ಈ ಮೂಲಾಂಕದ ಹುಡುಗರು ತುಂಬಾ ಪೋಲಿಗಳು; ಇವರೇ ರಕ್ತದಲ್ಲೇ ಇರುತ್ತೆ ಚೆಲ್ಲಾಟ, ತುಂಟಾಟ

Published : Jul 07, 2026, 03:06 PM IST

ಈ ಮೂಲಾಂಕದವರು ತಮಾಷೆಯ ಮತ್ತು ತುಂಟತನದ ಸ್ವಭಾವದವರು. ಬುಧ ಗ್ರಹದಿಂದ ಆಳಲ್ಪಡುವ ಇವರು, ತಮ್ಮ ಬುದ್ಧಿವಂತಿಕೆ, ಸಂವಹನ ಕೌಶಲ್ಯ ಮತ್ತು ಹಾಸ್ಯಪ್ರಜ್ಞೆಯಿಂದ ಇತರರನ್ನು ಸುಲಭವಾಗಿ ಆಕರ್ಷಿಸುತ್ತಾರೆ. ಇವರು ಹೊಸತನವನ್ನು ಇಷ್ಟಪಡುತ್ತಾರೆ ಮತ್ತು ಸಾಹಸಮಯ ಜೀವನವನ್ನು ಆನಂದಿಸುತ್ತಾರೆ.

PREV
15
ಮೂಲಾಂಕ

ಜನ್ಮದಿನಾಂಕ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ಬಹಿರಂಗಪಡಿಸುತ್ತದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಅತ್ಯಂತ ತಮಾಷೆ, ತುಂಟತನ ಹೊಂದಿರುವ ಪುರುಷರು ಯಾವ ಮೂಲಾಂಕದಲ್ಲಿ ಜನಿಸಿರುತ್ತಾರೆ ಎಂಬುದರ ಮಾಹಿತಿಯನ್ನು ಹೊಂದಿದೆ.

25
ಮೂಲಾಂಕ 5

ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ 5 ಹೊಂದಿರುವ ಜನರು ಹುಡುಗಾಟದ ಸ್ವಭಾವ ಹೊಂದಿರುತ್ತಾರೆ. ದಿನಾಂಕ 5, 14 ಮತ್ತು 23ರಂದು ಜನಿಸಿದವರ ಮೂಲಾಂಕ 5 ಆಗುತ್ತದೆ. ಈ ಮೂಲಾಂಕದವರು ವಾಗ್ಮಿತೆ, ಬುದ್ಧಿ ಮತ್ತು ಆಕರ್ಷಕ ವ್ಯಕ್ತಿತ್ವದಿಂದ ಇತರರನ್ನು ಸುಲಭವಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಸೆಳೆಯುತ್ತಾರೆ. ಈ ಸಂಖ್ಯೆಯನ್ನು ಆಡಳಿತಾತ್ಮಕ ಗ್ರಹ ಬುಧ ಎಂದು ಪರಿಗಣಿಸಲಾಗುತ್ತದೆ.

35
ವಿಶೇಷತೆ ಏನು?

ಮೂಲಾಂಕ 5 ಬುದ್ಧಿವಂತಿಕೆ, ಸಂವಹನ ಕೌಶಲ್ಯ ಮತ್ತು ತಮಾಷೆಯ ಸ್ವಭಾವವನ್ನು ಸಂಕೇತಿಸುತ್ತದೆ. ಈ ಮೂಲಾಂಕದವರು ಚುರುಕಾದ ಬುದ್ಧಿ ಮತ್ತು ಹಾಸ್ಯಪ್ರಜ್ಞೆಯಿಂದ ಸುಲಭವಾಗಿ ಜನರ ಮನಸ್ಸನ್ನು ಸುಲಭವಾಗಿ ಗೆಲ್ಲುತ್ತಾರೆ. ಹೊಸ ಜನರನ್ನು ಭೇಟಿಯಾಗೋದು ಅವರ ಸ್ನೇಹ ಸಂಪಾದಿಸೋದು ಇವರಿಗೆ ಕಡಲೆಕಾಯಿ ಸುಲಿದಂತೆ. ಆದ್ರೆ ಇವರ ಅತಿಯಾದ ಸ್ನೇಹಪರ ಸ್ವಭಾವ ಕೆಲವೊಮ್ಮೆ ಇತರರಿಗೆ ಕಿರಿಕಿರಿಯ ಅನುಭವವನ್ನುಂಟು ಮಾಡುತ್ತದೆ.

45
ಹೊಸತನದ ಹುಡುಕಾಟ

ಈ ಮೂಲಾಂಕದವರು ಪದೇ ಪದೇ ಚೇಂಜ್ ಕೇಳುವ ಗುಣ ಹೊಂದಿರುತ್ತಾರೆ. ಒಂದೇ ರೀತಿಯ ದಿನಚರಿಗೆ ಬೇಸರಗೊಳ್ಳುವ ಮೂಲಾಂಕ 5ರ ಜನರು ಹೊಸ ಸ್ಥಳಗಳಿಗೆ ಪ್ರಯಾಣಿಸುವುದು, ಹೊಸ ಅನುಭವಗಳನ್ನು ಪಡೆಯುವುದು ಮತ್ತು ಸಾಹಸಮಯ ಜೀವನವನ್ನು ಆನಂದಿಸುತ್ತಾರೆ. ಹಾಗಾಗಿ ಇವರು ಎಲ್ಲರಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.

55
ಮಾತು ಮತ್ತು ಆತ್ಮವಿಶ್ವಾಸ

ಇವರಿಗೆ ಹೊಸಬರ ಹೃದಯಗಳನ್ನು ಗೆಲ್ಲುವುದರಲ್ಲಿ ಒಂದು ವಿಶೇಷ ಕಲೆ ಹೊಂದಿರುತ್ತಾರೆ. 5 ನೇ ಸಂಖ್ಯೆಯ ಹುಡುಗರು ತಮ್ಮ ಮಾತು ಮತ್ತು ಆತ್ಮವಿಶ್ವಾಸದಿಂದ ಇತರರ ಮೇಲೆ ಸಕಾರಾತ್ಮಕ ಪ್ರಭಾವ ಬೀರುವಲ್ಲಿ ನಿಪುಣರು ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಆದರೆ ಈ ಸಂಖ್ಯೆಯನ್ನು ಹೊಂದಿರುವ ಎಲ್ಲಾ ಜನರು ಒಂದೇ ಎಂದು ಇದರ ಅರ್ಥವಲ್ಲ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವು ಅವರ ಜಾತಕ, ಕೌಟುಂಬಿಕ ಪರಿಸರ ಮತ್ತು ಜೀವನ ಅನುಭವಗಳನ್ನು ಅವಲಂಬಿಸಿ ಬದಲಾಗಬಹುದು.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ

Read more Photos on
click me!

Recommended Stories