ಎಲ್ಲೆಂದರಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ತೀರಾ? ಈ ನಾಲ್ಕು ಸ್ಥಳಗಳಲ್ಲಿ ಆಕರ್ಷಿಸಲಿವೆ Negative Enegery!

Published : Sep 03, 2025, 12:49 PM IST

ಸಾಮಾನ್ಯವಾಗಿ ಬೇರೆ ಪ್ರದೇಶಗಳಿಗೆ ಹೋದಾಗ ಫೋಟೋ ಕ್ಲಿಕ್ಕಿಸಿಕೊಂಡು ಜಾಲತಾಣದಲ್ಲಿ ಹಾಕುವುದು ಇಲ್ಲವೇ ಮೊಬೈಲ್​ನಲ್ಲಿಯೇ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಈ ನಾಲ್ಕು ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಫೋಟೋ ಕ್ಲಿಕ್ಕಿಸಿಕೊಳ್ಳಬೇಡಿ ಎನ್ನುತ್ತಾರೆ ಜ್ಯೋತಿಷಿ. ಅವು ಯಾವುವು? 

PREV
110
ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಎಚ್ಚರ

ಸಾಮಾನ್ಯವಾಗಿ ಬೇರೆ ಪ್ರದೇಶಗಳಿಗೆ ಹೋದಾಗ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಜಾಲತಾಣದಲ್ಲಿ ಹಾಕುವುದು ಇಲ್ಲವೇ ಅದನ್ನು ಮೊಬೈಲ್​ನಲ್ಲಿಯೇ ಇಟ್ಟುಕೊಂಡು ಆ ಸ್ಥಳಗಳನ್ನು ನೆನಪಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ನಾಲ್ಕು ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಫೋಟೋ ಕ್ಲಿಕ್ಕಿಸಿಕೊಳ್ಳಬೇಡಿ ಎನ್ನುತ್ತಾರೆ ಜ್ಯೋತಿಷಿ. ಅವು ಯಾವುವು?

210
ಆಳುತ್ತಿದೆ ಯಾವುದೋ ಶಕ್ತಿ

ಜ್ಯೋತಿಷಶಾಸ್ತ್ರ, ಸಂಖ್ಯಾಶಾಸ್ತ್ರವನ್ನು (astrology) ನಂಬದವರೂ ಇದ್ದಾರೆ. ಆದರೆ ಯಾವುದೋ ಒಂದು ಶಕ್ತಿ ನಮ್ಮನ್ನು ಆಳುತ್ತಿದೆ ಎನ್ನುವುದಂತೂ ಸುಳ್ಳಲ್ಲ. ಎಷ್ಟೋ ಸಂದರ್ಭಗಳಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಏನೇನೋ ವಿಚಿತ್ರ ಘಟನೆಗಳು ನಡೆದೇ ಬಿಡುತ್ತವೆ. ಹಲವು ಸಂದರ್ಭಗಳಲ್ಲಿ ಅದು ನಮ್ಮ ಅರಿವಿಗೆ ಬರುವುದೇ ಇಲ್ಲ. ಒಳ್ಳೆಯದು ಆದರೆ ಯಾಕೆ ಒಳ್ಳೆಯದಾಯಿತು ಎನ್ನುವುದನ್ನು ನಾವು ಯೋಚಿಸುವುದಿಲ್ಲ. ಆದರೆ ಕೆಟ್ಟದ್ದಾದರೆ ನಮ್ಮ ಗ್ರಹಚಾರ. ಒಳ್ಳೆಯವರಿಗೆ ಕಾಲವಿಲ್ಲ ಬಿಡಿ ಎಂದೆಲ್ಲಾ ಅಂದುಕೊಳ್ಳುವುದು ಇದೆ.

310
ಆಗುವ ಆಗುಹೋಗುಗಳಿಗೆ ಕಾರಣ

ನಮ್ಮ ಜೀವನದಲ್ಲಿ ಆಗುವ ಆಗುಹೋಗುಗಳಿಗೆ ಪ್ರತಿಯೊಂದಕ್ಕೂ ಒಂದೊಂದು ಕಾರಣ ಇದ್ದೇ ಇರುತ್ತದೆ. ಅದು ಹೀಗೆಯೇ ಎನ್ನುವುದನ್ನು ಸ್ಪಷ್ಟಪಡಿಸುವುದು ಕಷ್ಟವಾದರೂ ಅದಕ್ಕೆ ನಮ್ಮದೇ ಆದ ರೀತಿಯಲ್ಲಿ ಕೆಲವೊಮ್ಮೆ ಉತ್ತರ ಕಂಡುಕೊಂಡು, ಮತ್ತೆ ಕೆಲವೊಮ್ಮೆ ಗ್ರಹಚಾರ, ಹಣೆಬರಹ ಎಂದು ಹಳಿದುಕೊಳ್ಳುತ್ತೇವೆ.

410
ಎಲ್ಲೆಂದರಲ್ಲಿ ಫೋಟೋ ಕ್ಲಿಕ್ಕಿಸುವು ಸರಿಯಲ್ಲ

ಆದರೆ, ಇದಕ್ಕೆ ಇರುವ ಹಲವು ಕಾರಣಗಳಲ್ಲಿ, ಒಂದು ಕಾರಣ ಎಲ್ಲೆಂದರಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಸೋಷಿಯಲ್​​ ಮೀಡಿಯಾದಲ್ಲಿ ಲೈಕ್​, ಕಮೆಂಟ್​ ಬರುವ ಕಾರಣಕ್ಕೆ ಹಾಕುವುದೂ ಒಂದು ಎನ್ನುತ್ತಾರೆ ಖ್ಯಾತ ಜ್ಯೋತಿಷಿ ಗುರುಪ್ರೀತ್​ ಅವರು.

