ಗದಗ: ಮತ್ತೆ ಮಳೆ ಪ್ರಾರಂಭ, ಸಂಕಷ್ಟದಲ್ಲಿ ರೈತರು

Published : Nov 09, 2019, 11:09 AM IST
ಗದಗ: ಮತ್ತೆ ಮಳೆ ಪ್ರಾರಂಭ, ಸಂಕಷ್ಟದಲ್ಲಿ ರೈತರು

ಸಾರಾಂಶ

ಡಂಬಳ ಹೋಬಳಿಯ ಗ್ರಾಮಗಳಲ್ಲಿ ಮತ್ತೆ ಮಳೆ ಪ್ರಾರಂಭ| ರೈತರು ಸೇರಿದಂತೆ ಸಾರ್ವಜನಿಕರಲ್ಲಿ ಆತಂಕ| ಕಳೆದ ತಿಂಗಳು ಸತತ ಧಾರಾಕಾರವಾಗಿ ಸುರಿದ ಮಳೆಯಿಂದ ಬಹುತೇಕ ರೈತರ ಈರುಳ್ಳಿ ಬೆಳೆ ಸೇರಿದಂತೆ ಬಹುತೇಕ ಬೆಳೆ ನಾಶವಾಗಿತ್ತು|

ಡಂಬಳ(ನ.9): ಜಿಲ್ಲೆಯ ಡಂಬಳ ಗ್ರಾಮ ಸೇರಿದಂತೆ ಡಂಬಳ ಹೋಬಳಿಯ ಗ್ರಾಮಗಳಲ್ಲಿ ನಾಲ್ಕೈದು ದಿನಗಳ ಕಾಲ ಮಳೆ ವಿರಾಮ ನೀಡಿದ್ದರಿಂದ ನಿತ್ಯ ಬಿಸಿಲು ಬೀಳುತ್ತಿತ್ತು. ಹೀಗಾಗಿ ಅಳಿದುಳಿದ ಈರುಳ್ಳಿ, ಸೂರ್ಯಪಾನ ಸೇರಿದಂತೆ ಇತರೆ ಬೆಳೆಗಳ ರಾಸಿಯನ್ನು ಮಾಡುವ ಮೂಲಕ ಮಾರುಕಟ್ಟೆಗೆ ಕಳಿಸಿದರು. ಆದರೆ ಮತ್ತೆ ಮಳೆ ಪ್ರಾರಂಭವಾಗುತ್ತಿದ್ದಂತೆ ರೈತರು ಸೇರಿದಂತೆ ಸಾರ್ವಜನಿಕರು ಆತಂಕದಲ್ಲಿ ಜೀವನ ಕಳೆಯುವಂತೆ ಮಾಡಿದೆ.

ಕಳೆದ ತಿಂಗಳು ಸತತ ಧಾರಾಕಾರವಾಗಿ ಸುರಿದ ಮಳೆಯಿಂದ ಬಹುತೇಕ ರೈತರ ಈರುಳ್ಳಿ ಬೆಳೆ ಸೇರಿದಂತೆ ಬಹುತೇಕ ಬೆಳೆಗಳನ್ನು ಕಟಾವು ಮಾಡದೆ ಕೊಳೆತಸ್ಥಿತಿಯೂ ನಿರ್ಮಾಣವಾಗಿ ಸಾವಿರಾರು ಹೆಕ್ಟೇರ್‌ ಈರುಳ್ಳಿ ಬೆಳೆ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಲವಾರು ಮನೆಗಳು ನೆಲಕಚ್ಚಿವೆ. ಅವುಗಳಿಗೆ 3500 ರು. ಸರ್ಕಾರ ಪರಿಹಾರವಾಗಿ ನೀಡುತ್ತಿದೆ. ಇದರಿಂದಾಗಿ ಬಾಡಿಗೆಮನೆಗಳು ಸಿಗದೆ ಕೂಲಿ ಕಾರ್ಮಿಕರು ಈಗಲೂ ಆತಂಕದಲ್ಲಿ ಜೀವನ ಕಳೆಯುತ್ತಿದ್ದಾರೆ. ಅಲ್ಲದೆ ರೈತರು ಹಿಂಗಾರಿನ ಬೆಳೆಗಾಗಿ ಹಿಂಗಾರಿನಲ್ಲಿ ಬಿತ್ತಿದ ಕಡ್ಲಿ, ಬಿಳಿ ಜೋಳ, ಮಕ್ಕೆಜೋಳ ಸೇರಿದಂತೆ ಬಹುತೇಕ ಬೆಳೆಗಳು ಅತಿಯಾದ ತಂಪಿನಿಂದಾಗಿ ನಾಶವಾಗುವ ಸ್ಥಿತಿಗೆ ಬಂದಿದ್ದವು. ಆದರೆ ನಾಲ್ಕೈದು ದಿನಗಳ ಕಾಲ ಮಳೆ ಬಿಡುವು ನೀಡಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಬಿದ್ದಿದ್ದರಿಂದ ಬೆಳೆಗಳು ಚೇತರಿಸಿಕೊಳ್ಳುವ ಹಂತದಲ್ಲಿದ್ದವು. ಆದರೆ ಮತ್ತೆ ಮಳೆ ಪ್ರಾರಂಭವಾಗಿದ್ದರಿಂದಾಗಿ ರೈತರು ಆತಂಕದಲ್ಲಿ ಜೀವನ ಕಳೆಯುವಂತಾಗಿದೆ.

ಹೀಗಾಗಿ ಕೊಯ್ಲ ಮಾಡಿರುವ ಮತ್ತು ಕೊಯ್ಲ ಮಾಡಬೇಕಿರುವ ಈರುಳ್ಳಿ ರಕ್ಷಣೆ ಮಾಡಲು ರೈತರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಜಿಟಿ ಜಿಟಿ ಮಳೆಯಿಂದ ಜಮೀನಿಗೆ ರೈತರು ಕೂಲಿ ಕಾರ್ಮಿಕರು ನಗರ ಪ್ರದೇಶಗಳಿಗೆ ತೆರೆಳಿದ್ದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಛತ್ರಿಯ ರಕ್ಷಣೆಯಲ್ಲಿ ಹೋಗುತ್ತಿದ್ದ ಚಿತ್ರಣ ಸಾಮಾನ್ಯವಾಗಿ ಕಂಡು ಬಂತು.
 

PREV
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