OnePlus Nord 2T 5G ಸ್ಮಾರ್ಟ್‌ಫೋನ್ ಬೆಲೆ ಇಳಿಕೆಯಾಗಿದೆ. 80W ಫಾಸ್ಟ್ ಚಾರ್ಜಿಂಗ್, 12GB RAM, ಮತ್ತು ಉತ್ತಮ ಕ್ಯಾಮೆರಾಗಳೊಂದಿಗೆ ಬರುತ್ತದೆ.
One Plus Nord 2T ಸಿರೀಸ್‌ನಲ್ಲಿ ಬಂದ ಮೊದಲ 5G ಸ್ಮಾರ್ಟ್‌ಫೋನ್ ಆಗಿತ್ತು. ಇದೀಗ ಈ ಸ್ಮಾರ್ಟ್‌ಫೋನ್ ಬೆಲೆ ಇಳಿಮುಖವಾಗಿದ್ದು, ದುಬಾರಿ ಎಂದು ಹಿಂದೆ ಸರಿದವರು ಇದೀಗ ಖರೀದಿಸಬಹುದಾಗಿದೆ. Nord 2Tಗಿಂತ ಈ ಸ್ಮಾರ್ಟ್‌ಫೋನ್ ಹೆಚ್ಚು ಭಿನ್ನವಾಗಿಲ್ಲ. ಈ ಎರಡು ಸ್ಮಾರ್ಟ್‌ಫೋನ್‌ನಲ್ಲಿ ಕೆಲ ಸಣ್ಣ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ನೋಡಲು Nord 2T ರೀತಿಯಲ್ಲಿ ಇದೇ ಕಾಣಿಸುತ್ತದೆ. ಒನ್ ಪ್ಲಸ್ ಯಾವಾಗಲೂ ಕ್ಯಾಮೆರಾ ಗುಣಮಟ್ಟದಿಂದಲೇ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದರ ಸ್ಕ್ರೀನ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿದ್ದು, ಕೇವಲ 190.04 ಗ್ರಾಂ ತೂಕವನ್ನು ಹೊಂದಿದೆ. ಇದೀಗ ತೂಕದ ಜೊತೆಯಲ್ಲಿ ಜೇಬಿಗೆ ಹಗುರವಾಗಲಿದೆ.
OnePlus Nord 2T Specifications
ಈ 5G ಸ್ಮಾರ್ಟ್‌ಫೋನ್ 6.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. FHD Plus AMOLED ಡಿಸ್‌ಪ್ಲೇ , 90hz ರಿಫ್ರೆಶ್ ರೇಟ್, HDR 10+ ಸಪೋರ್ಟಿನ 5 ಗೊರಿಲ್ಲಾ ಗ್ಲಾಸ್ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ನಿಮಗೆ Mediatek dimensity 1300(6 nm) ವಿನ್ಯಾಸದಲ್ಲಿ ಸಿಗುತ್ತದೆ.
ಒನ್‌ಪ್ಲಸ್ ನೋರ್ಟ್ 2ಟಿ ಸ್ಮಾರ್ಟ್‌ಫೋನ್ ಗ್ರಾಹಕರಿಗೆ 2 ವೇರಿಯಂಟ್‌ಗಳಲ್ಲಿ ಲಭ್ಯವಿದೆ. 8GB RAM ಮತ್ತು 128 GB ROM (internal Storage) ಒಂದು ವೇರಿಯಂಟ್ ಆದ್ರೆ ಮತ್ತು 12 GB RAM ಮತ್ತು 128GB ROM (internal Storage) ನಲ್ಲಿ ಸಿಗುತ್ತದೆ. ಇನ್ನು ಗೇಮಿಂಗ್ ಪ್ರಿಯರಿಗೆ ಯಾವುದೇ ಅಡೆತಡೆಯನ್ನುಂಟು ಮಾಡುವದಿಲ್ಲ. Android 12 ಆಪರೇಟಿಂಗ್ ಸಿಸ್ಟಮ್ ಜೊತೆ ಈ 5ಜಿ ಸ್ಮಾರ್ಟ್‌ಫೋನ್ ಲಭ್ಯವಿದೆ. 4500 MAH ಸಾಮಾರ್ಥ್ಯದ ಬ್ಯಾಟರಿ 80w wired ಚಾರ್ಜಿಂಗ್ ಜೊತೆ ಸಿಗುತ್ತದೆ.
ಇನ್ನು ಕನೆಕ್ಟಿವಿಟಿಗಾಗಿ wi-fi 6 , bluetuth 5.2, Dual Sim, wi fi calling ಸೌಲಭ್ಯವಿದೆ. ಈ ಎಲ್ಲಾ ಸೌಲಭ್ಯಗಳನ್ನು ಹೊಂದಿರೋದರ ಜೊತೆ ಇದು 5G ಸ್ಮಾರ್ಟ್‌ಫೋನ್ ಆಗಿರೋದು ವಿಶೇಷವಾಗಿದೆ. Multimedia ವಿಶೇಷತೆ ನೋಡೋದಾದ್ರೆ ಸ್ಟೀರಿಯೋ ಸ್ಪೀಕರ್ ಬರುತ್ತದೆ. ಆಡಿಯೋ ಮತ್ತು ವಿಡಿಯೋ ಉತ್ತಮ ಗುಣಮಟ್ಟದ ಕ್ವಾಲಿಟಿಯನ್ನು ಹೊಂದಿದ್ದು, ಬಳಕೆದಾರರು ಎಂಜಾಯ್ ಮಾಡಬಹುದು.
ಇದನ್ನೂ ಓದಿ: 50MP+2MP ಕ್ಯಾಮೆರಾವುಳ್ಳ ಮೋಟೋ ಜಿ45 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ರಿಯಾಯ್ತಿ
ಟ್ರಿಪಲ್ ಕ್ಯಾಮೆರಾ ಸೆಟಪ್ ನೊಂದಿಗೆ ಒನ್‌ಪ್ಲಸ್ ನೋರ್ಟ್ 2ಟಿ ಸ್ಮಾರ್ಟ್‌ಫೋನ್ ಲಭ್ಯವಿದ್ದು, 50MP OIS ಹಿಂದಿನ ಕ್ಯಾಮೆರಾ, 8mp ultrawide ಮತ್ತು 2mp monochrome ಹೊಂದಿದೆ. ಫ್ರಂಟ್ ಕ್ಯಾಮೆರಾ 32MP ಹೊಂದಿದೆ,
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿಲ್ಲ. ಸಮೀಪದ ಶೋರೂಂಗಳಲ್ಲಿ One Plus Nord 2T ವಿರಳವಾಗಿ ಲಭ್ಯವಿದ್ದು, ಹೊಸ ಆವೃತ್ತಿ ಹಿನ್ನೆಲೆ ಇದರ ಬೆಲೆ ಇಳಿಮುಖವಾಗಿದೆ.
ಇದನ್ನೂ ಓದಿ: 1 ಜನವರಿ 2025ರಿಂದ ಟೆಲಿಕಾಂ ನಿಯಮಗಳಲ್ಲಿ ದೊಡ್ಡ ಬದಲಾವಣೆ; Jio, Airtel, Voda ಮತ್ತು BSNL ಗ್ರಾಹಕರ ಪರಿಣಾಮ?