ಮೊಟ್ಟ ಮೊದಲ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ನಥಿಂಗ್ ಇಯರ್ ಬಡ್ಸ್ ಬಿಡುಗಡೆ!

By Suvarna News  |  First Published Apr 22, 2024, 7:51 PM IST

ಭಾರತದಲ್ಲಿ ನಥಿಂಗ್ ಫೋನ್ ಹೊಸ ಸಂಚಲನ ಸೃಷ್ಟಿಸುತ್ತಿದ್ದಂತೆ ಇದೀಗ ಹೊಚ್ಚ ಹೊಸ ಇಯರ್ ಬಡ್ಸ್ ಬಿಡುಗಡೆಯಾಗಿದೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಇಯರ್ ಬಡ್ಸ್ ಇದಾಗಿದೆ. ಇದರ ವಿಶೇಷತೆ, ಬೆಲೆ ಎಷ್ಟು?
 


ನವದೆಹಲಿ(ಏ.22) ನಥಿಂಗ್ ಟೆಕ್ನಾಲಜಿ ಸ್ಮಾರ್ಟ್‌ಫೋನ್ ಬಳಿಕ ಅತ್ಯಾಧುನಿಕ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಇಯರ್ ಬಡ್ಸ್ ಬಿಡುಗಡೆ ಮಾಡಿದೆ. ಆಡಿಯೋ ಮತ್ತು ಸ್ಮಾರ್ಟ್‌ಫೋನ್ ಪ್ರಾಡಕ್ಟ್‌ಗಳಲ್ಲಿ ಉದ್ಯಮದಲ್ಲೇ ಪ್ರಥಮ ಚಾಟ್‌ಜಿಪಿಟಿ ಇಂಟಿಗ್ರೇಶನ್‌ ಹೊಂದಿಗೆ ಅತ್ಯಾಧುನಿಕ ಇಯರ್ ಬಡ್ಸ್ ಇದಾಗಿದೆ. ಎರಡು ವೈರ್‌ಲೆಸ್ ಇಯರ್‌ಬಡ್‌ಗಳಾದ ನಥಿಂಗ್ ಇಯರ್ ಮತ್ತು ನಥಿಂಗ್‌ ಇಯರ್ (ಎ) ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಕಳೆದ ಮೂರು ವರ್ಷಗಳಿಂದಲೂ ವಿನ್ಯಾಸ ಮತ್ತು ಇಂಜಿನಿಯರಿಂಗ್‌ನಲ್ಲಿ ನಿರಂತರವಾಗಿ ಸುಧಾರಣೆ ಮಾಡುತ್ತ ಬಂದಿರುವ ನಥಿಂಗ್‌ನ ಹೊಚ್ಚ ಹೊಸ ಆಡಿಯೋ ಉತ್ಪನ್ನಗಳು ಆಡಿಯೋ ಪ್ರಿಯರಿಗೆ ಉತ್ತಮ ಅನುಭವ ಒದಗಿಸಲಿದೆ ಎಂದು ನಥಿಂಗ್ ಹೇಳಿದೆ.   

Latest Videos

undefined

ನಥಿಂಗ್ ಸ್ಮಾರ್ಟ್‌ಫೋನ್‌ಗೆ ರಣವೀರ್ ಸಿಂಗ್ ಬ್ರ್ಯಾಂಡ್ ಅಂಬಾಸಿಡರ್, ಭಾರತದಲ್ಲಿ ಹೊಸ ಅಧ್ಯಾಯ!

