ಹಲವು ಸೋರಿಕೆಗಳು ಮತ್ತು ಊಹಾಪೋಹಗಳ ನಂತರ, ಓಪ್ಪೋ ಅಂತಿಮವಾಗಿ ಮಾರುಕಟ್ಟೆಯಲ್ಲಿ ತನ್ನ ಮೊದಲ ಟ್ಯಾಬ್ಲೆಟನ್ನು ಬಿಡುಗಡೆ ಮಾಡಿದೆ. ಒಪ್ಪೋ ಪ್ಯಾಡ್ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
Tech Desk: ಹಲವು ಸೋರಿಕೆಗಳು ಮತ್ತು ಊಹಾಪೋಹಗಳ ನಂತರ, ಓಪ್ಪೋ ಅಂತಿಮವಾಗಿ ಮಾರುಕಟ್ಟೆಯಲ್ಲಿ ತನ್ನ ಮೊದಲ ಟ್ಯಾಬ್ಲೆಟನ್ನು ಬಿಡುಗಡೆ ಮಾಡಿದೆ. ಒಪ್ಪೋ ಪ್ಯಾಡ್ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಓಪ್ಪೋ ತನ್ನ ಮೊದಲ ಟ್ಯಾಬ್ಲೇಟ್ ಬಿಡುಗಡೆ ಮಾಡಲಿದೆ ಎಂಬ ಸುದ್ದಿಗಳಿ ಹರಿದಾಡಿದ್ದವು. ಓಪ್ಪೋ ಪ್ಯಾಡ್ ಪ್ರಬಲ Qualcomm Snapdragon 870 SoC ನಿಂದ ಚಾಲಿತವಾಗಿದ್ದು 120Hz ರಿಫ್ರೆಶ್ ದರದೊಂದಿಗೆ 11-ಇಂಚಿನ ಎಲ್‌ಸಿಡಿ ಡಿಸ್ಪಲೇ ಹೊಂದಿದೆ. ಓಪ್ಪೋ ಪ್ಯಾಡ್, ಓಪ್ಪೋ ಪೆನ್ಸಿಲ್ ಸ್ಟೈಲಸನ್ನು ಸಹ ಬೆಂಬಲಿಸುವುದಲ್ಲದೇ ಸಾಧನದೊಂದಿಗೆ ಬರುತ್ತದೆ.
ಓಪ್ಪೋ ಮಾರುಕಟ್ಟೆಯಲ್ಲಿ ಟ್ಯಾಬ್ಲೆಟನ್ನು ಬಿಡುಗಡೆ ಮಾಡಿದ ಇತ್ತೀಚಿನ ಸ್ಮಾರ್ಟ್‌ಫೋನ್ ಕಂಪನಿಯಾಗಿದೆ. ಈ ಹಿಂದೆ ರಿಯಲ್‌ಮಿ, ಸ್ಯಾಮಸಂಗ್ ಮತ್ತು ಮೊಟೊರೊಲಾ ಮಾರುಕಟ್ಟೆಯಲ್ಲಿ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿದ್ದವು. ಓಪ್ಪೋ ಭಾರತೀಯ ಮಾರುಕಟ್ಟೆಯಲ್ಲಿ ಟ್ಯಾಬ್ಲೆಟನ್ನು ಬಿಡುಗಡೆ ಮಾಡುವ ಯೋಜನೆಯನ್ನು ಇನ್ನೂ ಪ್ರಕಟಿಸಿಲ್ಲ. ಇದು ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಅನಾವರಣಗೊಂಡಿದೆ.
ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾದ Samsung Galaxy Tab S8: ಏನೆಲ್ಲ ವಿಶೇಷತೆ ಇದೆ?
