ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಅತೀ ಕಡಿಮೆ ಬೆಲೆಗೆ ಸಿಗ್ತಿದೆ ಆ್ಯಪಲ್ ಐಫೋನ್‌ 14 ಪ್ಲಸ್‌

By Vinutha Perla  |  First Published Jun 4, 2024, 11:54 AM IST

ಐಫೋನ್‌ ಕೊಳ್ಳುವವರಿಗಿದು ಸಮಯ. ಯಾಕಂದ್ರೆ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ ಐಫೋನ್ ಮೇಲೆ ಭಾರೀ ರಿಯಾಯಿತಿಯನ್ನು ನೀಡುತ್ತಿವೆ. ಆ್ಯಪಲ್ ಐಫೋನ್‌ 14 ಪ್ಲಸ್‌ ಪ್ರಸ್ತುತ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. 


ಆ್ಯಪಲ್ ಐಫೋನ್‌ 14 ಪ್ಲಸ್‌ ಪ್ರಸ್ತುತ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ.  ಇದು ದೊಡ್ಡ ಡಿಸ್ಪ್ಲೇ ಮತ್ತು ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ. ಆ್ಯಪಲ್ ಐಫೋನ್‌ 14 ಜನರನ್ನು ಸೆಳೆಯಲು ವಿಫಲವಾದ ನಂತತ Apple iPhone ಶ್ರೇಣಿಯಲ್ಲಿನ 'ಮಿನಿ' ಮಾದರಿಯನ್ನು ಬದಲಾಯಿಸಿತು. ಆದರೆ ಆ್ಯಪಲ್ ಐಫೋನ್‌ 15 ಸರಣಿಯ ಬಿಡುಗಡೆಯ ನಂತರ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಆ್ಯಪಲ್ ಐಫೋನ್‌ 14 ಪ್ಲಸ್‌ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. 

ಆ್ಯಪಲ್ ಐಫೋನ್‌ 15 ಪ್ಲಸ್‌ಕ್ಕಿಂತ ಜನರು ಆ್ಯಪಲ್ ಐಫೋನ್‌ 14 ಪ್ಲಸ್ ಕೊಳ್ಳಲು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಆ್ಯಪಲ್ ಐಫೋನ್‌  14 ಪ್ಲಸ್‌ ಅನ್ನು ಭಾರತದಲ್ಲಿ ಮೊದಲಿಗೆ 89,900 ರೂಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು. ಆ್ಯಪಲ್ ಐಫೋನ್‌ 15 ಪ್ಲಸ್‌ನ್ನು ಬಿಡುಗಡೆ ಮಾಡಿದ ನಂತರ, ಕಂಪನಿಯು ಫೋನ್‌ನ ಬೆಲೆಯನ್ನು 10,000 ರೂ.ನಷ್ಟು ಕಡಿತಗೊಳಿಸಿದೆ. ಆ್ಯಪಲ್ ಐಫೋನ್‌ 14 ಪ್ಲಸ್‌ ಪ್ರಸ್ತುತ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ 50,750 ರೂಪಾಯಿಗಳ ರಿಯಾಯಿತಿಯ ನಂತರ ಕೇವಲ 8,249 ರೂಗಳಲ್ಲಿ ಲಭ್ಯವಿದೆ.

Tap to resize

Latest Videos

ಈ ದೇಶದ ಐಫೋನ್ ಬಳಕೆದಾರರಿಗೆ ವ್ಯಾಟ್ಸ್ಆ್ಯಪ್ ನಿಷೇಧ, ಸರ್ಕಾರದ ಆದೇಶ!

ಆ್ಯಪಲ್ ಐಫೋನ್‌ 14 ಪ್ಲಸ್‌ 6.7-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ. ಆ್ಯಪಲ್ ಐಫೋನ್‌ 13 ಪ್ರೊ ಮಾದರಿಗಳಲ್ಲಿ ಕಂಡುಬರುವಂತೆ ಇದು ಸುಧಾರಿತ A15 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ. ಆ್ಯಪಲ್ ಐಫೋನ್‌ 14 ಪ್ಲಸ್ 5G ಸಾಮರ್ಥ್ಯವನ್ನು ಹೊಂದಿದೆ ಮತ್ತು ಒಂದೇ ಚಾರ್ಜ್‌ನಲ್ಲಿ ಸ್ಮಾರ್ಟ್‌ಫೋನ್ 26 ಗಂಟೆಗಳವರೆಗೆ ಇರುತ್ತದೆ ಎಂದು ಆಪಲ್ ಹೇಳಿಕೊಂಡಿದೆ.

ಕ್ಯಾಮೆರಾಗಳ ವಿಷಯಕ್ಕೆ ಬಂದಾಗ,  ಆ್ಯಪಲ್ ಐಫೋನ್‌ 14 ಪ್ಲಸ್ 12MP ಮುಖ್ಯ ಸಂವೇದಕ ಮತ್ತು ಅಲ್ಟ್ರಾ-ವೈಡ್ ಸಂವೇದಕದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು ಐದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ - ನೀಲಿ, ನೇರಳೆ, ಮಿಡ್ನೈಟ್, ಸ್ಟಾರ್ಲೈಟ್ ಮತ್ತು ಕೆಂಪು ಬಣ್ಣಗಳಲ್ಲಿರುತ್ತದೆ.

ದುಬಾರಿ ಸ್ಮಾರ್ಟ್‌ಫೋನ್ ಹುಡುಕ್ತಿದೀರಾ? ಇಲ್ಲಿದೆ ಬೆಸ್ಟ್ 6

ಆ್ಯಪಲ್ ಐಫೋನ್‌ 14 ಪ್ಲಸ್ ಪ್ರಸ್ತುತ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ 20,901 ರೂಪಾಯಿಗಳ ರಿಯಾಯಿತಿಯ ನಂತರ 58,999 ರೂಪಾಯಿಗಳಿಗೆ ಲಭ್ಯವಿದೆ. ಇದರ ಜೊತೆಗೆ, ಖರೀದಿದಾರರು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟಿನ ಮೇಲೆ 750 ರೂ. ಕಡಿತ ನೀಡುತ್ತದೆ. ಇದು ಆ್ಯಪಲ್ ಐಫೋನ್‌ 14 ಪ್ಲಸ್ ಬೆಲೆಯನ್ನು 58,249 ರೂ.ಗೆ ಇಳಿಸಿದೆ. ಇದಲ್ಲದೇ, ಖರೀದಿದಾರರು ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ 50,000 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಎಲ್ಲಾ ಕೊಡುಗೆಗಳು ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ, ಖರೀದಿದಾರರು ಆ್ಯಪಲ್ ಐಫೋನ್‌  14 Plus ಅನ್ನು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಕೇವಲ 8,249 ರೂಗಳಲ್ಲಿ ಪಡೆಯಬಹುದು

click me!