
ಬಾರ್ಸಿಲೋನಾ: ಫಿಫಾ ವಿಶ್ವಕಪ್‌ಗೆ ಸ್ಪೇನ್ ತಂಡವನ್ನು ಪ್ರಕಟಿಸಲಾಗಿದ್ದು, ರಿಯಲ್ ಮ್ಯಾಡ್ರಿಡ್‌ನ ಒಬ್ಬೇಒಬ್ಬ ಆಟಗಾರನಿಗೂ ಸ್ಥಾನ ನೀಡಿಲ್ಲ. ಕಳೆದ 92 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಿಯಲ್ ಮ್ಯಾಡ್ರಿಡ್ ಆಟಗಾರರಿಲ್ಲದೆ ಸ್ಪೇನ್ ವಿಶ್ವಕಪ್ ಆಡಲಿದೆ. ಸ್ಪೇನ್ ಕೋಚ್ ಲೂಯಿಸ್ ಫ್ಯುವೆಂಟೆ ಅವರ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಕೋಚ್ ಲೂಯಿಸ್ ಫ್ಯುವೆಂಟೆ ಪ್ರಕಟಿಸಿರುವ 26 ಸದಸ್ಯರ ತಂಡದಲ್ಲಿ ಬಾರ್ಸಿಲೋನಾದ ಏಳು ಆಟಗಾರರಿಗೆ ಸ್ಥಾನ ಸಿಕ್ಕಿದೆ. ಆರ್ಸೆನಲ್, ಅಥ್ಲೆಟಿಕ್ ಕ್ಲಬ್ ಮತ್ತು ಅಥ್ಲೆಟಿಕೊ ಮ್ಯಾಡ್ರಿಡ್ ಕ್ಲಬ್‌ಗಳಿಂದ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಗಾಯದಿಂದ ಇನ್ನೂ ಪೂರ್ತಿ ಚೇತರಿಸಿಕೊಳ್ಳದ ಯುವ ಆಟಗಾರ ಲಮೀನ್ ಯಮಾಲ್‌ಗೂ ತಂಡದಲ್ಲಿ ಅವಕಾಶ ನೀಡಲಾಗಿದೆ.
2024ರ ಯೂರೋ ಕಪ್ ಗೆದ್ದ ತಂಡದ ನಾಯಕನಾಗಿದ್ದ ಅಲ್ವಾರೊ ಮೊರಾಟಾ ಅವರನ್ನು ಈ ಬಾರಿ ಪರಿಗಣಿಸಿಲ್ಲ. ಪೆಡ್ರಿ, ಗಾವಿ, ಪೌ ಕುಬಾರ್ಸಿ, ಎರಿಕ್ ಗಾರ್ಸಿಯಾ, ಫೆರಾನ್ ಟೊರೆಸ್, ರೋಡ್ರಿ, ಮಿಕೆಲ್ ಮೆರಿನೊ, ಮಾರ್ಟಿನ್ ಜುಬಿಮೆಂಡಿ, ನಿಕೊ ವಿಲಿಯಮ್ಸ್, ಡ್ಯಾನಿ ಓಲ್ಮೊ ಮುಂತಾದ ಪ್ರಮುಖರು ತಂಡದಲ್ಲಿದ್ದಾರೆ.
'ಗ್ರೂಪ್ ಎಚ್'ನಲ್ಲಿರುವ ಸ್ಪೇನ್, ಕೇಪ್ ವರ್ಡೆ, ಸೌದಿ ಅರೇಬಿಯಾ ಮತ್ತು ಉರುಗ್ವೆ ತಂಡಗಳನ್ನು ಎದುರಿಸಲಿದೆ. ಜೂನ್ 14 ರಂದು ಕೇಪ್ ವರ್ಡೆ ವಿರುದ್ಧ ಸ್ಪೇನ್ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇದಕ್ಕೂ ಮುನ್ನ ಇರಾಕ್ ಮತ್ತು ಪೆರು ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.