Apple iPad Air Gen 5: ಆಪಲ್ ಐಪ್ಯಾಡ್ ಏರ್ ಜೆನ್ 5 ಬಿಡುಗಡೆ, ಏನೆಲ್ಲ ವಿಶೇಷ, ಬೆಲೆ ಎಷ್ಟಿದೆ?

By Suvarna NewsFirst Published Mar 9, 2022, 6:29 PM IST
Highlights

* ಆಪಲ್ ಐಫೋನ್ ಎಸ್ಇ 5ಜಿ 2022 ಫೋನ್ ಜತೆಗೆ ಆಪಲ್ ಐಪ್ಯಾಡ್ ಏರ್ ಜೆನ್ 5 ಬಿಡುಗಡೆ
* ಈ ಹೊಸ ಟ್ಯಾಬ್‌ನಲ್ಲಿ ಕಂಪನಿಯು ಎಂ1 ಚಿಪ್ ಬಳಸಿದೆ. ಇದೇ ಚಿಪ್ ಐಪ್ಯಾಡ್ ಪ್ರೋನಲ್ಲೂ ಇದೆ
* ಐಪ್ಯಾಡ್ ಏರ್ ಜೆನ್ 5 ಟ್ಯಾಬ್ ಬಗ್ಗೆ ಬಳಕೆದಾರರಿಗೆ ಸಾಕಷ್ಟು ಕುತೂಹಲವಿತ್ತು

ಆಪಲ್ ಕಂಪನಿಯ ಮಾರ್ಚ್ 8ರ ಇವೆಂಟ್‌ನಲ್ಲಿ ಐಫೋನ್ ಎಸ್ಇ 5ಜಿ 2022 (Apple iPhone SE 5G 2022) ಸೇರಿದಂತೆ ಅನೇಕ ಸಾಧನಗಳು, ಅಪ್‌ಗ್ರೇಡ್ ವರ್ಷನ್ ಡಿವೈಎಸ್‌ಗಳು ಬಿಡುಗಡೆಯಾಗಿವೆ. ಈ ಪೈಕಿ ಆಪಲ್ ಐಪ್ಯಾಪ್ ಏರ್ ಜೆನ್ 5 (Apple iPad Air Gen 5) ಕೂಡ ಗಮನ ಸೆಳೆಯುತ್ತಿದೆ. ಈ ಮೊದಲಿನಿಂದಲೂ 5ನೇ ತಲೆಮಾರಿನ ಈ ಆಪಲ್ ಐ ಪ್ಯಾಡ್ ಏರ್ ಟ್ಯಾಬ್ಲೆಟ್ ಬಳಕೆದಾರರಲ್ಲಿ ಸಾಕಷ್ಟು ಕುತೂಹಲವಿತ್ತು. ಆನ್‌ಲೈಲನ್‌ನಲ್ಲಿ ಈ ಟ್ಯಾಬ್ ಬಗ್ಗೆ ಸಾಕಷ್ಟು ಮಾಹಿತಿಗಳು ಸೋರಿಕೆಯಾದ್ದರಿಂದ ಎಲ್ಲರ ದೃಷ್ಟಿ ನೆಟ್ಟಿತ್ತು. ಇದೀಗ ಎಲ್ಲ ಕುತೂಹಲಕ್ಕೆ ತೆರೆ ಬಿದ್ದಿದ್ದು, ಆಪಲ್ ಐ ಪ್ಯಾಪ್ ಏರ್ ಬಗ್ಗೆ ಸಾಕಷ್ಟು ಮಾಹಿತಿಗಳು ಗೊತ್ತಾಗುತ್ತಿವೆ. ಇತ್ತೀಚಿನ ಐಪ್ಯಾಡ್ ಪ್ರೋ ರೀತಿಯಲ್ಲೇ ಈಗ ಬಿಡುಗಡೆಯಾಗಿರುವ ಆಪಲ್ ಐಪ್ಯಾಡ್ ಏರ್‌ನಲ್ಲೂ ಎಂ1 ಚಿಪ್‌ ಬಳಸಲಾಗಿರುವುದು ಗಮನ ಸೆಳೆಯುತ್ತಿದೆ.

Realme C35: ಕೈಗೆಟುಕುವ ದರದಲ್ಲಿ ರಿಯಲ್‌ಮಿ C35 ಫೋನ್ ಲಾಂಚ್, ರೆಡ್‌ಮಿ ಸ್ಯಾಮ್ಸಂಗ್‌ಗೆ ಪೈಪೋಟಿ!

ಈ ಹೊಸ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಹೊಂದಿದೆ. 10.9 ಇಂಚ್ ಲಿಕ್ವಿಟ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಐಪ್ಯಾಡ್ ಏರ್ 500 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ ಮತ್ತು P3 ವೈಡ್ ಕಲರ್ ಗ್ಯಾಮಟ್, ಟ್ರೂ ಟೋನೆ ಮತ್ತು ಆಂಟಿ-ರಿಫ್ಲೆಕ್ಟಿವ್ ಸ್ಕ್ರೀನ್ ಕೋಟಿಂಗ್‌ನೊಂದಿಗೆ ಬರುತ್ತದೆ. ಇದು ಸ್ಪೇಸ್ ಗ್ರೇ, ಸ್ಟಾರ್‌ಲೈಟ್, ಪಿಂಕ್, ಪರ್ಪಲ್, ನ್ಯೂ ಬ್ಲೂಯ ಶೇಡ್‌ ಬಣ್ಣಗಳ ಆಯ್ಕೆಯಲ್ಲೂ ಸಿಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಟ್ಯಾಬ್ ತನ್ನ ವಿಶಿಷ್ಟ ತಾಂತ್ರಿಕತೆಯಿಂದ ಹೆಚ್ಚು ಗಮನ ಸೆಳೆಯುತ್ತಿದೆ. ಈಗಾಗಲೇ ಹೇಳಿದಂತೆ, ಕಂಪನಿಯು ಈ ಟ್ಯಾಬ್ಲೆಟ್‌ನಲ್ಲಿ ಎಂ1 ಚಿಪ್ ಬಳಸಿದ್ದು, 8 ಕೋರ್ ಸಿಪಿಯು, 8 ಕೋರ್ ಜಿಪಿಯುವ ಹಾಗೂ 16 ಕೋರ್ ನ್ಯೂರಾಲ್ ಎಂಜಿನ್ ಅಡ್ವಾನ್ಸ್ಡ್ ಮಷಿನ್ ಲರ್ನಿಂಗ್ ಫಂಕ್ಷನ್‌ ಹೊಂದಿದೆ. ಇದು 4ಕೆ ಎಡಿಟಿಂಗ್‌ಗೂ ಸಕ್ರಿಯಗೊಳಿಸಬಲ್ಲದು.

