ಅಯೋಧ್ಯೆ ತೀರ್ಪು: ಗದಗ ಜಿಲ್ಲಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ

By Web DeskFirst Published Nov 9, 2019, 8:57 AM IST
Highlights

ಅಯೋಧ್ಯೆ ತೀರ್ಪು ಹಿನ್ನೆಲೆ|ಜಿಲ್ಲಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ| ಅಹಿತಕರ ಘಟನೆಗಳು ನಡೆಯದಂತೆ ಭಾರೀ ಬಿಗಿ ಬಂದೋಬಸ್ತ್|ಜಿಲ್ಲೆಯ ಎಲ್ಲ ಸಂಘಟಗಳ ಮುಖಂಡರು ಹಾಗೂ ರಾಜಕೀಯ ಮುಖಂಡರ ಜೊತೆ ಎಸ್ಪಿ‌ ಶ್ರೀನಾಥ್ ಜೋಷಿ ಶಾಂತಿ ಸಭೆ|

ಗದಗ[ನ.9]: ಶ್ರೀ ರಾಮ ಜನ್ಮ ಭೂ ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇಂದು[ಶನಿವಾರ]   ಜಿಲ್ಲಾದ್ಯಂತ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ ಹಿರೇಮಠ ಅವರು ಹೇಳಿದ್ದಾರೆ.

ಇಂದು ರಾಮ ಜನ್ಮ ಭೂ ಅಯೋಧ್ಯೆಯ ತೀರ್ಪು ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ‌ ಭಾರೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾದ್ಯಂತ ಬಂದೋಬಸ್ತ್ ಗೆ ಕೆಎಸ್ ಆರ್ ಪಿ 3, ಡಿಆರ್ 10, ಡಿಎಸ್ ಪಿ 4, ಸಿಪಿಐ 13, ಪಿಎಸ್ ಐ 25, ಪಿಸಿ 1000, ಹೋಮ್‌ ಗಾರ್ಡ್ಸ್ 300 ಸೇರಿ  ಒಟ್ಟು 1335 ಸಿಬ್ಬಂದಿಗಳು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಯೋಧ್ಯೆ ತೀರ್ಪು ಯಾರ ಪರವಾದ್ರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಸ್ಪಿ ಶ್ರೀನಾಥ್ ಜೋಷಿ ಹಾಗೂ ಜಿಲ್ಲಾಧಿಕಾರಿ ಎಂ ಹಿರೇಮಠ ಅವರು ಸೂಕ್ರತ ಭದ್ರತೆಯನ್ನು ಒದಗಿಸಿದ್ದಾರೆ. ಜಿಲ್ಲೆಯ ಎಲ್ಲ ಸಂಘಟಗಳ ಮುಖಂಡರು ಹಾಗೂ ರಾಜಕೀಯ ಮುಖಂಡರ ಜೊತೆ ಎಸ್ಪಿ‌ ಶ್ರೀನಾಥ್ ಜೋಷಿ ಅವರು ಶಾಂತಿ ಸಭೆ ನಡೆಸಿ ಯಾವುದೇ ಅಹಿತಕರ ಘಟನೆಗಳು ನಡೆಸದಂತೆ ಎಚ್ಚರಿಕೆಯನ್ನ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಕೋಮು ಗಲಭೆಗಳಾದಲ್ಲಿ ಸಂಘಟನೆ ಹಾಗೂ ರಾಜಕೀಯ ಮುಖಂಡರುಗಳೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ. 
 

click me!