ಏರ್ಟೆಲ್‌ನ ಡಿಜಿಟಲ್‌ ಎಕ್ಸ್‌ಟ್ರೀಮ್‌; ಸಾಮಾನ್ಯ ಟಿವಿಯೂ ಇನ್ಮುಂದೆ ಸ್ಮಾರ್ಟ್‌ ಟಿವಿ!

By Web Desk  |  First Published Oct 8, 2019, 3:24 PM IST

ಎಲ್ಲಾ ಕಡೆ ಸ್ಮಾರ್ಟ್ ಟಿವಿ ಹವಾ. ಆದ್ರೆ, ನೀವು ಮಾತ್ರ ಸಾಮಾನ್ಯ ಟಿವಿ ಖರೀದಿಸಿ ಪರಿತಪಿಸುತ್ತಿದ್ದೀರಾ? ಹಾಗಾದ್ರೆ ಚಿಂತೆ ಬಿಡಿ. ಏರ್ಟೆಲ್‌ ಬಿಡುಗಡೆ ಮಾಡಿರುವ ಹೊಸ ಸಾಧನ, ನಿಮ್ಮ ದುಗುಡವನ್ನು ದೂರಾ ಮಾಡುತ್ತೆ! 


ಬೆಂಗಳೂರು (ಅ.08): ಟಿವಿ ಕಾರ್ಯಕ್ರಮ, ನೆಟ್‌ಫ್ಲಿಕ್ಸ್‌ ಸಿನಿಮಾ, ಹಾಡುಗಳು ಇತ್ಯಾದಿ ಮನರಂಜನೆಯನ್ನು ಒಂದೇ ಸ್ಕ್ರೀನ್‌ನಲ್ಲಿ ಪಡೆಯಬಹುದಾದ ಡಿವೈಸ್‌ಅನ್ನು ಭಾರ್ತಿ ಏರ್ಟೆಲ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಇದರ ಹೆಸರು ಏರ್ಟೆಲ್‌ ಡಿಜಿಟಲ್‌ ಎಕ್ಸ್‌ಟ್ರೀಮ್‌. ಈ ಹೊಸ ಸಾಧನ ಸಾಮಾನ್ಯ ಟಿವಿಯನ್ನೂ ಸ್ಮಾರ್ಟ್‌ ಟಿವಿಯಾಗಿ ಪರಿವರ್ತಿಸುತ್ತದೆ. ಇದು ಆ್ಯಂಡ್ರಾಯ್ಡ್‌ 8.0 ಆಧಾರಿತ ಸಾಧನ. 

Tap to resize

Latest Videos

ಇದನ್ನೂ ಓದಿ: ಟ್ಯಾಗ್‌ನ ವೈರ್‌ಲೆಸ್‌ ಇಯರ್‌ಬಡ್‌: ಕಿವಿಯಲ್ಲಿದ್ದರೆ ಸಾಕು, ಬದಲಿಸುತ್ತೆ ಮೂಡ್!...

ಈ ಉಪಕರಣದ ಬಗ್ಗೆ ವಿವರಣೆ ನೀಡಿದ ಏರ್ಟೆಲ್‌ನ ಮುಖ್ಯ ಪ್ರಾಡಕ್ಟ್ ಆಫೀಸರ್‌ ಆದರ್ಶ ನಾಯರ್‌ ಅವರು, ಒಟಿಟಿ ಸ್ಮಾರ್ಟ್‌ ಸ್ಟಿಕ್‌, ಇಂಟರ್‌ನೆಟ್‌ ಸಂಪರ್ಕವಿರುವ ಸೆಟ್‌ಟಾಪ್‌ ಬಾಕ್ಸ್‌ ಮತ್ತು ಹ್ಯಾಂಡ್‌ಹೆಲ್ಡ್‌ ಸಾಧನಗಳ ಮೂಲಕ ಲೈವ್‌ ಟಿವಿ, ವಿಡಿಯೋ, ಮ್ಯೂಸಿಕ್‌, ನ್ಯೂಸ್‌ ಮತ್ತು ಕ್ರೀಡೆ ಮೊದಲಾದ ಪ್ರೋಗ್ರಾಂಗಳನ್ನು ಗ್ರಾಹಕರು ಒಂದೇ ಪರದೆಯಲ್ಲಿ ವೀಕ್ಷಿಸಬಹುದು’ ಎಂದರು.

ಅಂದ ಹಾಗೆ ಇದರ ಬೆಲೆ 3999 ರು. ಮಾತ್ರ.
 

click me!