‘ನೆರೆ ಸಂತ್ರಸ್ತರಿಗೆ 5 ಲಕ್ಷ ಪರಿಹಾರ ಯಾವ ರಾಜ್ಯದಲ್ಲಿಯೂ ನೀಡಿಲ್ಲ’

By Web Desk  |  First Published Nov 7, 2019, 9:16 AM IST

ಪ್ರವಾಹ ಪ್ರದೇಶಾಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂದ ಸಚಿವ ವಿ ಸೋಮಣ್ಣ| ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ಪ್ರವಾಹಕ್ಕೆ ಕುಸಿದುಬಿದ್ದ ಮನೆ, ಶಾಲೆ ವೀಕ್ಷಿಸಿದ ಸಚಿವ ಸೋಮಣ್ಣ | ಶಿಥಿಲ ಶಾಲೆ ನೆಲಸಮಕ್ಕೆ ಸೂಚನೆ| ಸಿಎಂ ಬಿಎಸ್‌ವೈ ಉಳಿದ ಅವಧಿಯನ್ನು ಪೂರೈಸಲಿದ್ದಾರೆ| ಈ ಬಗ್ಗೆ ಯಾವುದೇ ಸಂದೇಹವಿಲ್ಲ| ನಮ್ಮ ಪಕ್ಷದಲ್ಲಿ ಯಡಿಯೂರಪ್ಪನವರು ಪ್ರಶ್ನಾತೀತ ನಾಯಕರು|


ನರಗುಂದ[ನ.7]: ಮಲಪ್ರಭಾ ನದಿಯ ಪ್ರವಾಹ ಮತ್ತು ರಾಜ್ಯದಲ್ಲಿ ಇತರೆ ನದಿಗಳಿಂದ ಈ ವರ್ಷ ಪ್ರವಾಹ ಬಂದು ಹಲವಾರು ಗ್ರಾಮಗಳು ಜಲಾವೃತಗೊಂಡು ಸಾವಿರಾರು ಕೋಟಿ ಹಾನಿ ಮಾಡಿದೆ. ಆದರೆ ಸರ್ಕಾರ ಈಗಾಗಲೇ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ಅಗತ್ಯ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡುತ್ತದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಯಾವುದೇ ರೀತಿ ಹಣ ಕೊರತೆ ಇರುವುದಿಲ್ಲವೆಂದು ವಸತಿ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ. 

