ಭಾರತದಲ್ಲಿ ಬಿಡುಗಡೆಯಾಗಲಿದೆ ಕೈಗೆಟುಕುವ ಬೆಲೆಯ ಒನ್‌ಪ್ಲಸ್ 4K ಸ್ಮಾರ್ಟ್ ಟಿವಿ

By Suvarna News  |  First Published Apr 5, 2022, 3:47 PM IST

ಕಳೆದ ವಾರ ಭಾರತದಲ್ಲಿ OnePlus 10 Pro ಮತ್ತು Bullets Wireless Z2 ಬಿಡುಗಡೆ ಮಾಡಿದ ನಂತರ, ಟೆಕ್ ದೈತ್ಯ 4Kಬೆಂಬಲದೊಂದಿಗೆ ಹೊಸ ಸ್ಮಾರ್ಟ್ ಟಿವಿಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಇದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ
 


OnePlus TV Y1S Pro 43-inch: ಭಾರತದಲ್ಲಿ ಕಳೆದ ವಾರ ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 10 Pro ಮತ್ತು Bullets Wireless Z2  ಬಿಡುಗಡೆ ಮಾಡಿದ ನಂತರ, ಟೆಕ್ ದೈತ್ಯ 4K ಮತ್ತು Dolby Atmosಬೆಂಬಲದೊಂದಿಗೆ ಹೊಸ ಸ್ಮಾರ್ಟ್ ಟಿವಿಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಮುಂಬರುವ OnePlus TV Y1S Pro 43-inch  ಅಧಿಕೃತ ಬಿಡುಗಡೆಗೆ ಮುಂಚಿತವಾಗಿ Amazon India ವೆಬ್‌ಸೈಟ್‌ನಲ್ಲಿ ಈಗಾಗಲೇ ಪಟ್ಟಿ ಮಾಡಲಾಗಿದೆ. OnePlus TV Y1S Pro 43-inch  ಬೆಲೆಯನ್ನು ಏಪ್ರಿಲ್ 7 ರಂದು ಘೋಷಿಸಲಾಗುವುದು ಎಂದು ಅಮೆಝಾನ್‌ನಲ್ಲಿ ತಿಳಿಸಲಾಗಿದೆ.

OnePlus TV Y1S Pro 43-inch  'ನೋಟಿಫೈ ಮಿ' ಆಯ್ಕೆಯೊಂದಿಗೆ ಪಟ್ಟಿಮಾಡಲಾಗಿದೆ, ಅದರ ಮೇಲೆ ಕ್ಲಿಕ್ ಮಾಡುವುದರಿಂದ ಸಾಧನವು ಖರೀದಿಗೆ ಲಭ್ಯವಾದ ತಕ್ಷಣ ಸ್ಟಾಕ್ ವಿವರಗಳನ್ನು ಒದಗಿಸುತ್ತದೆ. ಬೆಲೆ ಮತ್ತು ಮಾರಾಟದ ವಿವರಗಳನ್ನು ಈ ವಾರದ ನಂತರ ಅಮೆಜಝಾನ್ ಇಂಡಿಯಾ ವೆಬ್‌ಸೈಟ್ ಮತ್ತು ಅಧಿಕೃತ ಒನ್‌ ಪ್ಲಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.‌

Tap to resize

Latest Videos

ಇದನ್ನೂ ಓದಿ: OnePlus 10 Pro Review: ಸುಧಾರಿತ ಕ್ಯಾಮೆರಾ, ವೇಗದ ಕಾರ್ಯಕ್ಷಮತೆ, ಆದರೆ ನಿರಾಶಾದಾಯಕ ವಿನ್ಯಾಸ?

