Mi Smart Band 7 ಬಿಡುಗಡೆ, ವಿಭಿನ್ನ ಆರು ಬಣ್ಣಗಳಲ್ಲಿ ಲಭ್ಯ!

By Suvarna NewsFirst Published Jun 24, 2022, 4:12 PM IST
Highlights

*ಶವೊಮಿ ಎಂಐ ಸ್ಮಾರ್ಟ್‌ ಬ್ಯಾಂಡ್ 7 ಅನ್ನು ಮೇ ತಿಂಗಳಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿತ್ತು.
*ಈಗ ಕಂಪನಿಯು ಎಂಐ ಸ್ಮಾರ್ಟ್‌ ಬ್ಯಾಂಡ್ 7 ಅನ್ ಯುರೋಪ್ ಮಾರುಕಟ್ಟೆಗೆ ಲಾಂಚ್ ಮಾಡಿದೆ
*ಬಜೆಟ್ ಸೆಗ್ಮೆಂಟ್‌ನಲ್ಲಿ ಈ ಸ್ಮಾರ್ಟ್‌ ಬ್ಯಾಂಡ್‌ಗಳಿದ್ದು, ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ?

ಚೀನಾ ಮೂಲದ ಶವೊಮಿ (Xiaomi) ತನ್ನ ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಮತ್ತು  ಸ್ಮಾರ್ಟ್‌ಬ್ಯಾಂಡ್ ಮೂಲಕ ಹೆಚ್ಚು ಖ್ಯಾತವಾಗಿದೆ. ಈ ಎಲ್ಲ ಸಾಧನಗಳನ್ನು ಗ್ರಾಹಕರಿಗೆ ಕಂಪನಿಯು ಪ್ರೀಮಿಯಂ ಮತ್ತು ಬಜೆಟ್ ಸೆಗ್ಮೆಂಟ್‌ನಲ್ಲಿ ಮಾರಾಟ ಮಾಡುತ್ತದೆ. ಈಗ ಕಂಪನಿಯು ಎಂಐ ಸ್ಮಾರ್ಟ್‌ಬ್ಯಾಂಡ್ 7 ಅನ್ನು ಯುರೋಪ್‌ ಮಾರುಕಟ್ಟೆಗೆ  ಲಾಂಚ್ ಮಾಡಿದೆ. ಇದೇ ಬ್ಯಾಂಡ್ ಇತ್ತೀಚೆಗೆ ಇನ್ಫೋಕಾಮ್ ಮೀಡಿಯಾ ಡೆವಲಪ್‌ಮೆಂಟ್ ಅಥಾರಿಟಿ (Infocomm Media Development Authority- IMDA) ಮತ್ತು NCCಯಂಥ ಪ್ರಮಾಣೀಕರಣ ವೆಬ್‌ಸೈಟ್‌ಗಳಲ್ಲಿ ಕಂಡು ಬಂದಿದೆ. Xiaomi ಈ ಫಿಟ್ನೆಸ್ ಟ್ರ್ಯಾಕರ್ ಅನ್ನು ಚೀನಾದಲ್ಲಿ ಮೇ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಬ್ಯಾಂಡ್‌ನ NFC ಅಲ್ಲದ ಆವೃತ್ತಿಯನ್ನು ಈಗ ಯುರೋಪ್‌ನಲ್ಲಿ ಚೀನಾದ ಕಂಪನಿ ಬಿಡುಗಡೆ ಮಾಡಿದೆ. ಸ್ಮಾರ್ಟ್ ಬ್ಯಾಂಡ್ 1.62-ಇಂಚಿನ AMOLED ಆಲ್ವೇಸ್-ಆನ್ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಒಂದೇ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. Xiaomi ಆರು ವಿಭಿನ್ನ ಬಣ್ಣಗಳಲ್ಲಿ ಫಿಟ್ನೆಸ್ ಬ್ಯಾಂಡ್ ಅನ್ನು ಬಿಡುಗಡೆ ಮಾಡಿದೆ.  ಕಪ್ಪು (Black), ನೀಲಿ (Blue), ಹಸಿರು (Green), ಕಿತ್ತಳೆ (Orange), ಗುಲಾಬಿ (Pink) ಮತ್ತು ಬಿಳಿ (White) ಈ ಆರು ವಿಭಿನ್ನ ಕಲರ್‌ಗಳಲ್ಲಿ ಗ್ರಾಹಕರಿಗೆ ಈ ಬ್ಯಾಂಡ್ ಮಾರಾಟಕ್ಕೆಸಿಗಲಿದೆ.