ಬಳಕೆದಾರರಿಗೆ ಈ ಟ್ಯಾಬ್‌ ಭಾರೀ ಗ್ರಾಫಿಕ್ ಗೇಮ್‌ಪ್ಲೇ ಮತ್ತು ಹೆಚ್ಚು ರಿಯಲಿಸ್ಟಿಕ್ ಆಗಿರುವ ಎಆರ್(AR) ಅನುಭವವನ್ನು ನೀಡುತ್ತದೆ. ಈ ಹೊಸ ಆಪಲ್ ಐಪ್ಯಾಡ್ ಏರ್ 3.5Gbps ಸ್ಪೀಡ್‌ಗೆ ಸಪೋರ್ಟ್ ಮಾಡುತ್ತದೆ. ಜತೆಗೆ eSIM ಮತ್ತು WiFi 6ಗೆ ಸಪೋರ್ಟ್ ಮಾಡುತ್ತದೆ. ಇನ್ನು ಟ್ಯಾಬ್ಲೆಟ್‌ನಲ್ಲಿರುವ USB-C ಪೋರ್ಟ್ ಈಗ ಹಳೆಯ ತಲೆಮಾರುಗಳಿಗೆ ಹೋಲಿಸಿದರೆ ಎರಡು ಪಟ್ಟು ವೇಗವಾಗಿದೆ ಮತ್ತು ಕ್ಯಾಮೆರಾಗಳು, ಬಾಹ್ಯ ಸಂಗ್ರಹಣೆ ಮತ್ತು 6K ರೆಸಲ್ಯೂಶನ್‌ನೊಂದಿಗೆ ಡಿಸ್‌ಪ್ಲೇಗಳು ಸೇರಿದಂತೆ ಸಾಧನಗಳ ವ್ಯಾಪ್ತಿಯನ್ನು ಸಂಪರ್ಕಿಸಲು ಅನುಮತಿಸುತ್ತದೆ ಎಂದು ಹೇಳಬಹುದು. 

ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಈ ಹೊಸ ಆಪಲ್ ಐಪ್ಯಾಡ್ ಏರ್ (iPad Air)ನಲ್ಲಿ ಕಂಪನಿಯು 12 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಿದೆ. ವಿಡಿಯೋ ಕಾಲ್‌ನಲ್ಲಿ ಹೆಚ್ಚು ಜನರು ಕವಲ್ ಆಗುವಂತೆ ಮಾಡಲು ಕ್ಯಾಮೆರಾದಲ್ಲಿ ಸೆಂಟರ್ ಫೀಚರ್ ನೀಡಲಾಗಿದೆ. ಐಪ್ಯಾಡ್ಒಎಸ್ 15 ಆಧರಿತವಾಗಿರುವ ಈ ಟ್ಯಾಬ್, ಹಿಂಬದಿಯಲ್ಲೂ 12 ಮೆಗಾ ಪಿಕ್ಸೆಲ್ ವೈಡ್ ಕ್ಯಾಮೆರಾ ಬಳಸಲಾಗಿದೆ. ಜತೆಗೆ ಈ ಟ್ಯಾಬ್, ಆಪಲ್ ಪೆನ್ಸಿಲ್, ಸ್ಮಾರ್ಟ್ ಕೀಬೋರ್ಡ್, ಮ್ಯಾಜಿಕ್ ಕೀಬೋರ್ಡ್, ಸ್ಮಾರ್ಟ್ ಫೋಲಿಯೋಗೂ ಸಪೋರ್ಟ್ ಮಾಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ  ಐಪ್ಯಾಡ್ ಏರ್ ವೈಫೈ-ಮಾತ್ರ ಮಾದರಿಗೆ 54,900 ರೂ. ಮತ್ತು ವೈಫೈ + ಸೆಲ್ಯುಲಾರ್ ಮಾದರಿ  68,900 ರೂ.ನಿಂದ ಪ್ರಾರಂಭವಾಗುತ್ತದೆ. iPad Air Gen 5 ಭಾರತದಲ್ಲಿ 64 GB ಮತ್ತು 256 GB ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ಮಾರ್ಚ್ 11 ರಿಂದ ಬಳಕೆದಾರರು ಈ ಹೊಸ ಟ್ಯಾಬ್‌ಗೆ ಆರ್ಡರ್ ಮಾಡಬಹುದು. 

iPhone SE 2022 Launched: ಐಫೋನ್ ಎಸ್ಇ 2022 ಲಾಂಚ್, ಏನೆಲ್ಲ ವಿಶೇಷತೆ, ಬೆಲೆ ಎಷ್ಟಿದೆ?

click me!