OnePlus TV Y1S Pro 43-inch ಭಾರತದಲ್ಲಿ ಬಿಡುಗಡೆ: ಇ-ಕಾಮರ್ಸ್‌ ದೈತ್ಯ ಅಮೆಝಾನ್  OnePlus TV Y1S Pro 43-inchನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದ್ದು ಟಿವಿ HDR10 ಬೆಂಬಲವು ಹೈಲೈಟ್ ಆಗಿದೆ, ಇದು ಬಳಕೆದಾರರಿಗೆ 4K ರೆಸಲ್ಯೂಶನ್‌ನಲ್ಲಿ ಕಂಟೆಂಟನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. 

ಮುಂಬರುವ OnePlus ಸ್ಮಾರ್ಟ್ ಟಿವಿ "ಹೆಚ್ಚು ಸ್ಪಷ್ಟತೆ", "ಉತ್ತಮ ಬಣ್ಣಗಳು" ಮತ್ತು "ಡೈನಾಮಿಕ್ ಕಾಂಟ್ರಾಸ್ಟ್" ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಮುಂಬರುವ ಸ್ಮಾರ್ಟ್ ಟಿವಿಯು ವಿಸಿಬಲ್‌ ಚಿನ್ ಜೊತೆಗೆ ಬೆಜೆಲ್-ಲೆಸ್ ವಿನ್ಯಾಸವನ್ನು ನೀಡುತ್ತದೆ ಎಂದು ಒನ್‌ ಪ್ಲಸ್ ಹೇಳುತ್ತದೆ. ಸ್ಮಾರ್ಟ್ ಟಿವಿ "ಬಾರ್ಡ್‌ರ್‌ಗಳಿಲ್ಲದೆ" ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಟೀಸರ್‌ನಲ್ಲಿ ಬದಿಗಳಲ್ಲಿ ಸ್ಲಿಮ್ ಬೆಜೆಲ್‌ಗಳನ್ನು ಕಾಣಬಹುದು. 

ಟೆಕ್ ಕಂಪನಿಯು OnePlus TV Y1S Pro 43-inchನೊಂದಿಗೆ ವರ್ಧಿತ ಧ್ವನಿ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ. Dolby Atmos ಬೆಂಬಲದೊಂದಿಗೆ ಸ್ಮಾರ್ಟ್ ಟಿವಿ 24W ಸ್ಪೀಕರ್‌ಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಮುಂಬರುವ OnePlus TV Y1S Pro Chromecast built-in, Netflix, Google Play ಮತ್ತು ಹೆಚ್ಚಿನವುಗಳಿಗೆ ಬೆಂಬಲದೊಂದಿಗೆ ಬರುತ್ತದೆ ಎಂದು ಟೀಸರ್‌ಗಳು ಬಹಿರಂಗಪಡಿಸುತ್ತವೆ. 

ಇದನ್ನೂ ಓದಿOnePlus Tablet: OLED ಡಿಸ್‌ಪ್ಲೇ, ಫಾಸ್ಟ್ ಚಾರ್ಜಿಂಗ್ ಸೇರಿ ಸೂಪರ್ಬ್ ಫೀಚರ್ಸ್

ಕಂಪನಿಯ ಎಲ್ಲಾ ಇತರ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಗಳಂತೆ, ಇದು ಕೂಡ OxygenPlayಜೊತೆಗೆ ಬರುತ್ತದೆ, ಇದು ವ್ಯಾಪಕವಾದ ಕಂಟೆಂಟನ್ನು ನೀಡುತ್ತದೆ. ಮುಂಬರುವ  OnePlus TV Y1S Pro 43-inch, 43-inch OnePlus Y ಸರಣಿಯ ಸ್ಮಾರ್ಟ್ ಟಿವಿಯನ್ನು ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ, ಇದು ಪ್ರಸ್ತುತ ರೂ 25,899 ನಲ್ಲಿ ಲಭ್ಯವಿದೆ, ಆದರೆ ಈ 2020 ಮಾದರಿಯು ಪೂರ್ಣ HD ಬೆಂಬಲದೊಂದಿಗೆ ಬರುತ್ತದೆ. ಹೊಸ ಸ್ಮಾರ್ಟ್‌ ಟವಿಯ ನಿಖರವಾದ ಬೆಲೆಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.

click me!