
ನವದೆಹಲಿ(ಅ.11): SAFF ಚಾಂಪಿಯನ್‌ಶಿಪ್ ಫುಟ್ಬಾಲ್(Football) ಟೂರ್ನಿಯಲ್ಲಿ ನೇಪಾಳ(Nepal) ವಿರುದ್ಧ ಮಿಂಚಿನ ಆಟ ಪ್ರದರ್ಶಿಸಿದ ಭಾರತದ ಸುನಿಲ್ ಚೆಟ್ರಿ(Sunil Chhetr) ಗೋಲು ಸಿಡಿಸಿ ಭಾರತಕ್ಕೆ 1-0 ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ಚೆಟ್ರಿ ದಿಗ್ಗಜ ಪೀಲೆ ದಾಖಲೆ ಸರಿಗಟ್ಟಿದರು.
ಮತ್ತೆರಡು ವರ್ಷಗಳ ಅವಧಿಗೆ ಸುನಿಲ್ ಚೆಟ್ರಿ ಜತೆ ಬಿಎಫ್‌ಸಿ ಒಪ್ಪಂದ
SAFF ಚಾಂಪಿಯನ್‌ಶಿಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರಿ ಹಿನ್ನಡೆ ಅನುಭವಿಸಿ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದ್ದ ಭಾರತ ತಂಡಕ್ಕೆ ಸುನಿಲ್ ಚೆಟ್ರಿ ಸಿಡಿಸಿದ ಗೋಲು ನೆರವಾಗಿದೆ. ನೇಪಾಳ ವಿರುದ್ಧ 1 ಗೋಲು ಸಿಡಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಈ ಗೋಲಿನಿಂದ ಸುನಿಲ್ ಚೆಟ್ರಿ ಅಂತಾರಾಷ್ಟ್ರೀ ಫುಟ್ಬಾಲ್ ಪಂದ್ಯದಲ್ಲಿ 77 ಗೋಲು ಸಿಡಿಸಿದ ಸಾಧನೆ ಮಾಡಿದ್ದಾರೆ. ಫುಟ್ಬಾಲ್ ಲೆಜೆಂಡ್ ಪೀಲೆ(pele) 77 ಗೋಲು ಸಿಡಿಸಿದ್ದಾರೆ. ಪೀಲೆ 92 ಪಂದ್ಯದಿಂದ 77 ಗೋಲು ಸಿಡಿಸಿದ್ದರೆ, ಸುನಿಲ್ ಚೆಟ್ರಿ 123 ಪಂದ್ಯದಲ್ಲಿ 77 ಗೋಲು ಸಿಡಿಸಿದ್ದಾರೆ. ಸದ್ಯ ಫುಟ್ಬಾಲ್‌ನಲ್ಲಿ ಸಕ್ರಿಯವಾಗಿರುವ ಫುಟ್ಬಾಲ್ ಪಟುಗಳ ಪೈಕಿ ಸುನಿಲ್ ಚೆಟ್ರಿ ಗರಿಷ್ಠ ಗೋಲು ಸಿಡಿಸಿದ 3ನೇ ಪಟು ಅನ್ನೋ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಜೊತೆ ನನ್ನ ಹೋಲಿಕೆ ಬೇಡ: ಸುನಿಲ್ ಚೆಟ್ರಿ
ಗರಿಷ್ಠ ಗೋಲು ಸಿಡಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕ್ರಿಸ್ಟಿಯಾನೋ ರೋನಾಲ್ಡೋ(cristiano ronaldo) ಅಲಂಕರಿಸಿದ್ದಾರೆ. ರೋನಾಲ್ಡೋ 112 ಗೋಲು ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಲಿಯೋನಲ್ ಮೆಸ್ಸಿ(lionel messi) 79 ಗೋಲು ಸಿಡಿಸಿದ್ದಾರೆ. ಮೂರನೇ ಸ್ಥಾನವನ್ನು ತಲಾ 77 ಗೋಲುಗಳಿಂದ ಸುನಿಲ್ ಚೆಟ್ರಿ ಹಾಗೂ ಯುಎಇನ ಅಲಿ ಮಾಬ್ಕೌಟ್(Ali Mabkhout) ಜೊತೆ ಹಂಚಿಕೊಂಡಿದ್ದಾರೆ.
ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!
37 ವರ್ಷದ ಸುನಿಲ್ ಚೆಟ್ರಿ ಈ ಬಾರಿ ಭಾರತಕ್ಕೆ 8ನೇ SAFF ಚಾಂಪಿಯನ್‌ಶಿಪ್ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.