70 ದಿನದವರೆಗೆ ಬ್ಯಾಟರಿ ಲೈಫ್, 11.5 ಇಂಚಿನ್ ಬಿಗ್‌ ಸ್ಕ್ರೀನ್, 8300mAh ಸಾಮರ್ಥ್ಯದ ಬ್ಯಾಟರಿ

Honor ಬಿಡುಗಡೆ ಮಾಡಿದ ನೂತನ ಟ್ಯಾಬ್ಲೆಟ್ Honor Pad X9a, 11.5 ಇಂಚಿನ ಬಿಗ್ ಸ್ಕ್ರೀನ್ ಮತ್ತು 8300mAh ಬ್ಯಾಟರಿ ಹೊಂದಿದೆ. ಇದು 70 ದಿನಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ ಮತ್ತು ಆಂಡ್ರಾಯ್ಡ್ 15 ಆಧಾರಿತವಾಗಿದೆ.

Honor Pad X9a Up to 70 days of battery life, 11.5-inch big screen, 8300mAh battery mrq

Honor Pad X9a Launched: ಆನರ್ ಕಂಪನಿ ತನ್ನ ಲೇಟೇಸ್ಟ್ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಆನರ್ ಬಿಡುಗಡೆ ಮಾಡಿರುವ ನೂತನ ಟ್ಯಾಬ್ಲೆಟ್, 11.5 ಇಂಚಿನ ಬಿಗ್ ಸ್ಕ್ರೀನ್ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದ್ರೆ 70 ದಿನದವರೆಗೆ ಬ್ಯಾಟರಿ ಖಾಲಿಯಾಗುವ ಚಿಂತೆ ಇರಲ್ಲ. 120 ಹರ್ಟಜ್ ರಿಫ್ರೆಶ್ ರೇಟ್‌ ಜೊತೆಯಲ್ಲಿ ನಿಮಗೆ ನೂತನ  Honor Pad X9a ಸಿಗಲಿದೆ. ಈ ಡಿವೈಸ್ 8300mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 15 ಆಧಾರಿತವಾಗಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಸೇರಿದಂತೆ ಅತ್ಯಧಿಕ ಫೀಚರ್ಸ್ ಹೊಂದಿದೆ. 

ಇದುವರೆಗೂ Honor Pad X9a ಟ್ಯಾಬ್ಲೆಟ್ ಬೆಲೆ ಮಾಹಿತಿ ಇನ್ನು ಬಿಡುಗಡೆ ಮಾಡಿಲ್ಲ. ಆದ್ರೆ ಈ ಟ್ಯಬ್ಲೆಟ್ ಹಾನರ್ ಮಲೇಶಿಯಾದಲ್ಲಿ ಲಿಸ್ಟೆಡ್ ಅಗಿದೆ. ಸದ್ಯ Honor Pad X9a ನಿಮಗೆ ಕೇವಲ ಗ್ರೇ (ಬೂದು) ಬಣ್ಣದಲ್ಲಿ ಮಾತ್ರ ಸಿಗಲಿದೆ. Honor Pad X9a ಟ್ಯಾಬ್ಲೆಟ್ ಪ್ರಮುಖ ಫೀಚರ್ಸ್ ಮತ್ತು ಬೆಲೆ ಎಷ್ಟು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. 

Latest Videos

Honor Pad X9a Specifications
ಆನರ್ ಪ್ಯಾಡ್ ಎಕ್ಸ್9a ಟ್ಯಾಬ್ಲೆಟ್ 11.5 ಇಂಚಿನ ಬಿಗ್‌ ಡಿಸ್‌ಪ್ಲೇ ಹೊಂದಿದೆ. 2.5K (1504*2508 ಪಿಕ್ಸೆಲ್) ಎಲ್‌ಸಿಡಿ ಸ್ಕ್ರೀನ್ ನೀಡಲಾಗಿದೆ. ರಿಫ್ರೆಶ್ ರೇಟ್ 120 ಹರ್ಟಜ್ ಮತ್ತು ಈ ಡಿವೈಸ್‌ನಲ್ಲಿ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 685 ಚಿಪ್‌ಸೆಟ್ ಒಳಗೊಂಡಿದೆ. 8GB RAM ಡಿವೈಸ್‌ನಲ್ಲಿ ಇನ್‌ಬಿಲ್ಟ್  ಆಗಿದ್ದು, ಇತರೆ ಡಿವೈಸ್‌ಗಳಂತೆ 8GBವರೆಗೂ ವಿಸ್ತರಣೆ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ. Honor Pad X9a ಟ್ಯಾಬ್ಲೆಟ್‌ನಲ್ಲಿ 128GB ಇನ್‌ಬಿಲ್ಟ್ ಸ್ಟೋರೇಜ್ ಸಿಗಲಿದೆ. 

