ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವನ್ನು ನವಗ್ರಹಗಳ ರಾಜಕುಮಾರ ಅಂತ ಕರೆಯುತ್ತಾರೆ. ಬುದ್ಧಿಶಕ್ತಿ, ಮಾತು, ಶಿಕ್ಷಣ, ವ್ಯಾಪಾರ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವ ಶಕ್ತಿಗೆ ಬುಧನೇ ಕಾರಣ. ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿಯಾಗಿರುವ ಬುಧ, ಸಾಮಾನ್ಯವಾಗಿ ಒಂದು ರಾಶಿಯಲ್ಲಿ 21 ದಿನಗಳ ಕಾಲ ಇರುತ್ತಾನೆ.
ಸದ್ಯ ತನ್ನದೇ ರಾಶಿಯಾದ ಕನ್ಯಾ ರಾಶಿಯಲ್ಲಿರುವ ಬುಧ, ಸೆಪ್ಟೆಂಬರ್ 26 ರಂದು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನ ಒಡೆತನದ ತುಲಾ ರಾಶಿಗೆ ಬುಧ ಪ್ರವೇಶಿಸುತ್ತಿರುವುದು ಎಲ್ಲಾ ರಾಶಿಗಳ ಮೇಲೂ ಪ್ರಭಾವ ಬೀರಲಿದೆ. ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾದರೆ, ಇನ್ನು 3 ರಾಶಿಯವರು ಹಣಕಾಸು ಮತ್ತು ವೃತ್ತಿ ಜೀವನದಲ್ಲಿ ಎಚ್ಚರದಿಂದ ಇರಬೇಕು. ಆ 3 ರಾಶಿಗಳು ಯಾವುವು ಅಂತ ಇಲ್ಲಿ ನೋಡೋಣ.