
ಐಫೋನ್ ಕೊಳ್ಳುವುದು ಹಲವರ ಕನಸು..ಆದ್ರೆ ಐಫೋನ್ ದುಬಾರಿಯಾಗಿರುವ ಕಾರಣ ಹಲವರಿಗೆ ಇದನ್ನು ಖರೀದಿಸೋಕೆ ಸಾಧ್ಯವಾಗಲ್ಲ. ಆದ್ರೆ ಸದ್ಯ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಅತೀ ಕಡಿಮೆ ಬೆಲೆಗೆ ಆ್ಯಪಲ್ ಐಫೋನ್ ಮಿನಿ ಲಭ್ಯವಿದೆ. ಈ ಮಾಡೆಲ್‌ನ ಐಫೋನ್ ಎರಡು ತಲೆಮಾರುಗಳಷ್ಟು ಹಳೆಯದಾಗಿದ್ದರೂ, ಇದುವರೆಗೆ ಮಾಡಿದ ಅತ್ಯಂತ ಸೂಕ್ತವಾದ ಐಫೋನ್ ಮಾದರಿಗಳಲ್ಲಿ ಒಂದಾಗಿದೆ. ಆ್ಯಪಲ್ ಐಫೋನ್ 15 ಸರಣಿಯ ಬಿಡುಗಡೆಯ ನಂತರ, ಆ್ಯಪಲ್ ಐಫೋನ್ 12 ಮಿನಿ ಹೆಚ್ಚು ಗಮನ ಸೆಳೆದ ಐಫೋನ್ ಮಾದರಿಯಾಗಿದೆ.
ಆ್ಯಪಲ್ ಐಫೋನ್ 12 Miniಯನ್ನು 69,900 ರೂಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು. ಇದು ಆ್ಯಪಲ್ ಐಫೋನ್ 12ಗಿಂತ ಸುಮಾರು 10,000 ರೂ ಅಗ್ಗವಾಗಿದೆ. ಹೀಗಾಗಿಯೇ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದವರಿಗೆ Apple iPhone 12 Mini ಉತ್ತಮ ಆಯ್ಕೆಯಾಗಿದೆ. ಆ್ಯಪಲ್ ಐಫೋನ್ 12 Mini ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ರೂ 50,000 ರಿಯಾಯಿತಿಯ ನಂತರ ರೂ 9,900 ನಲ್ಲಿ ಲಭ್ಯವಿದೆ.
ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಹಿಂದೆಂದಿಗಿಂತಲೂ ಅತೀ ಕಡಿಮೆ ಬೆಲೆಯಲ್ಲಿ ದುಬಾರಿ ಐಫೋನ್ ಲಭ್ಯ
ಆ್ಯಪಲ್ ಐಫೋನ್ 12 Mini ಮೊದಲ ಮಿನಿ ಸ್ಮಾರ್ಟ್‌ಫೋನ್ ಆಗಿದೆ. ಆ್ಯಪಲ್ ಐಫೋನ್ 12 ಗ್ರಾಹಕರಿಂದ ನಿರೀಕ್ಷಿಸಿದಷ್ಟು ಡಿಮ್ಯಾಂಡ್ ಪಡೆಯುವಲ್ಲಿ ವಿಫಲವಾಗಿದೆ. ಆದರೆ ಈ ಸ್ಮಾರ್ಟ್‌ಫೋನ್ 5.4-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ. ಇದು A14 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ. ಐಫೋನ್ 12 ಮಿನಿ ಸ್ಟ್ಯಾಂಡರ್ಡ್ ಆ್ಯಪಲ್ ಐಫೋನ್ 12ನಂತಹ ಅದೇ 12MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ.
ಆ್ಯಪಲ್ ಐಫೋನ್ 12 Mini ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 59,900 ರೂ. ಲಭ್ಯವಿದೆ. ಇದರ ಜೊತೆಗೆ, ಖರೀದಿದಾರರು ಹಳೆಯ ಸ್ಮಾರ್ಟ್‌ಫೋನ್‌ಗೆ ವಿನಿಮಯವಾಗಿ 50,000 ರೂ. ವರೆಗೆ ರಿಯಾಯಿತಿ ಪಡೆಯಬಹುದು. ಎಲ್ಲಾ ಕೊಡುಗೆಗಳು ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ, ಖರೀದಿದಾರರು ರೂ 12 Mini ಅನ್ನು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಕೇವಲ 9,900 ರೂ.ಗಳಲ್ಲಿ ಪಡೆಯಬಹುದು.
ಐಫೋನ್ ನೀರಿನಲ್ಲಿ ಮುಳುಗಿದರೆ ಅಕ್ಕಿಯೊಳಗಿಡಬೇಡಿ, ಆ್ಯಪಲ್‌ನಿಂದ ಸಿಂಪಲ್ ಟಿಪ್ಸ್!
ಚಿಕ್ಕದಾದ, ಬಳಸಲು ಸುಲಭವಾದ ಮತ್ತು ಪಾಕೆಟ್ ಫ್ರೆಂಡ್ಲೀ ಸ್ಮಾರ್ಟ್‌ಫೋನ್ ಖರೀದಿಸಲು ಪ್ಲಾನ್ ಮಾಡುತ್ತಿರುವವರಿಗೆ, Apple iPhone 12 Mini ಉತ್ತಮ ಆಯ್ಕೆಯಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.