ಇದನ್ನೂ ಓದಿ: ಯುಗಾದಿಗೂ ಮುನ್ನವೇ ಬಂಪರ್ ಆಫರ್;  ಕಡಿಮೆ ಬೆಲೆಯಲ್ಲಿ 43 ಇಂಚಿನ ಬಿಗ್ ಸ್ಕ್ರೀನ್ ಡಿಜಿಟಲ್ ಸ್ಮಾರ್ಟ್ ಟಿವಿ 

ಇನ್ನು ಫೋಟೋಗ್ರಾಫಿಗಾಗಿ Honor Pad X9aನಲ್ಲಿ ಅಪರ್ಚರ್ ಎಫ್‌/2.0 ಮತ್ತು ಆಟೋಫೋಕಸ್ ಜೊತೆ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿ ಮತ್ತು  ವಿಡಿಯೋ ಕಾಲ್‌ಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ವೈಫೈ ಕನೆಕ್ಷನ್ ಮತ್ತು ಬ್ಲೂಟೂಥ್ 5.1 ಕನೆಕ್ಟಿವಿಟಿ  ನೀಡಲಾಗಿದೆ. ವೈರ್‌ಲೆಸ್ ಕೀಬೋರ್ಡ್ ಮತ್ತು ಆಂಡ್ರಾಯ್ಡ್ರ 15 ಬೇಸಡ್, MagicOS 9.0 ಜೊತೆಯಲ್ಲಿ ಈ ಟ್ಯಾಬ್ಲೆಟ್ ಗ್ರಾಹಕರಿಗೆ ಸಿಗುತ್ತದೆ. ಹಾಗೆ ಕ್ವಾಡ್ ಸ್ಪೀಕರ್ ಹೊಂದಿರಲಿದೆ. 

Honor Pad X9a ಟ್ಯಾಬ್ಲೆಟ್ 8300mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಜೊತೆ 35W ಚಾರ್ಜಿಂಗ್‌ ಸಪೋರ್ಟ್ ಮಾಡುತ್ತದೆ. ಈ ಟ್ಯಾಬ್ಲೆಟ್ ಸ್ಟ್ಯಾಂಗ್ ಬೈ ಮೋಡ್‌ನಲ್ಲಿ 70 ದಿನಗಳವರೆಗೆ ಬ್ಯಾಟರಿ ಬಾಳಿಕೆಗೆ ಬರುತ್ತದೆ. ಡಿವೈಸ್ ಡೈಮೆನ್ಸನ್ 267.3*167*77mm ಮತ್ತು ತೂಕ 475 ಗ್ರಾಂ ಹೊಂದಿದೆ. ಸದ್ಯ ಈ ಟ್ಯಾಬ್ಲೆಟ್ ಮಲೇಶಿಯಾದಲ್ಲಿ ಮಾತ್ರ ಬಿಡುಗಡೆಯಾಗಿದೆ.

ಇದನ್ನೂ ಓದಿ: Oppo F29 5G ಸಿರೀಸ್‌: ಕಡಿಮೆ ಬೆಲೆ, ಸೂಪರ್ ಫೀಚರ್ಸ್ ಇರೋ ಬೊಂಬಾಟ್‌ ಫೋನ್‌ ರಿಲೀಸ್‌ಗೆ ರೆಡಿ!

vuukle one pixel image
click me!