ಓಪ್ಪೋ ಪ್ಯಾಡ್: ಬೆಲೆ ಮತ್ತು ಲಭ್ಯತೆ: Oppo Padಅನ್ನು ಚೀನಾದಲ್ಲಿ 6GB+128GB ರೂಪಾಂತರಕ್ಕಾಗಿ CNY 2,299 (ಸುಮಾರು ರೂ. 27,370) ನಲ್ಲಿ ಬಿಡುಗಡೆ ಮಾಡಲಾಗಿದ್ದು 6GB+256GB ಬೆಲೆ CNY 2,699 (ಸುಮಾರು ರೂ. 32,160) ಆಗಿದೆ. ಟಾಪ್-ಎಂಡ್ ವೇರಿಯಂಟ್ 8GB ಮತ್ತು 256GB ಸ್ಟೋರೇಜ್ CNY 2,999 (ಸುಮಾರು ರೂ. 35,720) ಬೆಲೆಯಲ್ಲಿ ಲಭ್ಯವಿದೆ. ಟ್ಯಾಬ್ಲೆಟ್ ಅನ್ನು ಕಪ್ಪು ಮತ್ತು ನೇರಳೆ ಸೇರಿದಂತೆ ಎರಡು ಬಣ್ಣ ಆಯ್ಕೆಗಳಲ್ಲಿ ನೀಡಲಾಗಿದೆ.
ಓಪ್ಪೋ ಇತರ ಎರಡು ರೂಪಾಂತರಗಳಿಗಿಂತ ಹೆಚ್ಚಿನ ಬೆಲೆಯ ವಿಶೇಷ ಕಲಾವಿದ ಆವೃತ್ತಿಯನ್ನು ( Artist edition) ಸಹ ಬಿಡುಗಡೆ ಮಾಡಿದೆ. ಟ್ಯಾಬ್ಲೆಟ್‌ನ ಬೆಲೆ CNY 3,499 (ಸುಮಾರು ರೂ. 41,700)ಗೆ ನಿಗದಿಪಡಿಸಲಾಗಿದೆ. ಟ್ಯಾಬ್ಲೆಟ್‌ನ ಭಾರತದ ಲಭ್ಯತೆ ಬಗ್ಗೆ ಕಂಪನಿ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: Cyber Crime: ಸೈಬರ್ ದಾಳಿ ಸರ್ಕಾರದ ಗಮನಕ್ಕೆ ತನ್ನಿ: ರಾಜೀವ್ ಚಂದ್ರಶೇಖರ್
ಓಪ್ಪೋ ಪ್ಯಾಡ್: ವಿಶೇಷಣಗಳು: Oppo Pad 2,560×1,600 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 11-ಇಂಚಿನ LCD ಪರದೆಯನ್ನು ಹೊಂದಿದೆ. ಡಿಸ್ಪಲೇ 120Hz ಹೆಚ್ಚಿನ ರಿಫ್ರೆಶ್ ದರ ಮತ್ತು 120Hzನ ಟಚ್ ಸ್ಯಾಪ್ಲಿಂಗ್ ದರದೊಂದಿಗೆ ಬರುತ್ತದೆ. ಇದು HDR10 ಅನ್ನು ಸಹ ಬೆಂಬಲಿಸುತ್ತದೆ. ಓಪ್ಪೋ ಪ್ಯಾಡ್ Qualcomm Snapdragon 870 SoC ಮೂಲಕ 8GB RAM ಮತ್ತು 256GB UFS 3.1 ಸ್ಟೋರೇಜ್ ಹೊಂದಿದೆ. ಓಪ್ಪೋ ಪ್ಯಾಡ್ ಬಾಕ್ಸ್ ಹೊರಗೆ Android 11ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ColorOS 12 ಆಧರಿಸಿದೆ.
ಓಪ್ಪೋ ಪ್ಯಾಡ್ ಹಿಂಭಾಗದಲ್ಲಿ 13-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 8,360mAh ಬ್ಯಾಟರಿಯನ್ನು ಹೊಂದಿದೆ. ಓಪ್ಪೋ ಪ್ಯಾಡ್ ನಾಲ್ಕು 1.8-1.9cm ಸ್ವತಂತ್ರ ಸೌಂಡ್ ಚೇಂಬರ್‌ಗಳನ್ನು ಹೊಂದಿರುವ ಕ್ವಾಡ್-ಸ್ಪೀಕರ್ ಸೆಟಪನ್ನು ಒಳಗೊಂಡಿದೆ. ಸ್ಪೀಕರ್‌ಗಳು ಡಾಲ್ಬಿ ಅಟ್ಮಾಸ್ ಮತ್ತು ಹೈ-ರೆಸ್ ಆಡಿಯೊವನ್ನು ಬೆಂಬಲಿಸುತ್ತವೆ