Mi ಸ್ಮಾರ್ಟ್ ಬ್ಯಾಂಡ್ 7 ಬೆಲೆಯ ಎಷ್ಟು?
ಪ್ರಮಾಣಿತ ಆವೃತ್ತಿ ಮತ್ತು NFC ಇಲ್ಲದೆ ಸೌಲಭ್ಯ ಇಲ್ಲದಿರುವ Mi Band 7 ಬೆಲೆ ಯುರೋಪ್ ಮಾರುಕಟ್ಟೆಯಲ್ಲಿ EUR 59.99 ಇದೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅಂದಾಜು ಅದು ಅಂದಾಜು ರೂ. 4,700. ಆದರೆ, ಈ ಬ್ಯಾಂಡ್ 7 ಸೀಮಿತ ಅವಧಿಗೆ EUR 49.99 ಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಸರಿಸುಮಾರು 4,100 ರೂ. ಆಗಿರುತ್ತದೆ. Mi Smart Band 7 ಅನ್ನು ಕಳೆದ ತಿಂಗಳು ಚೀನಾದಲ್ಲಿ Redmi Buds 4 Pro ಜೊತೆಗೆ ಬಿಡುಗಡೆ ಮಾಡಲಾಯಿತು. ಈ ಪ್ರಮಾಣಿತ ಆವೃತ್ತಿಯ ಬೆಲೆ CNY 249 (ಸರಿಸುಮಾರು ರೂ. 2,900). NFC ಮಾದರಿಯ ಬೆಲೆ CNY 299. (ಅಂದಾಜು ರೂ. 3,500) ಎಂದು ಹೇಳಬಹುದು.

ಭಾರತದಲ್ಲಿ ರಿಯಲ್‌ಮಿ ಸಿ30 ಫೋನ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ, ಬೆಲೆ ಎಷ್ಟು?

ಈ ಬ್ಯಾಂಡ್‌ನ ಫೀಚರ್ಸ್‌ಗಳೇನು?
Mi ಸ್ಮಾರ್ಟ್ ಬ್ಯಾಂಡ್ 7 1.62-ಇಂಚಿನ AMOLED ಡಿಸ್ಪ್ಲೇಯನ್ನು 192x490 ಪಿಕ್ಸೆಲ್‌ಗಳ ರೆಸಲ್ಯೂಶನ್, 500 ನಿಟ್‌ಗಳ ಗರಿಷ್ಠ ಹೊಳಪು ಮತ್ತು 326ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಧರಿಸಬಹುದಾದ 100 ಕ್ಕೂ ಹೆಚ್ಚು ವಿವಿಧ ಬ್ಯಾಂಡ್ ಮುಖಗಳು ಲಭ್ಯವಿದೆ. ಇದು SpO2 ಮಾನಿಟರ್, ಹೃದಯ ಬಡಿತ ಸೆನ್ಸರ್, ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್ ಮತ್ತು ನಿದ್ರೆಯ ಮೇಲ್ವಿಚಾರಣೆಯಂತಹ ಆರೋಗ್ಯ ಟ್ರ್ಯಾಕರ್‌ಗಳನ್ನು ಒಳಗೊಂಡಿದೆ. ಇದು ಸ್ಕಿಪ್ಪಿಂಗ್, ಜಿಮ್ನಾಸ್ಟಿಕ್ಸ್ ಮತ್ತು ಟೆನ್ನಿಸ್ ಸೇರಿದಂತೆ 120 ಕ್ರೀಡಾ ವಿಧಾನಗಳನ್ನು ಬೆಂಬಲಿಸುತ್ತದೆ.

ಪ್ರೈವೇಸಿಗೆ ಹೊಸ ಫೀಚರ್ ಪರಿಚಯಿಸಿದ WhatsApp

Mi ಸ್ಮಾರ್ಟ್ ಬ್ಯಾಂಡ್ 7 ಕರೆ ಮತ್ತು ಸಂದೇಶ ಅಧಿಸೂಚನೆಗಳನ್ನು ಸ್ವೀಕರಿಸಬಹುದು. NFC ಮತ್ತು ಬ್ಲೂಟೂತ್ v5.2 ಸಂಪರ್ಕವನ್ನು ಒಳಗೊಂಡಿದೆ. ಧರಿಸಬಹುದಾದವು 5ATM (50 ಮೀಟರ್) ವರೆಗೆ ವಾಟರ್‌ಪ್ರೂಫ್ ಆಗಿದೆ. ಇದು ಒಂದೇ ಚಾರ್ಜ್‌ನಲ್ಲಿ 14 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು 46.5x20.7x12.25mm ಆಯಾಮ(Dimensions) ಗಳನ್ನು ಹೊಂದಿದೆ. Mi Smart Band 7 ಅನ್ನು ಈ ತಿಂಗಳ ಆರಂಭದಲ್ಲಿ Infocomm ಮೀಡಿಯಾ ಡೆವಲಪ್‌ಮೆಂಟ್ ಅಥಾರಿಟಿ ಸೇರಿದಂತೆ ಹಲವಾರು ಪ್ರಮಾಣೀಕರಣ ಸೈಟ್‌ಗಳಲ್ಲಿ ಪತ್ತೆ ಮಾಡಲಾಗಿತ್ತು (IMDA).

click me!