ದೇವರಿಗೆ ತಂದ ಹೂವು ತಾಜಾ ಆಗಿಡಲು ಸರಳ ಉಪಾಯ; ಚಿಂತೆ ಬೇಡ, ಇಲ್ಲಿದೆ ಸರಳ ವಿಧಾನ

Published : Oct 19, 2026, 10:30 AM IST

ದೇವರಿಗೆ ಅಂತಾ ಹೂವು ತರುತ್ತೀರಿ. ಎರಡೇ ದಿನಕ್ಕೆ ಬಾಡಿ ಹೋಗುತ್ತೆ. ಅಯ್ಯೋ, ಬಾಡಿ ಹೋಗಿದೆ ಎಂದು ಗೊಣಗುತ್ತೆ ಅದೇ ಹೂವನ್ನು ದೇವರಿಗೆ ಇಟ್ಟು ಪೂಜೆ ಮಾಡುತ್ತೇವೆ. ಹಾಗಿದ್ದರೆ ಹೂವು ಬಾಡಿಹೋಗದಂತೆ ಹೇಗೆ ಜೋಪಾನ ಮಾಡಬಹುದು? ಈ ಸ್ಟೋರಿ ಓದಿ..

PREV
15
ಈ ಟ್ರಿಕ್ಸ್ ಫಾಲೋ ಮಾಡಿ

ಹಳ್ಳಿಯಲ್ಲಿರುವ ಮನೆಗಳಲ್ಲಿ ದೇವರಿಗೆ ತಾಜಾ ಹೂವುಗಳನ್ನ ಮುಡಿಸಲಾಗುತ್ತದೆ. ಆದರೆ ಸಿಟಿಗಳಲ್ಲಿ ಹಾಗೆ ಆಗೋದಿಲ್ಲ. ಎಷ್ಟೋ ದಿನಗಳ ಹಿಂದೆ ಕಿತ್ತಿರುವ ಹೂವುಗಳು ಸಿಗುತ್ತವೆ. ಅದನ್ನು ಹೆಚ್ಚು ದಿನ ತಾಜಾವಾಗಿ ಇಡಲು ಸಾಧ್ಯವಾಗೋದಿಲ್ಲ. ಆದರೆ ಕೆಲವು ಟ್ರಿಕ್ಸ್‌ಗಳನ್ನ ಫಾಲೋ ಮಾಡಿದ್ರೆ ನೀವು ಹೂವುಗಳು ಬೇಗ ಕೆಡದಂತೆ ನೋಡಿಕೊಳ್ಳಬಹುದು.

25
ಹಾಳಾದೋದ್ನ ತಪ್ಪಿಸಿ

ಸಿಟಿಗಳಲ್ಲಿ ಹೆಚ್ಚು ಮಂದಿ ಫ್ರಿಡ್ಜ್‌ಗಳಲ್ಲಿ ಹೂವುಗಳನ್ನ ಜೋಪಾನ ಮಾಡುತ್ತಾರೆ. ಒಂದು ದೊಡ್ಡ ಬಟ್ಟಲಿನಲ್ಲಿ ಟಿಶ್ಯೂ ಪೇಪರ್ ಮತ್ತು ಅಕ್ಕಿಯನ್ನು ಬಳಸಿ ಹೂವುಗಳನ್ನ ಚೆಂದ ರೀತಿಯಲ್ಲಿ ಇಟ್ಟುಕೊಳ್ಳಬಹುದು. ಅಕ್ಕಿ ತೇವಾಂಶದ ಸುತ್ತಲು ಹೀರಿ ಕೊಳ್ಳುವುದರಿಂದ ಹೂವು ಫ್ರೆಶ್ ಆಗಿರುತ್ತದೆ. ಹೂವುಗಳ ಸುತ್ತಲೂ ತೇವಾಂಶ ಇರೋದ್ರಿಂದ ಹೂವು ಬೇಗ ಬಾಡಲ್ಲ.

