Chandra grahan 2026ರ ಮೊದಲ ಚಂದ್ರಗ್ರಹಣ ಮಾರ್ಚ್ 3 ರಂದು ಸಂಭವಿಸಲಿದೆ. ಈ ಗ್ರಹಣ ಭಾರತದಲ್ಲಿ ಕಾಣಿಸುವುದರಿಂದ, ಇದರ ಸೂತಕ ಕಾಲವನ್ನು ಕೂಡ ಆಚರಿಸಲಾಗುತ್ತದೆ. ಹಾಗಾದ್ರೆ, ಚಂದ್ರಗ್ರಹಣದ ಸೂತಕ ಯಾವಾಗ ಶುರುವಾಗುತ್ತೆ ಇಲ್ಲಿದೆ ವಿವರ.
ಭಾರತದಲ್ಲಿ ಚಂದ್ರಗ್ರಹಣ ಯಾವಾಗ?: ವಿಜ್ಞಾನಿಗಳ ಪ್ರಕಾರ, ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಇದನ್ನೇ ಚಂದ್ರಗ್ರಹಣ ಎನ್ನುತ್ತಾರೆ. ಇದು ಒಂದು ಸಾಮಾನ್ಯ ಖಗೋಳ ವಿದ್ಯಮಾನವಾದರೂ, ಭಾರತದಲ್ಲಿ ಇದನ್ನು ಧರ್ಮ ಮತ್ತು ಜ್ಯೋತಿಷ್ಯದ ದೃಷ್ಟಿಯಿಂದ ನೋಡಲಾಗುತ್ತದೆ. 2026ರ ಮೊದಲ ಚಂದ್ರಗ್ರಹಣ ಮಾರ್ಚ್ 3 ರಂದು ಸಂಭವಿಸಲಿದೆ. ಈ ಗ್ರಹಣ ಭಾರತದಲ್ಲೂ ಕಾಣಿಸುವುದರಿಂದ, ಇಲ್ಲಿ ಸೂತಕದ ನಿಯಮಗಳನ್ನು ಪಾಲಿಸಲಾಗುತ್ತದೆ. ಸೂತಕವನ್ನು ಅಶುಭ ಸಮಯವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳಿವೆ. ಮಾರ್ಚ್ 3ರಂದು ಚಂದ್ರಗ್ರಹಣದ ಸೂತಕ ಯಾವಾಗ ಆರಂಭವಾಗಿ, ಯಾವಾಗ ಮುಗಿಯಲಿದೆ ಎಂಬ ಮಾಹಿತಿ ಇಲ್ಲಿದೆ...
24
ಮಾರ್ಚ್ 3, ಮಂಗಳವಾರ ಚಂದ್ರಗ್ರಹಣ
2026ರ ಮೊದಲ ಚಂದ್ರಗ್ರಹಣವು ಫಾಲ್ಗುಣ ಮಾಸದ ಹುಣ್ಣಿಮೆಯ ದಿನ, ಅಂದರೆ ಮಾರ್ಚ್ 3, ಮಂಗಳವಾರದಂದು ಸಂಭವಿಸಲಿದೆ. ಈ ಚಂದ್ರಗ್ರಹಣ ಮಧ್ಯಾಹ್ನ 03:23ಕ್ಕೆ ಆರಂಭವಾಗಿ ಸಂಜೆ 06:47ರವರೆಗೆ ಇರಲಿದೆ. ಗ್ರಹಣದ ಮಧ್ಯಕಾಲ ಸಂಜೆ 05:04 ಆಗಿರುತ್ತದೆ. ಅಂದರೆ, ಈ ಗ್ರಹಣದ ಒಟ್ಟು ಅವಧಿ 3 ಗಂಟೆ 24 ನಿಮಿಷಗಳು. ಈ ಗ್ರಹಣವು ಭಾರತದಲ್ಲಿ ಗರಿಷ್ಠ 52 ನಿಮಿಷಗಳ ಕಾಲ ಗ್ರಸ್ತೋದಯ ರೂಪದಲ್ಲಿ ಕಾಣಿಸಿಕೊಳ್ಳಲಿದೆ.
34
ಚಂದ್ರಗ್ರಹಣದ ಸೂತಕ
ಉಜ್ಜಯಿನಿಯ ಜ್ಯೋತಿಷಿ ಪಂಡಿತ್ ಪ್ರವೀಣ್ ದ್ವಿವೇದಿ ಅವರ ಪ್ರಕಾರ, ಮಾರ್ಚ್ 3 ರಂದು ಸಂಭವಿಸಲಿರುವ ಚಂದ್ರಗ್ರಹಣದ ಸೂತಕವು ಬೆಳಗ್ಗೆ 09:06 ರಿಂದ ಆರಂಭವಾಗಿ ಸಂಜೆ 06:47 ರವರೆಗೆ ಇರುತ್ತದೆ. ಅಂದರೆ, ಸೂತಕದ ಒಟ್ಟು ಅವಧಿ 9 ಗಂಟೆ 41 ನಿಮಿಷಗಳು. ಆದರೆ, ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ಸೂತಕದ ನಿಯಮಗಳು ಮಧ್ಯಾಹ್ನ 02:56 ರಿಂದ ಸಂಜೆ 06:46 ರವರೆಗೆ ಮಾತ್ರ ಅನ್ವಯವಾಗುತ್ತವೆ.
44
ಸೂತಕದ ಸಮಯದಲ್ಲಿ ಎನೂ ಮಾಡಬಾರದು
1. ಸೂತಕದ ಸಮಯದಲ್ಲಿ ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು. ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ಈ ನಿಯಮದಿಂದ ವಿನಾಯಿತಿ ಇದೆ. 2. ಸೂತಕದ ಸಮಯದಲ್ಲಿ ಮಲಗಬಾರದು ಮತ್ತು ದೈಹಿಕ ಸಂಪರ್ಕವನ್ನು ಮಾಡಬಾರದು. 3. ಸೂತಕದ ಸಮಯದಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡಬಾರದು, ಆದರೆ ಮಂತ್ರಗಳನ್ನು ಜಪಿಸಬಹುದು. 4. ಗರ್ಭಿಣಿಯರು ಸೂತಕದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಬಾರದು. 5. ಸೂತಕದ ಸಮಯದಲ್ಲಿ ಸೂಜಿ, ಕತ್ತರಿ ಮುಂತಾದ ಚೂಪಾದ ವಸ್ತುಗಳನ್ನು ಬಳಸಬಾರದು.