ಅವರು ಬುಧವಾರ ತಾಲೂಕಿನ ಕೊಣ್ಣೂರ ಗ್ರಾಮದ ಮಲಪ್ರಭೆ ನದಿ ಪ್ರವಾಹದಿಂದ ಕುಸಿದು ಬಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಗ್ರಾಮದಲ್ಲಿ ಬಿದ್ದ ಮನೆಗಳನ್ನು ವೀಕ್ಷಣೆ ಮಾಡಿ ಆನಂತರ ಮಾತನಾಡಿದರು. ಪ್ರಸಕ್ತ ವರ್ಷ ಆಗಸ್ಟ್, ಅಕ್ಟೋಬರ್ ತಿಂಗಳವರೆಗೆ ಬಿಟ್ಟು ಬಿಡದೆ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ನದಿ ಹಾಗೂ ಹಳ್ಳಗಳಗೆ ಪ್ರವಾಹ ಬಂದು ಸುಮಾರು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿ ಅಪಾರಪ್ರಮಾಣದಲ್ಲಿ ಪ್ರವಾಹದಿಂದ ಮನೆ, ಬೆಳೆ, ಜಾನುವಾರಗಳು, ದವಸ ಧಾನ್ಯಗಳ ಹಾನಿ ಮಾಡಿಸಂತ್ರಸ್ತರನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯದಲ್ಲಿ ಪ್ರವಾಹ ಪ್ರಾರಂಭಗೊಂಡಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡಿದ್ದರು. ಇನ್ನು ಸಚಿವರ ಖಾತೆ ಹಂಚಿಕೆ ಆಗದ ಸಮಯದಲ್ಲಿ ನಮ್ಮ ಮುಖ್ಯಮಂತ್ರಿಗಳು ಹಗಲು ರಾತ್ರಿ ಎನ್ನದೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿ ಹೆಚ್ಚು ಪ್ರಾಣ ಹಾನಿ ಆಗದ ಹಾಗೆ ಜನತೆಗೆ ರಕ್ಷಣೆ ನೀಡಿ ನೋಡಿಕೊಂಡಿದ್ದಾರೆ. ಅದೇ ರೀತಿ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಷಣ ಅವರ ದಿನ ನಿತ್ಯದ ಖರ್ಚಿಗೆ 10 ಸಾವಿರ ಹಣ ನೀಡಿದ್ದಾರೆ. ಸಂಪೂರ್ಣ ಮನೆ ವಾಸ ಮಾಡಲಿಕ್ಕೆ ಯೋಗ್ಯವಾಗದ ಜನತೆಗೆ ತಾತ್ಕಾಲಿಕ ಶೆಡ್‌ಗಳನ್ನುನಿರ್ಮಾಣ ಮಾಡಲು ನಮ್ಮ ಸರ್ಕಾರ ಕ್ರಮತೆಗೆದುಕೊಂಡಿದೆ. ತಾಲೂಕಿನ ಕೊಣ್ಣೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ನದಿ ಪಕ್ಕದಲ್ಲಿರುವುದರಿಂದ ಪ್ರವಾಹ ಹೊಕ್ಕು ಸಂಪೂರ್ಣ ಶಾಲೆಯ ಎಲ್ಲ ಕೊಠಡಿಗಳನ್ನು ಹಾನಿ ಮಾಡಿದೆ. ಈ ಶಾಲೆ ಯಾವ ಸಮಯದಲ್ಲಿ ಬೀಳುವುದು ತಿಳಿಯದಾಗಿದೆ. ಆದ್ದರಿಂದ ಜಿಪಂ ಅಧಿಕಾರಿಗಳು ಬೇಗ ಕ್ರಮ ತೆಗೆದುಕೊಂಡು ಪ್ರವಾಹದ ನೀರಿಗೆ ಶಿಥಿಲಗೊಂಡ ಶಾಲೆಯನ್ನು ಯಂತ್ರಗಳ ಮೂಲಕ ನೆಲಸಮ ಮಾಡಬೇಕು, ಸಂತ್ರಸ್ತರ ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಪ್ರಾರಂಭ ಮಾಡಬೇಕು, ಪ್ರವಾಹದಿಂದ ಬೆಳೆ ಹಾನಿಮಾಡಿ ಕೊಂಡ ರೈತರಿಗೆ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ. ಎರಡು ಮೂರು ದಿನಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ಪರಿಹಾರ ಜಮಾ ಆಗುವದು. ಸಂತ್ರಸ್ತರು ಹೆದರದೆ ಧೈರ್ಯದಿಂದ ಇರಬೇಕು, ನಿಮ್ಮ ಜೊತೆ ನಮ್ಮ ಸರ್ಕಾರ ಇದೆ ಎಂದು ಹೇಳಿದರು. 

5 ಲಕ್ಷ ಪರಿಹಾರ ಯಾವ ರಾಜ್ಯದಲ್ಲೂ ನೀಡಿಲ್ಲ 

ಪ್ರವಾಹ ಸಂತ್ರಸ್ತರಿಗೆ ನಾವು ಯಾವ ರೀತಿ ಪರಿಹಾರ ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇರುವ ರಾಜಸ್ಥಾನ ಮತ್ತು ಮಧ್ಯಪ್ರದೇಶದ ರಾಜ್ಯಗಳಲ್ಲಿ ಯಾವ ರೀತಿ ಪರಿಹಾರ ಕೊಟ್ಟಿದ್ದಾರೆ ಎನ್ನುವುದನ್ನು ಮಾಹಿತಿ ತರಿಸಿ ನೋಡಿದರೆ ದೇಶದಲ್ಲಿ ನಮ್ಮಷ್ಟು ಪರಿಹಾರ ಯಾವ ರಾಜ್ಯದವರೂ ನೀಡಿಲ್ಲವೆಂದು ಸಚಿವ ವಿ. ಸೋಮಣ್ಣ ಹೇಳಿದರು.