ಬೆಲೆ ನಿಗದಿ ಮತ್ತು ಲಭ್ಯತೆ
ಇಯರ್‌ ಬೆಲೆಯು 11,999 ರೂ ಆಗಿದೆ. ಏಪ್ರಿಲ್ 29 ರಿಂದ ಮಾರಾಟ ಆರಂಭವಾಗಲಿದೆ. ಇಯರ್ (ಎ) ಬೆಲೆ 7,999 ರೂ. ಆಗಿದ್ದು, ಏಪ್ರಿಲ್ 22 ರಿಂದ ಮಾರಾಟ ಆರಂಭವಾಗಲಿದೆ. ಇವು ಫ್ಲಿಪ್‌ಕಾರ್ಟ್‌, ಕ್ರೋಮಾ ಮತ್ತು ವಿಜಯ್‌ ಸೇಲ್ಸ್‌ನಲ್ಲಿ ಲಭ್ಯವಿರಲಿದೆ. ಇಯರ್ ಮತ್ತು ಇಯರ್ (ಎ) ವಿಶೇಷ ಆರಂಭಿಕ ದರ ರೂ. 10,999 ಮತ್ತು ರೂ. 5,999 ದರದಲ್ಲಿ (ಕೊಡುಗೆಗಳ ಜೊತೆಗೆ) ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

ನಥಿಂಗ್ ಇಯರ್ – ಧ್ವನಿಗೆ ಹೊಸ ರೂಪ
ಇಯರ್ (ಎ) ಅನ್ನು ಸುಧಾರಿಸಲಾಗಿದ್ದು, ಈ ಇಯರ್‌ ನಥಿಂಗ್‌ನ ಪಾರದರ್ಶಕ ಇಯರ್‌ಬಡ್ ವಿನ್ಯಾಸವನ್ನು ಉಳಿಸಿಕೊಂಡಿದೆ ಮತ್ತು ಇನ್ನಷ್ಟು ಸುಧಾರಿಸಿದೆ. ಇದು ಕಂಪನಿಯ ಈವರೆಗಿನ ಅತ್ಯುತ್ತಮ ಆಡಿಯೋ ಅನುಭವವನ್ನು ನೀಡುತ್ತದೆ. ಶ್ರೀಮಂತ ಧ್ವನಿಯು ಇದರಲ್ಲಿ ಲಭ್ಯವಿದ್ದು, ಕಾರ್ಯಕ್ಷಮತೆಯಲ್ಲೂ ಯಾವುದೇ ರಾಜಿ ಇಲ್ಲ.

ಸೌಂಡ್ ಕ್ವಾಲಿಟಿ
ಆಡಿಯೋ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ನಥಿಂಗ್ ಇಯರ್‌ ನಥಿಂಗ್‌ನ ಅತ್ಯಂತ ಆಧುನಿಕ ಡ್ರೈವರ್ ಸಿಸ್ಟಮ್ ಅನ್ನು ಅಳವಡಿಸಿಕೊಂಡಿದೆ ಮತ್ತು ಕಸ್ಟಮ್‌ 11 ಎಂಎಂ ಡೈನಾಮಿಕ್ ಡ್ರೈವರ್ ಇದೆ. ಇದರಿಂದ ಅತ್ಯಂತ ಅಸಲಿ ಮತ್ತು ಸ್ಪಷ್ಟ ಧ್ವನಿಯನ್ನು ಒದಗಿಸುವುದಕ್ಕಾಗಿ ಪ್ರೀಮಿಯಂ ಸಾಮಗ್ರಿಗಳನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಒಟ್ಟಾರೆ ಸೌಂದರ್ಯಕ್ಕೆ ಮತ್ತು ಸ್ಪಷ್ಟ ಧ್ವನಿಗಾಗಿ ಸೆರಾಮಿಕ್ ಡಯಾಫ್ರಾಗ್ಮ್‌ ಅನ್ನು ನಾವು ಬಳಸಿದ್ದೇವೆ. ನಥಿಂಗ್‌ ಇಯರ್ (2) ದಲ್ಲಿ ಇದ್ದ ಡ್ಯೂಯೆಲ್ ಚೇಂಬರ್ ವಿನ್ಯಾಸವನ್ನು ಸುಧಾರಿಸಲಾಗಿದ್ದು, ಗಾಳಿ ಹರಿವನ್ನು ಸುಧಾರಿಸಲು ಎರಡು ಹೆಚ್ಚುವರಿ ವೆಂಟ್‌ಗಳನ್ನು ನೀಡಿದ್ದೇವೆ. ಇದರಿಂದ ಸ್ಪಷ್ಟ ಧ್ವನಿ ಕೇಳಿಸುತ್ತದೆ.

