7ವರ್ಷದ ಕು.ವೈದ್ರುತಿ ಕೋರಿಶೆಟ್ಟರ್‌ಗೆ ಡಾಕ್ಟರೇಟ್ ಗೌರವ!

Suvarna News   | Asianet News
Published : Jan 25, 2020, 04:28 PM IST
7ವರ್ಷದ ಕು.ವೈದ್ರುತಿ ಕೋರಿಶೆಟ್ಟರ್‌ಗೆ ಡಾಕ್ಟರೇಟ್ ಗೌರವ!

ಸಾರಾಂಶ

ವಯಸ್ಸು ಕೇವಲ 7. ಎರಡನೇ ತರಗತಿಯಲ್ಲಿ ಓದುತ್ತಿರುವ ಕುಮಾರಿ ವೈದ್ರುತಿ ನಾಗ್ ಕೋರಿಶೆಟ್ಟರ್‌ ಅತ್ಯುನ್ನತ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಚಿಕ್ಕವಯಸ್ಸಿನಲ್ಲೇ ವೈದ್ರುತಿಗೆ ಡಾಕ್ಟರೇಟ್ ಗೌರವ ಸಿಕ್ಕಿದ್ದು ಹೇಗೆ? ಇಲ್ಲಿದೆ ವಿವರ. 

ಬೆಂಗಳೂರು(ಜ.25): ಎಲ್ಲಾ ಕ್ಷೇತ್ರದಲ್ಲೂ ಅಪಾರ ಜ್ಞಾನ ಹಾಗೂ ನೆನಪಿನ ಶಕ್ತಿಹೊಂದಿರುವ  7 ವರ್ಷದ ಕುಮಾರಿ ವೈದ್ರುತಿ ನಾಗ್ ಕೋರಿಶೆಟ್ಟರ್‌ ಸಾಧನೆಗೆ ಡಾಕ್ಟರೇಟ್ ಗೌರವ ಒಲಿದಿದೆ. ಮುದ್ರಣ ಕಾಶಿ ಗದಗ ಜಿಲ್ಲೆಯ ವೈದ್ರುತಿಗೆ ಇಂದು(ಜ.25) ಸಂಜೆ ತಮಿಳುನಾಡಿನ ಮಧುರೈನಲ್ಲಿ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. 

ಇದನ್ನೂ ಓದಿ: ಗದಗ ಬಸ್‌ ನಿಲ್ದಾಣಕ್ಕೆ ಪುಟ್ಟರಾಜರ ಹೆಸರಿಡಲು ಒತ್ತಾಯ

ಚಿಕ್ಕ ವಯಸ್ಸಿನಲ್ಲಿ ಕುಮಾರಿ ವೈದ್ರುತಿ ನಾಗ್ ಕೋರಿಶೆಟ್ಟರ್‌ ಸಾಧನೆಯನ್ನು ಪರಿಗಣಿಸಿದ ತಮಿಳುನಾಡಿನ ಯೂನಿವರ್ಸಲ್ ವಿಶ್ವವಿದ್ಯಾಲಯ ಗೌರವ್ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. 7ನೇ ವಯಸ್ಸಿಗೆ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗೋ ಮೂಲಕ ವೈದ್ರುತಿ ಗದಗ ಮಾತ್ರವಲ್ಲ ಕರ್ನಾಟಕವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾಳೆ.

ರಾಜಕೀಯ, ಅರ್ಥಶಾಸ್ತ್ರ, ಇತಿಹಾಸ ಕನ್ನಡ ಪ್ರಾದೇಶಿಕ ಹಾಗೂ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕುರಿತ ಯಾವುದೇ ವಿಚಾರವನ್ನು ನಿರರ್ಗಳವಾಗಿ ಮಾತನಾಡಬಲ್ಲ, ಹಾಗೂ ಯಾವುದೇ ಪ್ರಶ್ನೆಗೂ ಉತ್ತರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.ಮೂಲತ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ ವೈದ್ರುತಿ ಸದ್ಯ  ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ವಾಸವಿದ್ದಾರೆ.

ಗದಗ ಜಿಲ್ಲೆಯ ನರಗುಂದ ಪಟ್ಟಣದ ಸರ್ ಎಂ ವಿಶ್ವೇಶ್ವರಯ್ಯ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯಾಗಿರುವ ವೈದ್ರುತಿ ಈಗಾಗಲೇ ಕರ್ನಾಟಕ ಜ್ಞಾನ ಚಕ್ರವರ್ತಿ, ಕರುನಾಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದಿದ್ದಾಳೆ. 

ವೈದ್ರುತಿ ನಾಗ್ ಕೋರಿಶೆಟ್ಟರ್ ತಾಯಿ ಭಾರತಿ ನರಗುಂದದಲ್ಲಿ ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದರೆ, ತಂದೆ ನಾಗರಾಜ್ ಖಾಸಗಿ ವೃತ್ತಿ ಮಾಡುತ್ತಿದ್ದಾರೆ.  ಮಗಳ ಸಾಧನೆ ಪ್ರೋತ್ಸಾಹ ನೀಡುತ್ತಿರುವ ಪೋಷಕರು, ಇದೀಗ ಡಾಕ್ಟರೇಟ್ ಗೌರವಕ್ಕೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 
 

PREV
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