಿ ಬರಬಹುದು. ಅಧಿಕಾರಿಗಳು ಟಾರ್ಗೆಟ್ ವಿಚಾರವಾಗಿ ಹೆಚ್ಚು ಒತ್ತಡ ಹೇರಬಹುದು. ಆರೋಗ್ಯದಲ್ಲೂ ಏರುಪೇರು ಉಂಟಾಗಬಹುದು. ಆತ್ಮೀಯರಿಂದ ದೂರವಾಗುವ ಸಾಧ್ಯತೆಯೂ ಇದೆ.