ಪವರ್‌ಫುಲ್ ಫೀಚರ್ಸ್ ಜೊತೆ ಬರ್ತಿದೆ Samsung ಹೊಸ ಸಿರೀಸ್; ಹೆಚ್ಚಾಯ್ತು OnePlusಗೆ ಟೆನ್ಷನ್

By Mahmad Rafik  |  First Published Dec 26, 2024, 8:12 PM IST

Samsung Galaxy S25 ಸರಣಿಯು ಜನವರಿ 22, 2025 ರಂದು ಬಿಡುಗಡೆಯಾಗಲಿದೆ. ಹೊಸ ಸರಣಿಯು Galaxy S25, S25 Plus, S25 Ultra, ಮತ್ತು S25 Slim ಅನ್ನು ಒಳಗೊಂಡಿರಲಿದೆ. ಕ್ಯಾಮೆರಾ, ಸ್ಟೋರೇಜ್ ಸೇರಿದಂತೆ ಇನ್ನಿತರ ಫೀಚರ್ಸ್ ಮಾಹಿತಿ


Samsung Galaxy S25: ಹೊಸ ವರ್ಷಕ್ಕೆ ಮಾರುಕಟ್ಟೆಗೆ ಹಲವು ನೂತನ ಸ್ಮಾರ್ಟ್‌ಫೋನ್‌ಗಳು ಬರುತ್ತಿವೆ. ಇಷ್ಟು ಮಾತ್ರವಲ್ಲ ಸ್ಪರ್ಧೆಯಲ್ಲಿರುವ ದೈತ್ಯ ಕಂಪನಿಗಳು ಅತ್ಯಧಿಕ ಫೀಚರ್ಸ್ ಜೊತೆ ಕೈಗೆಟುಕುವ ದರದಲ್ಲಿಯೇ ಹೊಸ 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸುತ್ತಿವೆ.  OnePlus 13, OnePlus 13R ಜೊತೆ Samsung ಪ್ರೀಮಿಯಂ ಫೀಚರ್ಸ್ ಹೊಂದಿರುವ  Galaxy S25 Series ಲಾಂಚ್ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸ್ಯಾಮ್‌ಸಂಗ್ ಕಂಪನಿಯ ನ್ಯೂ ಲಾಂಚ್ ಡಿವೈಸ್ ಕುರಿತ ಕೆಲ ಮಾಹಿತಿ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ.

ಸ್ಯಾಮ್‌ಸಂಗ್ ಕಂಪನಿಯ ಅಪ್‌ಕಮ್ಮಿಂಗ್ ಸಿರೀಸ್ ಮುಂದಿನ ವರ್ಷ  ಅಂದ್ರೆ  22ನೇ ಜನವರಿ 2025ರಂದು ಬಿಡುಗಡೆಯಾಗಲಿದೆ ಎಂದು Fnnews ವರದಿ ಮಾಡಿದೆ. ಕೇವಲ ಲಾಂಚ್ ಡೇಟ್ ಮಾತ್ರವಲ್ಲ ಮಾರುಕಟ್ಟೆಯಲ್ಲಿ ಸೇಲ್‌ಗೆ ಬರುವ ದಿನಾಂಕವೂ ಲೀಕ್ ಆಗಿದೆ. Samsung Galaxy S25 Series ಫೆಬ್ರವರಿ 7ರ ನಂತರ ಜನರ ಕೈಗೆ ಸಿಗಲಿದೆ ಎಂದು ವರದಿಯಾಗಿದೆ. ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗಾಗಿ ಸ್ಯಾಮ್‌ಸಂಗ್ ಅತಿದೊಡ್ಡ ಇವೆಂಟ್ ಆಯೋಜನೆ ಮಾಡಿದೆ. 

