ಅಕ್ಷಯ ತೃತೀಯ ದಿನ ಈ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ! ನಿಮಗೂ ಈ ಕನಸು ಬಿದ್ದಿದೆಯಾ?

Published : Apr 18, 2026, 12:48 PM IST

ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಬೀಳುವ ಕನಸುಗಳು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದು ನಂಬಲಾಗಿದೆ. ಹಾಗಾದರೆ, ಯಾವ ಕನಸು ಕಂಡರೆ ಏನು ಫಲ ಸಿಗುತ್ತದೆ ಎಂದು ನಿಮಗೆ ಗೊತ್ತಾ? ಇಲ್ಲಿದೆ ಮಾಹಿತಿ.

PREV
16
ಅಕ್ಷಯ ತೃತೀಯ

ಅಕ್ಷಯ ತೃತೀಯ ಅಂದ ತಕ್ಷಣ ಎಲ್ಲರೂ ಚಿನ್ನ, ಬೆಳ್ಳಿ ಖರೀದಿಸಲು ಮುಂದಾಗುತ್ತಾರೆ. ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆ ಇರಲಿ ಎಂದು ಪೂಜೆ ಮಾಡುತ್ತಾರೆ. ಅಷ್ಟೇ ಅಲ್ಲ, ಈ ದಿನ ಮಾಡುವ ಯಾವುದೇ ಶುಭಕಾರ್ಯ ಅಥವಾ ದಾನ-ಧರ್ಮಕ್ಕೆ ದುಪ್ಪಟ್ಟು ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. 

26
ಅಕ್ಷಯ ತೃತೀಯಗೂ ಕನಸಿಗೂ ಸಂಬಂಧವಿದೆ

ಆದರೆ, ಈ ಹಬ್ಬಕ್ಕೂ ಮತ್ತು ಕನಸುಗಳಿಗೂ ಒಂದು ಸಂಬಂಧವಿದೆ. ಈ ಸಮಯದಲ್ಲಿ ಬೀಳುವ ಕನಸುಗಳು ನಮ್ಮ ಭವಿಷ್ಯದ ಬಗ್ಗೆ ಶುಭ ಸಂಕೇತಗಳನ್ನು ನೀಡುತ್ತವೆ. ಹಾಗಾದರೆ, ಯಾವ ಕನಸು ಕಂಡರೆ ನಿಮಗೆ ಶುಭವಾಗಲಿದೆ ಎಂದು ಈಗ ನೋಡೋಣ ಬನ್ನಿ.

36
ನಿಮ್ಮ ಕನಸಿನಲ್ಲಿ ಇವು ಕಾಣಿಸುತ್ತಿವೆಯೇ?

1. ಚಿನ್ನ ಅಥವಾ ಆಭರಣಗಳು: ಅಕ್ಷಯ ತೃತೀಯದ ಹಿಂದಿನ ದಿನ ಅಥವಾ ಅದೇ ದಿನ ನಿಮ್ಮ ಕನಸಿನಲ್ಲಿ ಚಿನ್ನ, ಬೆಳ್ಳಿ ಅಥವಾ ಯಾವುದೇ ಆಭರಣಗಳು ಕಾಣಿಸಿಕೊಂಡರೆ, ನಿಮ್ಮ ಜೀವನದಲ್ಲಿ ಧನವೃಷ್ಟಿಯಾಗಲಿದೆ ಎಂದರ್ಥ. ನಿಮಗೆ ಯಾವುದಾದರೂ ಮೂಲದಿಂದ ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ. 

46
2. ಕನಸಿನಲ್ಲಿ ಲಕ್ಷ್ಮಿ ದೇವಿ:

ಅಕ್ಷಯ ತೃತೀಯದ ಸಮಯದಲ್ಲಿ ನಿಮ್ಮ ಕನಸಿನಲ್ಲಿ ಲಕ್ಷ್ಮಿ ದೇವಿ ಕಾಣಿಸಿಕೊಂಡರೆ, ನಿಮ್ಮಷ್ಟು ಅದೃಷ್ಟವಂತರು ಬೇರೊಬ್ಬರಿಲ್ಲ. ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಲಕ್ಷ್ಮಿ ದೇವಿಯ ಸಂಪೂರ್ಣ ಕೃಪಾಕಟಾಕ್ಷ ನಿಮ್ಮ ಮೇಲಿರುತ್ತದೆ ಮತ್ತು ನಿಮ್ಮ ಅದೃಷ್ಟ ದುಪ್ಪಟ್ಟಾಗುತ್ತದೆ.

56
ಶುದ್ಧ ನೀರನ್ನು ನೋಡುವುದು

ಶುದ್ಧ ನೀರು, ಹರಿಯುವ ನದಿ ಅಥವಾ ಜಲಪಾತವನ್ನು ಕನಸಿನಲ್ಲಿ ನೋಡುವುದು ಮಾನಸಿಕ ಶಾಂತಿ ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳ ಸಂಕೇತವಾಗಿದೆ. ಮುಂಬರುವ ದಿನಗಳು ಶಾಂತಿಯುತವಾಗಿ ಮತ್ತು ಸಮತೋಲನದಿಂದ ಕೂಡಿರುತ್ತವೆ ಎಂದು ಈ ಕನಸು ಸೂಚಿಸುತ್ತದೆ. 

66
ದೇವಸ್ಥಾನಕ್ಕೆ ಹೋಗುವುದು, ಪೂಜೆ ಮಾಡುವುದು:

ನಿಮ್ಮ ಕನಸಿನಲ್ಲಿ ದೇವಸ್ಥಾನ ಕಂಡರೆ ಅಥವಾ ನೀವು ಪೂಜೆ ಮಾಡುತ್ತಿರುವಂತೆ ಕಂಡರೆ, ನೀವು ಶೀಘ್ರದಲ್ಲೇ ಶುಭ ಸುದ್ದಿ ಕೇಳಲಿದ್ದೀರಿ ಎಂದರ್ಥ. ಇದನ್ನು ಹೊಸ ಶುಭ ಅವಕಾಶಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜೀವನದಲ್ಲಿ ಪಾಸಿಟಿವಿಟಿ ಹೆಚ್ಚಾಗುತ್ತದೆ. 

ಸೂರ್ಯ ಅಥವಾ ಬೆಳಕನ್ನು ನೋಡುವುದು: ನಿಮ್ಮ ಕನಸಿನಲ್ಲಿ ಉದಯಿಸುವ ಸೂರ್ಯ ಅಥವಾ ಪ್ರಕಾಶಮಾನವಾದ ಬೆಳಕನ್ನು ನೋಡುವುದು ಜೀವನದಲ್ಲಿ ಹೊಸ ಅವಕಾಶ, ಯಶಸ್ಸು ಮತ್ತು ಹೊಸ ಆರಂಭದ ಸಂಕೇತವಾಗಿದೆ. ಇದು ಭವಿಷ್ಯದಲ್ಲಿ ಸಿಗುವ ಪ್ರಗತಿ ಮತ್ತು ಯಶಸ್ಸನ್ನು ಸೂಚಿಸುತ್ತದೆ.

Read more Photos on
click me!

Recommended Stories