
ಪಟ್ಟಾನಿ (ಸೆ.20) ಥಾಯ್ ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯಕ್ಕೆ ಕೌಂಟ್‌ಡೌನ್ ಆರಂಭಗೊಂಡಿತ್ತು. ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಪಂದ್ಯಕ್ಕೆ ಆರಂಭಕ್ಕೆ ಕೆಲವೇ ಕ್ಷಣಗಳು ಮಾತ್ರ ಬಾಕಿ ಇತ್ತು. ಮೈದಾನದಲ್ಲಿ ಉಭಯ ತಂಡದ ಫುಟ್ಬಾಲ್ ಪಟುಗಳು ಅಭ್ಯಾಸ ನಡೆಸುತ್ತಿದ್ದರು. ಲೈಟ್ ವಾರ್ಮ್ಅಪ್ ಮಾಡಿ ಪಂದ್ಯಕ್ಕೆ ರೆಡಿಯಾಗುತ್ತಿದ್ದರು. ಇತ್ತ ಸಿಬ್ಬಂದಿಗಳು ಪಿಚ್ ರೋಲರ್ ಸೇರಿದಂತೆ ಇತರ ಸಲಕರಣೆಗಳ ಮೂಲಕ ಅಂತಿಮ ಹಂತದ ತಯಾರಿ ನಡೆಸುತ್ತಿದ್ದರು. ಹೀಗೆ ಅಭ್ಯಾಸ ನಡೆಸುತ್ತಿದ್ದ ಇಂಗ್ಲೆಂಡ್ ಮಾಜಿ ಫುಟ್ಬಾಲ್ ಪಟು, ಪಿಟಿ ಪ್ರಚೌಪ್ ತಂಡದ ಕೀ ಪ್ಲೇಯರ್ ವಿಂಗರ್ ಆ್ಯಂಡ್ರೂಸ್ ಟೌನ್‌ಸೆಂಡ್ ಮೇಲೆ ಹರಿದ ಘಟನೆ ನಡೆದಿದೆ. ಪಂದ್ಯ ಲೈವ್ ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ.
ಪಟ್ಟಾನಿ ಎಫ್‌ಸಿ ವಿರುದ್ಧದ ಲೀಗ್ ಪಂದ್ಯಕ್ಕಾಗಿ ವಿಂಗರ್ ಆ್ಯಂಡ್ರೂಸ್ ವಾರ್ಮ್ಅಪ್ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೆಲವೇ ಕ್ಷಣಗಳಲ್ಲಿ ಪಂದ್ಯ ಆರಂಭಗೊಳ್ಳುತ್ತಿತ್ತು. ಆಟಗಾರರು ಮೈದಾನದಲ್ಲಿ ವಾರ್ಮ್ಅಪ್ ಮಾಡುತ್ತಿದ್ದರು. ಆದರೆ ಸಿಬ್ಬಂದಿಗಳಿಗೆ ಪಂದ್ಯಕ್ಕೂ ಮುನ್ನ ಅಂತಿಮ ಹಂತದ ಕೆಲ ತಯಾರಿ ಮಾಡಬೇಕಿತ್ತು. ಹೀಗಾಗಿ ಪಿಚ್ ರೋಲರ್ ಮೂಲಕ ಇಡೀ ಮೈದಾನ ಸಜ್ದುಗೊಳಿಸುವ ಕಾರ್ಯವೂ ನಡೆಯುತ್ತಿತ್ತು. ವಿಂಗರ್ ಆ್ಯಂಡ್ರೂಸ್ ವಾರ್ಮ್ಅಪ್ ಮಾಡುತ್ತಿದ್ದಂತೆ ಹಿಂದಿನಿಂದ ಪಿಚ್ ರೋಲರ್ ಆಗಮಿಸಿದೆ.