ಬ್ಲ್ಯೂಟೂತ್ ಮೂಲಕ ಹೈ ರೆಸೊಲ್ಯೂಶನ್ ಸ್ಟ್ರೀಮಿಂಗ್‌ಗೆ ಇಯರ್‌ LHDC 5.0 ಮತ್ತು LDAC ಕೊಡೆಕ್ ಅನ್ನು ಬೆಂಬಲಿಸುತ್ತದೆ. ಇದರಿಂದ ಶಕ್ತಿಯುತವಾದ ಶುದ್ಧ ಆಡಿಯೋ ಕೇಳಿಬರುತ್ತದೆ. ಕಿವಿಯು 1 Mbps 24 bit/192 kHz ಅನ್ನು LHDC 5.0 ಮೂಲಕ ತಲುಪಬಹುದಾಗಿದೆ ಮತ್ತು LDAC ಯಲ್ಲಿ 990 kbps ಹಾಗೂ 24 bit/96 kHz ಫ್ರೀಕ್ವೆನ್ಸಿಗಳವರೆಗೆ ತಲುಪಬಹುದಾಗಿದೆ.

Nothing Phone (1) ಭಾರತದಲ್ಲಿ Jio 5G ಬೆಂಬಲಿತ ಮೊದಲ ಫೋನ್

ನಥಿಂಗ್‌ನ ಸುಧಾರಿತ ಈಕ್ವಲೈಸರ್‌ ಹೆಚ್ಚಿನ ಕಸ್ಟಮೈಸೇಶನ್ ಸೌಲಭ್ಯವನ್ನು ನೀಡುತ್ತದೆ. ಇದಕ್ಕಾಗಿ ಸರಳ ಗ್ರಾಫಿಕಲ್ ಇಂಟರ್‌ಫೇಸ್ ಅನ್ನು ನಥಿಂಗ್ ಎಕ್ಸ್‌ ಆಪ್‌ನಲ್ಲಿ ಒದಗಿಸಲಾಗಿದೆ. ಕ್ಯೂ ಫ್ಯಾಕ್ಟರ್ ಮತ್ತು ಫ್ರೀಕ್ವೆನ್ಸಿ ಕಂಟ್ರೋಲ್ ಮೂಲಕ ಬಳಕೆದಾರರು ತಮ್ಮ ಶ್ರವಣ ಅನುಭವವನ್ನು ಸುಧಾರಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಬೇರೆ ಬೇರೆ ಜಾನರ್‌ಗಳಿಗೆ ಪ್ರತ್ಯೇಕ ಪ್ರೊಫೈಲ್‌ಗಳನ್ನು ರಚಿಸಬಹುದು. ನಥಿಂಗ್ ಎಕ್ಸ್ ಆಪ್‌ನಲ್ಲಿ ಪರ್ಸನಲ್ ಸೌಂಡ್ ಪ್ರೊಫೈಲ್ ಅನ್ನು ರಚಿಸಿದಾಗ, ರೆಕಾರ್ಡ್ ಆದ ಡೇಟಾವು ಶ್ರವಣ ಪರೀಕ್ಷೆ ಫಲಿತಾಂಶಗಳನ್ನು ಆಧರಿಸಿ ಈಕ್ವಲೈಸರ್ ಲೆವೆಲ್‌ಗಳನ್ನು ಹೊಂದಿಸುವುದಕ್ಕೆ ನೈಜ ಸಮಯದಲ್ಲಿ ಹೊಂದಿಕೆಯಾಗುತ್ತದೆ. 

click me!