ಚಿಕ್ಕಮಗಳೂರಿನ ಹಿಂದೂ ಮಹಾಸಭಾ ಗಣಪತಿಯ ಹುಂಡಿ ಎಣಿಕೆಯಲ್ಲಿ ಹಣದ ಜೊತೆಗೆ ಸೌಜನ್ಯಾ ಪ್ರಕರಣದ ನ್ಯಾಯ, ಧರ್ಮಸ್ಥಳದ ರಕ್ಷಣೆ ಕುರಿತ ಭಕ್ತರ ಪತ್ರಗಳು ಪತ್ತೆಯಾಗಿವೆ. ಹಲವು ಪತ್ರಗಳ ಬೇಡಿಕೆ ಇಲ್ಲಿವೆ ನೋಡಿ..
ಚಿಕ್ಕಮಗಳೂರು (ಸೆ.10): ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು, ಹುಂಡಿಯಲ್ಲಿ ಹಣದ ಜೊತೆಗೆ ತರಹೇವಾರಿ ಬೇಡಿಕೆಗಳ ಪತ್ರಗಳು ಪತ್ತೆಯಾಗಿವೆ. ಕೆಲವು ಪತ್ರಗಳು ರಾಜಕೀಯ ಬೇಡಿಕೆಗಳನ್ನು ಒಳಗೊಂಡಿದ್ದರೆ, ಇನ್ನು ಕೆಲವು ಧರ್ಮಸ್ಥಳದ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯದ ನಿರೀಕ್ಷೆಯನ್ನು ವ್ಯಕ್ತಪಡಿಸಿವೆ.
26
ಹುಂಡಿ ಎಣಿಕೆಯಲ್ಲಿ ಚೀಟಿ ಪತ್ತೆ
ಕಳೆದ ಶನಿವಾರ ಅದ್ದೂರಿಯಾಗಿ ವಿಸರ್ಜನಾ ಮಹೋತ್ಸವ ನಡೆದಿದ್ದ ಹಿಂದೂ ಮಹಾಸಭಾ ಗಣಪತಿ ಹುಂಡಿಯಲ್ಲಿ ಇಂದು ಎಣಿಕೆ ಕಾರ್ಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಪತ್ತೆಯಾದ ನಾಲ್ಕು ಪತ್ರಗಳು ಎಲ್ಲರ ಗಮನ ಸೆಳೆದವು.
36
ಭಕ್ತರ ಚೀಟಿಗಳಲ್ಲಿ ಏನಿದೆ?
ಭಕ್ತರು ಗಣಪತಿಗೆ ಬೇಡಿಕೊಂಡ ಪತ್ರಗಳಲ್ಲೇನಿದೆ?
* ಮುಂದಿನ ಸಲ ಸಿ.ಟಿ. ರವಿ ಅಣ್ಣ ಸಿಎಂ ಆಗಬೇಕು, ಗಣಪ ಕೃಪೆ ಸಿಗಲಿ
* ಅದಿತ್ಯನಾಥ ಯೋಗಿ ಮುಂದಿನ ಪ್ರಧಾನಿಯಾಗಬೇಕು, ಗಣೇಶ ಕಾಪಾಡಪ್ಪ
* ಬುರುಡೆ ಗ್ಯಾಂಗ್ ಕಥೆ ಬುರುಡೆಯಾಗಲಿ, ಧರ್ಮ ಸದಾ ಬೆಳಗುತಿರಲಿ, ಸತ್ಯಕ್ಕೆ ಜಯವಾಗಲಿ
* ಸೌಜನ್ಯಾಗೆ ನ್ಯಾಯ ಸಿಗಲಿ, ಧರ್ಮಸ್ಥಳ ಟಾರ್ಗೆಟ್ ಆಗದಿರಲಿ,
ಒಂದೇ ಹುಂಡಿಯಲ್ಲಿ ಇಂತಹ ವಿಭಿನ್ನ ಮತ್ತು ಸಂಕೀರ್ಣ ವಿಷಯಗಳ ಕುರಿತ ಬೇಡಿಕೆಗಳು ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಇದನ್ನು ಯಾರೋ ಯೋಜನೆ ಮಾಡಿಕೊಂಡು ಚೀಟಿ ಬರೆದು ಹಾಕಿರಬಹುದು ಎಂದೂ ಹೇಳಲಾಗುತ್ತಿದೆ.
56
ಸೌಜನ್ಯಾಗೆ ನ್ಯಾಯ ಸಿಗಲೆಂದು ಮನವಿ
ಪ್ರಮುಖವಾಗಿ, ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿರುವ ಸೌಜನ್ಯಾ ಪ್ರಕರಣದ ಬಗ್ಗೆ ಭಕ್ತರು ಗಣಪತಿಯಲ್ಲಿ ನ್ಯಾಯ ಕೇಳಿರುವುದು ಸಾರ್ವಜನಿಕವಾಗಿ ಈ ಪ್ರಕರಣಕ್ಕಿರುವ ಮಹತ್ವವನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ.
66
60 ಸಾವಿರ ರೂ. ಹಣ ಸಂಗ್ರಹ
ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು ಸರಿಸುಮಾರು ₹60,000 ಹಣ ಸಂಗ್ರಹವಾಗಿದೆ ಎಂದು ಹಿಂದೂ ಮಹಾಸಭಾ ಪದಾಧಿಕಾರಿಗಳು ತಿಳಿಸಿದ್ದಾರೆ. ರಾಜಕೀಯ ಹಾಗೂ ಸೂಕ್ಷ್ಮ ವಿಷಯಗಳ ಕುರಿತು ಪತ್ರಗಳು ಪತ್ತೆಯಾಗಿರುವುದು ಇದೀಗ ಸ್ಥಳೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.