ಸಂತ್ರಸ್ತರಿಗೆ ಸಿಎಂ ಬಿಎಸ್‌ವೈ ಮತ್ತು ಸಂಪುಟ ಸದಸ್ಯರು ಸ್ಪಂದಿಸಿದ್ದೇವೆ. ಆದರೆ ವಿರೋಧ ಪಕ್ಷದವರು ಸುಮ್ಮನೆ ಪ್ರಚಾರಕ್ಕಾಗಿ ಬಿಜೆಪಿ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲವೆಂದು ಹೇಳುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನೆ ಮಾಡಿದರು. ನಾನು ಈಗಾಗಲೇ ಬೆಳಗಾವಿ, ಬಾಗಲೋಟೆ ಜಿಲ್ಲೆಗಳ ಪ್ರವಾಹ ಪ್ರದೇಶಗಳಗೆ ಭೇಟಿ ನೀಡಿ ಬಂದಿದ್ದೇನೆ, ಆದರೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಮಲಪ್ರಭೆ ನದಿ ಹಾಗೂ ಬೆಣ್ಣಿಹಳ್ಳದ ಪ್ರವಾಹ ಸಂತ್ರಸ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು ಒಬ್ಬ ಕಾರ್ಯಕರ್ತರ ರೀತಿಯಲ್ಲಿ ಈ ಭಾಗದಲ್ಲಿ ಕೆಲಸ ಮಾಡಿದ್ದು ನನಗೆ ಸಂತೋಷ ತಂದಿದೆ. ಮೇಲಾಗಿ ನಾನು ಹಲವಾರು ಜಿಲ್ಲೆಗಳ ಪ್ರವಾಹ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ, ಯಾವ ಜಿಲ್ಲೆಯಲ್ಲೂ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಮಾಡಿಲ್ಲ. ಪ್ರವಾಹ ಪೀಡಿತ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡಿದ್ದು ಇದೇ ತಾಲೂಕು ಎಂದರು.

ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಉದ್ದೇಶ ಪೂರ್ವಕವಾಗಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ತಂದು ಎರಡು ಕೋಮಗಳ ಮಧ್ಯೆ ಗಲಭೆ ಎಬ್ಬಿಸುವ ಕೆಲಸವನ್ನು ಆ ಸರ್ಕಾರ ಮಾಡಿದೆ. ಈ ಸರ್ಕಾರ ಮುಸ್ಲಿಂ ಸಮುದಾಯದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಮತ್ತು ಸಂತ ಶಿಶುನಾಳ ಶರೀಫರ ಜಯಂತಿ ಆಚರಣೆಗೆ ಎಕೆ ತರಲಿಲ್ಲ ಹೇಳಿ ಎಂದರು.

ರಾಜ್ಯದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್‌ ಹೇಗಾದರು ಮಾಡಿ ಪ್ರವಾಹ ವಿಷಯವನ್ನು ಮುಂದೆ ಇಟ್ಟುಕೊಂಡು ಜನತೆಯಲ್ಲಿ ತಪ್ಪು ಸಂದೇಶ ನೀಡಿ ಈ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಪತನವಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದೆ. ಸಿಎಂ ಬಿಎಸ್‌ವೈ ಉಳಿದ ಅವಧಿಯನ್ನು ಪೂರೈಸಲಿದ್ದಾರೆ. ಈ ಬಗ್ಗೆ ಯಾವುದೇ ಸಂದೇಹವಿಲ್ಲ. ನಮ್ಮ ಪಕ್ಷದಲ್ಲಿ ಯಡಿಯೂರಪ್ಪನವರು ಪ್ರಶ್ನಾತೀತ ನಾಯಕರು ಎಂದರು. 

ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಪರಿಸರ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಮಲಪ್ರಭೆ ನದಿ ಹಾಗೂ ಬೆಣ್ಣಿ ಹಳ್ಳದ ಪ್ರವಾಹಕ್ಕೆ ಮನೆ ಕಳೆದುಕೊಂಡ ಸಂತ್ರಸ್ತರು ಹೊಸ ಮನೆ ಕಟ್ಟಿಕೊಳ್ಳಲು ಅವರಗೆ ಯಾವುದೇ ರೀತಿಕಾನೂನು ಅಡ್ಡಯಾಗದ ಹಾಗೆ ಮರಳು ಬಳಕೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಂತ್ರಸ್ತರಗೆ ಮನೆ ಕಟ್ಟಿಕೊಳ್ಳಲು ಮರಳು ಬಳಕೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುತ್ತವೆಂದು ಹೇಳಿದರು. 
 

click me!