35
ಹೇಗೆ ಸಂಗ್ರಹಿಸಡಬೇಕು?
  • ಮೊದಲು ಸ್ವಚ್ಛವಾದ ದೊಡ್ಡ ಬಟ್ಟಲು ತೆಗೆದುಕೊಳ್ಳಿ
  • ಕೆಳಭಾಗದಲ್ಲಿ ಟಿಶ್ಯೂ ಪೇಪರ್‍‌ನಿಂದ ಲೈನ್ ಮಾಡಿಕೊಳ್ಳಿ
  • ಟಿಶ್ಯೂ ಮೇಲೆ ಒಣ ಅಕ್ಕಿಯನ್ನು ಹರಡಿ
  • ತೇವಾಂಶ ಹೀರಿ ಕೊಳ್ಳಲು ಅಕ್ಕಿ ಮತ್ತು ಟಿಶ್ಯೂ ಪೇಪರ್ ಬಳಸಲಾಗುತ್ತದೆ
45
ಭಾರವಾದ ಹೂವುಗಳನ್ನ ಕೆಳಗೆ ಇಡಬೇಕು
  • ಬಟ್ಟಲಿನಲ್ಲಿ ಹೂವುಗಳನ್ನ ಸರಿಯಾಗಿ ಜೋಡಿಸಬೇಕು
  • ಚೆಂಡು ಹೂವುಗಳಂಥ ಭಾರವಾದ ಹೂವುಗಳನ್ನ ಕೆಳಗೆ ಇಡಿ
  • ಹಗುರವಾದ ಹೂವುಗಳನ್ನ ಮೇಲೆ ಇಡಬೇಕು
  • ಬಟ್ಟಲಿನ ಮೇಲೆ ಹೂವುಗಳನ್ನ ಇಟ್ಟ ಮೇಲೆ ಅಕ್ಕಿ ಹಾಕಿ
  • ಹೂವುಗಳ ಮೇಲೆ ಸ್ವಲ್ಪ ಅಕ್ಕಿ ಸಿಂಪಡಿಸಿ
  • ನಂತರ ಮೇಲ್ಭಾಗವನ್ನು ಟಿಶ್ಯೂ ಪೇಪರ್‍‌ನಿಂದ ಮುಚ್ಚಿ
  • ಇನ್ನು ಹೂವುಗಳ ದಳಗಳ ಮೇಲೆ ಅಕ್ಕಿ ನೇರವಾಗಿ ಬೀಳದಂತೆ ನೋಡಿಕೊಳ್ಳಿ
  • ನಂತರ ಆ ಬಟ್ಟಲನ್ನು ರೆಫ್ರಿಜರೇಟರ್‍‌ ಮೇಲೆ ಇಡಬೇಕು
  • ತಾಪಮಾನ ತುಂಬಾ ಕಡಿಮೆ ಆಗದ ರೆಫ್ರಿಜರೇಟರ್ ಬಳಸಿದ್ರೆ ಉತ್ತಮ
55
ಏನು ಎಚ್ಚರ ವಹಿಸಬೇಕು?
  • ದೀರ್ಘಕಾಲ ಹೂವುಗಳನ್ನ ಇಟ್ಟುಕೊಳ್ಳಲು ತಾಜಾವಾಗಿರುವ ಹೂವು ಮಾತ್ರ ಬಳಸಿ
  • ಅಂದರೆ.. ಹಾನಿಯಾದ ಹೂವಿನ ದಳಗಳನ್ನ ತೆಗೆದು ಇಡಬೇಕು
  • ಒದ್ದೆಯಾದ ಹೂವುಗಳನ್ನ ಬಟ್ಟಲಿನಲ್ಲಿ ಇಡೋದನ್ನು ತಪ್ಪಿಸಿ
  • ಟಿಶ್ಯೂ ತೇವವಾಗಿದ್ದರೆ ಅದನ್ನು ಆಗಾಗ ಬದಲಿಸಿ
  • ಸೇಬು, ಬಾಳೆಹಣ್ಣುಗಳ ಬಳಿ ಸಂಗ್ರಹಿಸುವುದನ್ನು ತಪ್ಪಿಸಿ
  • ಹಣ್ಣುಗಳು ಎಥಿಲಿನ್ ಅನಿಲ್ ಹೊರಹಾಕೋದ್ರಿಂದ ಬೇಗ ಒಣಗಿ ಹೋಗುತ್ತದೆ

ವಾರಗಟ್ಟಲೇ ಹೂವು ತಾಜಾ ಆಗಿರುತ್ತದೆ ಎಂದು ಹೇಳೋದು ಕಷ್ಟ. ಯಾಕೆಂದರೆ ಹೂವುಗಳನ್ನ ಸಂಗ್ರಹಿಸಿಡುವ ರೆಫ್ರಿಜರೇಟರ್ ಹಾಗೂ ಹೂವಿನ ತಾಜಾತನ ಕೂಡ ಮುಖ್ಯವಾಗುತ್ತದೆ.

Read more Photos on
click me!

Recommended Stories