ಜನವರಿಯಲ್ಲಿ ಜ್ಯೋತಿಷಿ ನುಡಿದ ಚಿನ್ನ ಬೆಲೆ ಇಳಿಕೆ ಭವಿಷ್ಯ ನಿಜವಾದ ಬೆನ್ನಲ್ಲೇ ಮುಂಬರುವ ತಿಂಗಳ ಸ್ಫೋಟಕ ಪ್ರಿಡಿಕ್ಷನ್

Published : Mar 23, 2026, 06:25 PM IST

ಜನವರಿಯಲ್ಲಿ ಜ್ಯೋತಿಷಿ ನುಡಿದ ಚಿನ್ನ ಬೆಲೆ ಇಳಿಕೆ ಭವಿಷ್ಯ ನಿಜವಾದ ಬೆನ್ನಲ್ಲೇ ಮುಂಬರುವ ತಿಂಗಳ ಸ್ಫೋಟಕ ಪ್ರಿಡಿಕ್ಷನ್, ಖ್ಯಾತ ಜ್ಯೋತಿಷಿ ಇದೀಗ ಮುಂಬರುವ ತಿಂಗಳಲ್ಲಿ ಚಿನ್ನದ ಬೆಲೆ ಎಷ್ಟಾಗಲಿದೆ, ಎಲ್ಲಿಗೆ ಹೋಗಿ ನಿಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

PREV
15
ಚಿನ್ನದ ಬೆಲೆ ದಾಖಲೆಯ ಇಳಿಕೆ

ಚಿನ್ನದ ಬೆಲೆ ದಾಖಲೆಯ ಏರಿಕೆ ಕಂಡ ಬಳಿಕ ಯುದ್ಧ ಆರಂಭಗೊಳ್ಳುತ್ತಿದ್ದಂತೆ ಇಳಿಕೆಯತ್ತ ಸಾಗಿದೆ. ಇರಾನ್ ಇಸ್ರೇಲ್ ಹಾಗೂ ಅಮೆರಿಕ ಯುದ್ಧದಿಂದ ಚಿನ್ನದ ಬೆಲೆ ಗಣನೀಯ ಏರಿಕೆ ನಿರೀಕ್ಷಿಸಲಾಗಿತ್ತು. ಆದರೆ ಚಿನ್ನದ ಬೆಲೆ ಭಾರಿ ಇಳಿಕೆಯಾಗಿದೆ. ಇಂದು (ಮಾ.23) ಚಿನ್ನದ ಬೆಲೆ ಪ್ರತಿ ಗ್ರಾಂಗೆ 11 ಸಾವಿರದಿಂದ 12 ಸಾವಿರದ ಆಸುಪಾಸಿಗೆ ಇಳಿಕೆಯಾದಿದೆ.. ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಶೇಕಡಾ 7.5ರಷ್ಟು ಇಳಿಕೆಯಾಗಿದೆ. ಇದೀಗ ಮುಂದಿನ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಆಗುವ ವ್ಯತ್ಯಾಸದ ಕುರಿತು ಭವಿಷ್ಯ ನುಡಿದಿದ್ದಾರೆ.

25
ಜನವರಿಯಲ್ಲಿ ನುಡಿದ ಭವಿಷ್ಯ ನಿಜ

ಹಣದುಬ್ಬರಗಳ ನಡುವೆ ಚಿನ್ನದ ಬೆಲೆ ಸತತ ಇಳಿಕೆ ಕಾಣುತ್ತಿದೆ. ಇದೀಗ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಮುಂದಿನ ತಿಂಗಳುಲ್ಲಿ ಅಂದರೆ 2026ರಲ್ಲಿ ಚಿನ್ನದ ಬೆಲೆಯಲ್ಲಿ ಆಗುವ ವ್ಯತ್ಯಾಸ ಕುರಿತು ಭವಿಷ್ಯ ನುಡಿದಿದ್ದಾರೆ. ಜನವರಿ 2026ರಲ್ಲಿ ಚಿನ್ನದ ಬೆಲೆ ಗಗನಕ್ಕೇರಿತ್ತು. ಈ ವೇಳೆ ಚಿನ್ನ ಬೆಲೆ 11,000 ರೂಪಾಯಿಯಿಂದ 12,000 ರೂಪಾಯಿಗೆ ಇಳಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದು ನಿಜವಾಗಿದೆ.