Tap to resize

Latest Videos

undefined

ಜನವರಿ 22ರಂದು Samsung Galaxy S25 Series ಪರಿಚಯಿಸಿದ್ರೂ ಅದೇ ದಿನ ಮಾರುಕಟ್ಟೆಗೆ ಬಿಡುಗಡೆ ಮಾಡಲ್ಲ. ಬದಲಾಗಿ ಕಂಪನಿ ಪ್ರಿ ಬುಕ್ಕಿಂಗ್ ಆರಂಭಿಸುವ ಸಾಧ್ಯತೆಗಳಿವೆ. ಪ್ರಿ ಬುಕ್ಕಿಂಗ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಜನವರಿ 22ರ ಇವೆಂಟ್‌ನಲ್ಲಿ ಸ್ಯಾಮ್‌ಸಂಗ್ ಹೊಸ ಸಿರೀಸ್‌ಗಳಾದ ಗ್ಯಾಲಕ್ಸಿ ಎಸ್‌25, ಗ್ಯಾಲಕ್ಸಿ ಎಸ್‌25 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್ 25 ಪ್ಲಸ್ ಅಲ್ಟ್ರಾ ಪರಿಚಯಿಸುವ ನಿರೀಕ್ಷೆಗಳಿವೆ. ಇವುಗಳ ಜೊತೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌25 ಸ್ಲಿಮ್ ಸಹ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸ್ಯಾಮ್‌ಸಂಗ್‌ ಶಾಕ್ ಕೊಟ್ಟ ನೋಕಿಯಾ; ₹4999ಯಲ್ಲಿ 75Hz ಡಿಸ್‌ಪ್ಲೇ, 5000mah ಬ್ಯಾಟರಿ 5G ಸ್ಮಾರ್ಟ್‌ಫೋನ್

Samsung Galaxy Unpacked Eventನಲ್ಲಿ ಲಾಂಚ್ ಆಗಲಿರುವ  Galaxy S25 Ultra 5G ಸ್ಮಾರ್ಟ್‌ಫೋನ್ 16 GB RAM ಮತ್ತು  1 TB ಇಂಟರ್ನಲ್ ಸ್ಫೋರೇಜ್ ಆಫ್ಷನ್ ಲಭ್ಯವಿರೋ ಸಾಧ್ಯತೆಗಳಿವೆ. ಇದೇ ಡಿವೈಸ್‌ನಲ್ಲಿ ಸ್ಪೀಟ್ ಮತ್ತು ಮಲ್ಟಿಟಾಸ್ಕಿಂಗ್‌ಗಾಗಿ Qualcomm Snapdragon 8 Elite processor ಬಳಕೆಯಾಗಿರೋ ಬಗ್ಗೆ ಅನುಮಾನಗಳಿವೆ. ವರದಿಗಳ ಪ್ರಕಾರ, ಅಲ್ಟ್ರಾ ವೇರಿಯಂಟ್‌ನಲ್ಲಿ ಹೊಸ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿರಲಿದೆ. 

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌25, ಗ್ಯಾಲಕ್ಸಿ ಎಸ್‌25 ಪ್ಲಸ್ ನಲ್ಲಿ 12 GB RAM ಇರಲಿದೆ ಎಂದು ಅಂದಾಜಿಸಲಾಗಿದೆ. ಇದೇ  ಅನ್‌ಪ್ಯಾಕಡ್ ಇವೆಂಟ್‌ ನಲ್ಲಿ AI ಆಧಾರಿತ ರಿಂಗ್ಸ್ ಮತ್ತು ಸನ್‌ ಗ್ಲಾಸ್ ಪರಿಚಯಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಸ್ಯಾಮ್‌ಸಂಗ್ ಏಕಕಾಲದಲ್ಲಿ ಇಷ್ಟೊಂದು ಸ್ಮಾರ್ಟ್‌ಫೋನ್ ಪರಿಚಯಿಸುತ್ತಿರೋದರಿಂದ ಒನ್ ಪ್ಲಸ್‌ಗೆ ಸಹಜವಾಗಿಯೇ ಟೆನ್ಷನ್ ಶುರುವಾಗುತ್ತೆ ಎಂದು ಮಾರುಕಟ್ಟೆ ತಜ್ಞರು ಊಹೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಾರುಕಟ್ಟೆಗೆ ಬಂತು ಒಪ್ಪೋ ಎ5 ಫ್ರೊ 6000mAh ಬ್ಯಾಟರಿ ಫೋನ್; ಬೆಲೆ ಎಷ್ಟು ಗೊತ್ತಾ?

click me!