ಕುಂಭ ರಾಶಿಯವರ ಮೇಲೆ ಅಂಗಾರಕನ ಪ್ರಭಾವ ಇರುತ್ತದೆ. ಇದು ನಿಮ್ಮ ಕಠಿಣ ಪರಿಶ್ರಮ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗ, ವ್ಯಾಪಾರದಲ್ಲಿ ಹೊಸ ಅವಕಾಶಗಳು ಸಿಗಬಹುದು. ಆಕಸ್ಮಿಕ ಧನಲಾಭದ ಯೋಗವಿದೆ. ವ್ಯಾಪಾರಿಗಳು ವ್ಯಾಪಾರ ವಿಸ್ತರಣೆಗೆ ಅವಕಾಶ ಪಡೆಯಬಹುದು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.