510
ನಕಾರಾತ್ಮಕ ಶಕ್ತು

ಅವರು ಹೇಳುವ ಪ್ರಕಾರ, ನಾಲ್ಕು ಸ್ಥಳಗಳಲ್ಲಿ ಫೋಟೋ ತೆಗೆಸಿಕೊಳ್ಳುವುದು ನಮ್ಮ ಜೀವನದ ಮೇಲೆ ನೆಗೆಟಿವ್​ ಪರಿಣಾಮ ಬೀರುತ್ತದೆ. ಮಾತ್ರವಲ್ಲದೇ ನಮ್ಮ ಆರೋಗ್ಯದ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಇದು ನಿಮ್ಮ ಜೀವನದಲ್ಲಿ ಹೀಗೆ ಆಗಿರಲಿಕ್ಕೆ ಸಾಕು, ಆದರೆ ಅದಕ್ಕೆ ಕಾರಣ ನಿಮಗೆ ಗೊತ್ತಿರುವುದಿಲ್ಲ ಎನ್ನುವುದು ಅವರ ಮಾತು.

610
ನಾಲ್ಕು ಸ್ಥಳಗಳಲ್ಲಿ ಫೋಟೋ ಬೇಡ

ಅವರು ಹೇಳುವ ಪ್ರಕಾರ, ನಾಲ್ಕು ಸ್ಥಳಗಳಲ್ಲಿ ಫೋಟೋ ತೆಗೆಸಿಕೊಳ್ಳುವುದು ನಮ್ಮ ಜೀವನದ ಮೇಲೆ ನೆಗೆಟಿವ್​ ಪರಿಣಾಮ ಬೀರುತ್ತದೆ. ಮಾತ್ರವಲ್ಲದೇ ನಮ್ಮ ಆರೋಗ್ಯದ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಇದು ನಿಮ್ಮ ಜೀವನದಲ್ಲಿ ಹೀಗೆ ಆಗಿರಲಿಕ್ಕೆ ಸಾಕು, ಆದರೆ ಅದಕ್ಕೆ ಕಾರಣ ನಿಮಗೆ ಗೊತ್ತಿರುವುದಿಲ್ಲ ಎನ್ನುವುದು ಅವರ ಮಾತು.

710
ಗೋಪುರದ ಕೆಳಗೆ

ಅವರ ಪ್ರಕಾರ ಗೋಪುರ (Tower) ಕೆಳಗೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಬಾರದು. ಇದು ನಿಮ್ಮ ಶಕ್ತಿಯನ್ನು ಕುಂದಿಸುವುದು ಮಾತ್ರವಲ್ಲದೇ ನೆಗೆಟಿವ್​ ಎನರ್ಜಿ ಆಕರ್ಷಿಸುತ್ತದೆ.

810
ತುಂಬಾ ವರ್ಷಗಳಿಂದ ಹಾಸಿಗೆ ಹಿಡಿದಿರುವವರು

2ನೇಯದ್ದಾಗಿ ತುಂಬಾ ವರ್ಷಗಳಿಂದ ಹಾಸಿಗೆ ಹಿಡಿದಿರುವವರು, ಅನಾರೋಗ್ಯಪೀಡಿತರಾಗಿರುವವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಬಾರದು. ಅವರ ಆರೈಕೆ ಮಾಡುವುದು ತುಂಬಾ ಒಳ್ಳೆಯದೇ. ಆದರೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಡಿ ಎನ್ನುತ್ತಾರೆ ಗುರುಪ್ರೀತ್​. ಇದರಿಂದ ನಿಮ್ಮನ್ನು ಅನಾರೋಗ್ಯ ಆಕರ್ಷಿಸುತ್ತದೆ, ಇದರಿಂದ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅವರು.

910
ಸುರಂಗ ಅಥವಾ ಗುಹೆಯ ದ್ವಾರ

3ನೇಯದ್ದಾಗಿ ಸುರಂಗ ಅಥವಾ ಗುಹೆಯ ದ್ವಾರದ ಬಳಿ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಕೂಡ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತಿದೆ. ಹೀಗೆ ಮಾಡಿದರೆ ಅದು ನಿಮ್ಮ ಆರೋಗ್ಯ ಮತ್ತು ನಿಮ್ಮ ಲಕ್​ ಮೇಲೂ ಸಾಕಷ್ಟು ಪರಿಣಾಮ ಬೀರಬಲ್ಲುದು.

1010
ಎಲಿವೇಟರ್​ ಮತ್ತು ಬೇಸ್​ಮೆಂಟ್​

4ನೇಯದ್ದಾಗಿ ಎಲಿವೇಟರ್​ ಮತ್ತು ಬೇಸ್​ಮೆಂಟ್​ಗಳಲ್ಲಿಯೂ ಫೋಟೋ ಕ್ಲಿಕ್ಕಿಸುವುದು ಒಳ್ಳೆಯದಲ್ಲ ಎನ್ನುತ್ತಾರೆ ಗುರುಪ್ರೀತ್​. ಹೀಗೆ ಮಾಡಿದರೆ ಅಲ್ಲಿಯ ಕೊಳಕುತನ ನಕಾರಾತ್ಮಕ ಶಕ್ತಿಯ ಮೂಲಕ ದೇಹ ಪ್ರವೇಶಿಸುತ್ತದೆ ಎನ್ನುವುದು ಅವರ ಮಾತು.

Read more Photos on
click me!

Recommended Stories