ಜಸ್ಟ್‌ 599 ರೂಪಾಯಿಯಲ್ಲಿ  ಸಿಗ್ತಿದೆ ₹33,999 ಬೆಲೆಯ Vivo V40e 5G AI ಸ್ಮಾರ್ಟ್‌ಫೋನ್

By Mahmad Rafik  |  First Published Dec 4, 2024, 5:18 PM IST

ವಿವೋ V40e 5G ಸ್ಮಾರ್ಟ್‌ಫೋನ್ ಅನ್ನು ಕೇವಲ ₹599ಕ್ಕೆ ಖರೀದಿಸುವ ಅವಕಾಶ. ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನಿನ ಮೇಲೆ ಭಾರಿ ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಆಫರ್ ಲಭ್ಯ.


Vivo V40e 5G AI Smartphone: ಸದ್ಯ ನೀವೇನಾದ್ರೂ ವಿವೋ ಕಂಪನಿಯ ಸ್ಮಾರ್ಟ್‌ಫೋನ್ ಖರೀದಿಸಲು ಪ್ಲಾನ್ ಮಾಡಿಕೊಂಡಿದ್ರೆ ನಿಮಗೊಂದು ಸಂತಸದ ಸುದ್ದಿ ಬಂದಿದೆ. ಕಡಿಮೆ ಬೆಲೆಯಲ್ಲಿ Vivo V40e 5G ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳುವ ಅವಕಾಶ ಬಂದಿದೆ. ಕೆಲ ಪ್ರಕ್ರಿಯೆ ಅನುಸರಿಸಿದ್ರೆ ಸುಂದರ ಮತ್ತು ಅತ್ಯಾಕರ್ಷಕ Royal Bronze ಬಣ್ಣದ ಸ್ಮಾರ್ಟ್‌ಫೋನ್ ಹಿಡಿದು ಓಡಾಡಬಹುದು.  ಫ್ಲಿಪ್‌ಕಾರ್ಟ್ (Flipkart) ಡೀಲ್ ಪ್ರಕಾರ, ಈ ಸ್ಮಾರ್ಟ್‌ಫೋನ್‌ನ್ನು ಗ್ರಾಹಕರು ಕೇವಲ 599 ರೂಪಾಯಿಯಲ್ಲಿ ಖರೀದಿಸಬಹುದು.  ಗ್ರಾಹಕರಿಗಾಗಿ ಫ್ಲಿಪ್‌ಕಾರ್ಟ್ ಧಮಾಕಾ ಆಫರ್ ನೀಡಿದೆ.  ಹೇಗೆ Vivo V40e 5G ಸ್ಮಾರ್ಟ್‌ಫೋನ್‌ನ್ನು 599 ರೂಪಾಯಿ ಖರೀದಿಸಬೇಕು ಎಂಬುದನ್ನು ನೋಡೋಣ ಬನ್ನಿ. 

Vivo V40e 5G ಸ್ಮಾರ್ಟ್‌ಫೋನ್ ಮೂಲ ಬೆಲೆ 33,999 ರೂ.ಗಳಾಗಿದ್ದು, ಸದ್ಯ ಫ್ಲಿಪ್‌ಕಾರ್ಟ್ ಸೇರಿದಂತೆ ವಿವಿಧ ಇ-ಕಾಮರ್ಸ್‌ ವೇದಿಕೆಯಲ್ಲಿ 28,999 ರೂಪಾಯಿಗೆ ಮಾರಾಟವಾಗುತ್ತಿದೆ.  ಇದರರ್ಥ ನಿಮಗೆ ನೇರವಾಗಿ ಬರೋಬ್ಬರಿ 5,000 ರೂ.ವರೆಗಿನ ಬಿಗ್ ಡಿಸ್ಕೌಂಟ್ ಲಭ್ಯವಾಗಲಿದೆ. Vivo V40e 5G ಸ್ಮಾರ್ಟ್‌ಫೋನ್ 8GB RAM ಮತ್ತು 128GB ROM ಸ್ಟೋರೇಜ್ ಹೊಂದಿದೆ. 

Tap to resize

Latest Videos

ಇನ್‌ಸ್ಟಂಟ್ ಡಿಸ್ಕೌಂಟ್ ಜೊತೆಯಲ್ಲಿ ವಿವೋ ಸ್ಮಾರ್ಟ್‌ಫೋನ್ ಮೇಲೆ ಬ್ಯಾಂಕ್ ಆಫರ್ ಸಹ ಸಿಗಲಿದೆ. ಈ ಸ್ಮಾರ್ಟ್‌ಫೋನ್ Flipkart Axis Bank Credit Card ಮಾಧ್ಯಮದ ಮೂಲಕ ಖರೀದಿಸಿದ್ರೆ ಶೇ.5ರಷ್ಟು ಅನ್‌ಲಿಮಿಟೆಡ್ ಕ್ಯಾಶ್‌ಬ್ಯಾಕ್ ಸಿಗಲಿದೆ.  ಇಷ್ಟು ಮಾತ್ರವಲ್ಲ ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮತ್ತು  Non EMI ಮೇಲೆ 1,500 ರೂ.ಗಳಷ್ಟು ರಿಯಾಯ್ತಿ ಸಿಗಲಿದೆ.  ಇಎಂಐ ಖರೀದಿದಾರರಿಗೆ 2000 ರೂಪಾಯಿ ಆಫ್ ಲಭ್ಯವಾಗುತ್ತದೆ. ಹೀಗೆ ಮಾಡುವುದರಿಂದ ನೀವು 28,999 ರೂ ಬದಲಿಗೆ ಫೋನ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಬ್ಯಾಂಕ್‌ ಆಫರ್‌ನ್ನು ಫ್ಲಿಪ್‌ಕಾರ್ಟ್ ಮೂಲಕ ನೀಡಲಾಗುತ್ತಿದೆ. 