35
ಮುಂಬರುವ ತಿಂಗಳುಗಳಲ್ಲಿ ಎಷ್ಟಾಗಲಿದೆ ಚಿನ್ನದ ಬೆಲೆ

ಪ್ರಶಾಂತ್ ಕಿಣಿ ಇದೀಗ ಮುಂಬರುವ ತಿಂಗಳುಗಳಲ್ಲಿ ಚಿನ್ನದ ಬೆಲೆ ಕುರಿತುಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದಾರೆ. ಪ್ರಮುಖವಾಗಿ ಚಿನ್ನದ ಬೆಲೆ ಬಹುತೇಕ ಸ್ಥಿರಗೊಳ್ಳಲಿದೆ. ಇದು 11 ರಿಂದ 12 ಸಾವಿರ ರೂಪಾಯಿಯಲ್ಲಿ ಸ್ಥಿರಗೊಳ್ಳಲಿದೆ. ಹೆಚ್ಚಿನ ವ್ಯತ್ಯಾಸ ಕಾಣುವುದಿಲ್ಲ ಎಂದಿದ್ದಾರೆ. 24 ಕ್ಯಾರೆಟ್ 1 ಗ್ರಾಂ ಚಿನ್ನ 11,000 ರೂಪಾಯಿಯಿಂದ 12,000 ರೂಪಾಯಿಗೆ ಸ್ಟೇಬಲ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

45
ಅಮೆರಿಕವನ್ನು ನಂಬಬೇಡಿ

ಅಮೆರಿಕವನ್ನು ಯಾವತ್ತೂ ನಂಬಬೇಡಿ ಎಂದು ಜ್ಯೋತಿಷಿ ಪ್ರಶಾಂತ್ ಕಿಣಿ ಎಚ್ಚರಿಸಿದ್ದಾರೆ. ಅಮೆರಿಕನ್ನರು ಬೇಕಾದರೆ ಚಿನ್ನದ ಬೆಲೆಯನ್ನು ಪಾತಾಳಕ್ಕೆ ಕುಸಿಯುವಂತೆ ಮಾಡುತ್ತಾರೆ ಎಂದಿದ್ದಾರೆ. ಅಮೆರಿಕವೂ ಯುದ್ಧದಿಂದ ಎಂಸಿಎಕ್ಸ್ ಗೋಲ್ಡ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಲಿದೆ ಅನ್ನೋ ಭವಿಷ್ಯ ನುಡಿದಿದ್ದರು. ಆದರೆ ಎಲ್ಲವೂ ಉಲ್ಟಾ ಆಗಿದೆ.

55
ಕಳೆದ 40 ವರ್ಷದಲ್ಲೇ ಗಣನೀಯ ಕುಸಿತ

ಗಗನಕ್ಕೇರಿದ ಚಿನ್ನದ ಬೆಲೆ ದಿಢೀರ್ ಕುಸಿತ ಕಂಡ ಕಳೆದ 40 ವರ್ಷದಲ್ಲಿ ಅತೀ ದೊಡ್ಡ ಕುಸಿತಕ್ಕೆ ಕಾರಣವಾಗಿದೆ. 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10,640 ರೂಪಾಯಿ ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 12,670 ರೂಪಾಯಿ ಹಾಗೂ 1 ಗ್ರಾಂ ಬೆಳ್ಳಿ ಬೆಲೆ 235 ರೂಪಾಯಿ ಆಗಿದೆ.

ಕಳೆದ 40 ವರ್ಷದಲ್ಲೇ ಗಣನೀಯ ಕುಸಿತ

Read more Photos on
click me!

Recommended Stories