ಪಿಚ್ ರೋಲರ್ ಸಿಬ್ಬಂದಿ ತನ್ನ ಪಾಡಿಗೆ ರೋಲರ್ ಕೆಲಸ ಮಾಡುತ್ತಿದ್ದ. ಆದರೆ ಫುಟ್ಬಾಲರ್ ನಡುವೆ ಪಿಚ್ ರೋಲರ್ ವಾಹನ ಕೊಂಡೊಯ್ಯುವಾಗ ಎಚ್ಚರವಹಿಸಬೇಕಿತ್ತು. ಪಿಚ್ ರೋಲರ್ ಅಡಿಗೆ ಕಾಲು ಸಿಲುಕಿದ ಕಾರಣ ವಿಂಗರ್ ಆ್ಯಂಡ್ರೂಸ್ ಮೈದಾನಕ್ಕೆ ಬಿದ್ದಿದ್ದಾರೆ. ಅಷ್ಟರಲ್ಲೇ ಅರ್ಧ ಭಾಗಕ್ಕೆ ಪಿಚ್ ರೋಲರ್ ಹರಿದಿದೆ. ಇತ್ತ ಪ್ರೇಕ್ಷಕರು ಚೀರಾಡಿದ್ದಾರೆ. ತಂಡದ ಆಟಗಾರರು ಓಡೋಡಿ ಬಂದಿದ್ದಾರೆ. ಪಿಚ್ ರೋಲರ್ ವಾಹನ ಸಿಬ್ಬಂದಿ ತಕ್ಷಣವೇ ವಾಹನದಿಂದ ಕೆಳಕ್ಕೆ ಇಳಿದಿದ್ದಾರೆ.
ಪಿಚ್ ರೋಲರ್ ವಿಂಗರ್‌ನ ಕಾಲು ಸೇರಿದಂತೆ ಅರ್ಧ ಭಾಗಕ್ಕೆ ಹರಿದಿದೆ. ಅಷ್ಟರಲ್ಲೇ ಇತರರು ಆಗಮಿಸಿ ವಿಂಗರ್ ಆ್ಯಂಡ್ರೂಸ್‌ನ ರಕ್ಷಿಸಿದ್ದಾರೆ. ಕಾರಿನ ಮೇಲಿನಿಂದ ಹರಿದ ಕಾರು ಕಾಲು, ಮೊಣಕಾಲುಗಳಲ್ಲಿ ಗಾಯಗಳಾಗಿದೆ. ಚುರ್ತು ಚಿಕಿತ್ಸೆ ನೀಡಲಾಗಿದೆ. ಬಳಿಕ ವಿಶ್ರಾಂತಿಗೆ ಸೂಚಿಸಿದ್ದಾರೆ. ಆದರೆ ವಿಂಗರ್ ಆ್ಯಂಡ್ರೂಸ್ ವಿಶ್ರಾಂತಿ ಪಡೆಯಲು ನಿರಾಕರಿಸಿದ್ದಾರೆ. ಈ ಪಂದ್ಯದಲ್ಲೇ ಆಡುವುದಾಗಿ ಹೇಳಿದ್ದಾರೆ.
ಸಬ್ಸಿಟಿಟ್ಯೂಟ್ ಆಗಿ ವಿಂಗರ್ ಆ್ಯಂಡ್ರೂಸ್ 93ನೇ ನಿಮಿಷದಲ್ಲಿ ಮೈದಾನಕ್ಕಿಳಿದು ಅಚ್ಚರಿ ಮೂಡಿಸಿದ್ದರು. ಈ ವೇಳೆ ನೆರೆದಿದ್ದ ಪ್ರೇಕ್ಷಕರು ಅದ್ಭುತ ಪ್ರೋತ್ಸಾಹ ನೀಡಿದ್ದಾರೆ. ಈ ಪಂದ್ಯದಲ್ಲಿ ವಿಂಗರ್ ಆ್ಯಂಡ್ರೂಸ್ ತಂಡ ಪಿಟಿ ಪ್ರಚೌಪ್ 3-0 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು.
🚨🚨| Unfortunate scenes for Andros Townsend as he suffered an accident during the warm-up before PT Prachuap’s clash with Pattani. 😳
pic.twitter.com/M4wxxsqMTG— CentreGoals. (@centregoals) September 19, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.