ಈ ಸ್ಮಾರ್ಟ್‌ಫೋನ್ ಖರೀದಿಯಲ್ಲಿನ ಮತ್ತೊಂದು ವಿಶೇಷತೆ ಏನಂದ್ರೆ ಎಕ್ಸ್‌ಚೇಂಜ್ ಆಫರ್.  ಈ Vivo V40e 5G ಸ್ಮಾರ್ಟ್‌ಫೋನಿನ  ಲಿಸ್ಟಿಂಗ್ ಬೆಲೆ 28,999 ರೂಪಾಯಿ ಆಗಿದೆ. ಈ ಫೋನಿನ ಖರೀದಿಯಲ್ಲಿ 28,400 ರೂ.ವರೆಗಿನ ಎಕ್ಸ್‌ಚೇಂಜ್ ಆಫರ್ ಪಡೆದುಕೊಳ್ಳುವ ಅವಕಾಶ ಗ್ರಾಹಕರಿಗೆ ಸಿಗುತ್ತಿದೆ.  ಈ ಎಕ್ಸ್‌ಚೇಂಜ್ ಆಫರ್ ಸದ್ಬಳಕೆ ಮಾಡಿಕೊಂಡರೆ Vivo V40e 5G ಸ್ಮಾರ್ಟ್‌ಫೋನ್ ಕೇವಲ 599 ರೂಪಾಯಿಯಲ್ಲಿ ಲಭ್ಯವಾಗಲಿದೆ.

ಇದನ್ನೂ ಓದಿ: 50MP+2MP ಕ್ಯಾಮೆರಾವುಳ್ಳ ಮೋಟೋ ಜಿ45 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ರಿಯಾಯ್ತಿ

ಈ ಎಕ್ಸ್‌ಚೇಂಜ್ ಆಫರ್ ನಿಮ್ಮದಾಗಬೇಕಾದ್ರೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಒಳ್ಳೆಯ ಕಂಡೀಷನ್‌ನಲ್ಲಿರಬೇಕು.  ಫೋನ್ ಮೇಲೆ ಯಾವುದೇ ಸ್ಕ್ರ್ಯಾಚ್‌ ಮತ್ತು ಹಾನಿಯಾಗಬಾರದು. ಫೋನ್ ಕಂಡೀಷನ್ ಪರಿಶೀಲನೆ ಬಳಿಕವೇ ಅದರ ಬೆಲೆಯನ್ನು ತಜ್ಞರು ನಿಗಧಿ ಮಾಡುತ್ತಾರೆ. ಎಕ್ಸ್‌ಚೇಂಜ್ ಆಫರ್ ಅಡಿಯಲ್ಲಿ ನಿಮ್ಮ ಹಳೆಯ ಫೋನ್ ಬೆಲೆಯನ್ನು ಕಡಿಮೆ ಮಾಡಿ Vivo V40e 5G ದರ ನಿಗಧಿ ಮಾಡಲಾಗುತ್ತದೆ. ನಿಮ್ಮ ಹಳೆ ಸ್ಮಾರ್ಟ್‌ಫೋನ್ ಡ್ಯಾಮೇಜ್ ಆಗಿದ್ದರೂ 5,000 ರೂ.ಗಳವರೆಗೆ ಡಿಸ್ಕೌಂಟ್ ಸಿಗಲಿದೆ.

Vivo V40e 5G ಸ್ಮಾರ್ಟ್‌ಫೋನ್ ಫೀಚರ್‌
ಈ ಸ್ಮಾರ್ಟ್‌ಫೋನ್ 6.77 ಇಂಚಿನ FHD+ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್‌ನೊಂದಿಗೆ ಲಭ್ಯವಾಗಲಿದೆ. 80 ವ್ಯಾಟ್‌ ಚಾರ್ಜಿಂಗ್ ಜೊತೆ 5500mAh ಬ್ಯಾಟರಿಯನ್ನು ಹೊಂದಿದೆ.  ಫೋಟೋಗ್ರಾಫಿಗಾಗಿ ಪ್ರೈಮರಿ 50MP ಕ್ಯಾಮೆರಾ ಮತ್ತು 8MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಸಹ ಇದೆ. ಇನ್ನು ಸೆಲ್ಫಿಗಾಗಿ 50MP ಕ್ಯಾಮೆರಾ ನೀಡಲಾಗಿದೆ. MediaTek Dimensity 7300 ಪ್ರೊಸೆಸರ್,  8GB  RAM ಜೊತೆ 256GB ಸ್ಟೋರೇಜ್ ಜೊತೆ ಸಿಗಲಿದೆ.

ಇದನ್ನೂ ಓದಿ: ವಿವೋದಿಂದ ಹೊಸ 5G ಸ್ಮಾರ್ಟ್‌ಫೋನ್; 128GB ಸ್ಫೋರೇಜ್ ಜೊತೆ ಸಿಗುತ್ತೆ DSLR ಗುಣಮಟ್ಟದ ಕ್ಯಾಮೆರಾ

click me!