ಕೋಪಾ ಅಮೆರಿಕ ಫುಟ್ಬಾಲ್: 16ನೇ ಬಾರಿ ಕಪ್ ಗೆದ್ದ ಅರ್ಜೆಂಟೀನಾ

By Kannadaprabha News  |  First Published Jul 16, 2024, 10:10 AM IST

ಹಾಲಿ ವಿಶ್ವಚಾಂಪಿಯನ್ ಅರ್ಜೆಂಟೀನಾ, ಸೋಮವಾರ ನಡೆದ ಫೈನಲ್ ಹಣಾಹಣಿ ಯಲ್ಲಿ 1-0 ಗೋಲಿನ ಅಂತರದಲ್ಲಿ ಗೆಲುವು ಸಾಧಿಸಿತು. ನಿಗದಿತ ಅವಧಿ ಗೋಲು ರಹಿತವಾಗಿ ಮುಕ್ತಾಯಗೊಂಡ ಬಳಿಕ ಹೆಚ್ಚುವರಿ ಸಮಯ ನೀಡಲಾಯಿತು. 112ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಲಾಟರೊ ಮಾರ್ಟಿನೆಜ್ ಅರ್ಜೆಂಟೀನಾ ತಂಡ ಸತತ 2ನೇ ಬಾರಿ ಚಾಂಪಿಯನ್ ಆಗಲು ಕಾರಣರಾದರು.


ಮಯಾಮಿ(ಅಮೆರಿಕ): ದಕ್ಷಿಣ ಅಮೆರಿಕದ ತಂಡಗಳ ನಡುವಿನ ಫುಟ್ಬಾಲ್ ಟೂರ್ನಿಯಾಗಿರುವ ಕೋಪಾ ಅಮೆರಿಕ ಚಾಂಪಿಯನ್‌ಶಿಪ್‌ನಲ್ಲಿ ಅರ್ಜೆಂಟೀನಾ 16ನೇ ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇದರೊಂದಿಗೆ ಲಿಯೋನಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಪ್ರಶಸ್ತಿ ಯನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಹಾಲಿ ವಿಶ್ವಚಾಂಪಿಯನ್ ಅರ್ಜೆಂಟೀನಾ, ಸೋಮವಾರ ನಡೆದ ಫೈನಲ್ ಹಣಾಹಣಿ ಯಲ್ಲಿ 1-0 ಗೋಲಿನ ಅಂತರದಲ್ಲಿ ಗೆಲುವು ಸಾಧಿಸಿತು. ನಿಗದಿತ ಅವಧಿ ಗೋಲು ರಹಿತವಾಗಿ ಮುಕ್ತಾಯಗೊಂಡ ಬಳಿಕ ಹೆಚ್ಚುವರಿ ಸಮಯ ನೀಡಲಾಯಿತು. 112ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಲಾಟರೊ ಮಾರ್ಟಿನೆಜ್ ಅರ್ಜೆಂಟೀನಾ ತಂಡ ಸತತ 2ನೇ ಬಾರಿ ಚಾಂಪಿಯನ್ ಆಗಲು ಕಾರಣರಾದರು. ಈ ಸೋಲಿನೊಂದಿಗೆ ಕೊಲಂಬಿಯಾದ 28 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿತ್ತು.

Latest Videos

undefined

ನಾಳೆಯೇ ಅವನನ್ನು ಮನೆಗೆ ಕಳಿಸಿ: ಸಹ ಆಟಗಾರನ ಮೇಲೆ ಕಿಡಿಕಾರಿದ್ದ ಧೋನಿ..! ರೋಚಕ ಸ್ಟೋರಿ ಬಿಚ್ಚಿಟ್ಟ ಅಶ್ವಿನ್

ಬಿಕ್ಕಿ ಬಿಕ್ಕಿ ಅತ್ತ ಮೆಸ್ಸಿ

ಪಂದ್ಯದ 64ನೇ ನಿಮಿಷದಲ್ಲಿ ಮೆಸ್ಸಿ ಗಾಯಗೊಂಡ ಕಾರಣ ಮೈದಾನ ತೊರೆಯುವಂತಾಯಿತು. ಬಳಿಕ ಅವರು ಡಗೌಟ್‌ನಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯಗಳ ವಿಡಿಯೋ, ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

16ನೇ ಟ್ರೋಫಿ: ಅರ್ಜೆಂಟೀನಾ ಈ ಬಾರಿಯ ಟ್ರೋಫಿ ಗೆಲುವಿನೊಂದಿಗೆ ಅತಿ ಹೆಚ್ಚು ಬಾರಿ ಚಾಂಪಿಯನ್ ಆದ ಉರುಗೈ ದಾಖಲೆಯನ್ನು ಮುರಿಯಿತು. ಉರುಗೈ 15 ಬಾರಿ ಚಾಂಪಿಯನ್ ಆಗಿದ್ದರೆ, ಅರ್ಜೆಂಟೀನಾ 16ನೇ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಸೇನ್ ಮಡಿಲಿಗೆ 4ನೇ ಯುರೋ ಕಿರೀಟ

ಬರ್ಲಿನ್ (ಜರ್ಮನಿ): ಯುರೋಪಿಯನ್ ಫುಟ್ಬಾಲ್‌ನ ರಾಜನಾಗಿ ಮತ್ತೆ ಸ್ಪೇನ್ ಮೆರೆ ದಾಡಿದೆ. ಯುರೋಪ್ ದೇಶಗಳ ನಡುವಿನ ಫುಟ್ಬಾಲ್ ಟೂರ್ನಿಯಾಗಿರುವ ಪ್ರತಿಷ್ಠಿತ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪೇನ್ 4ನೇ ಬಾರಿ ಟ್ರೋಫಿ ತನ್ನದಾಗಿಸಿ ಕೊಂಡಿದೆ. ಇಂಗ್ಲೆಂಡ್ ತನ್ನ ಚೊಚ್ಚಲ ಯುರೋ ಕಪ್ ಕನಸು ಸಾಕಾರ ಗೊಳ್ಳಲು ಮತ್ತಷ್ಟು ಸಮಯ ಕಾಯುವಂತಾಗಿದೆ. 

ಭಾನುವಾರ ಮಧ್ಯರಾತ್ರಿ ನಡೆದ ಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪೇನ್ 2-1 ಗೋಲುಗಳ ರೋಚಕ ಗೆಲುವು ಸಾಧಿ ಸಿತು. ನಿಕೋ ವಿಲಿಯಮ್ 47ನೇ ನಿಮಿಷದಲ್ಲಿ ಗೋಲು ಬಾರಿಸಿ ಸ್ಪೇನ್‌ಗೆ ಮುನ್ನಡೆ ಒದಗಿಸಿದರೂ, 73ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಕೋಲ್ ಪಾವರ್ ಗೋಲು ಬಾರಿಸಿ ಪಂದ್ಯ ಸಮಬಲಗೊಳಿಸಿದರು. ಆದರೆ ಬದಲಿ ಆಟಗಾರನಾಗಿ ಮೈದಾನಕ್ಕೆ ಬಂದಿದ್ದ ಮೈಕಲ್ ಒಯಾರ್‌ಜಬಲ್ (86ನೇ ನಿಮಿಷ) ಬಾರಿಸಿದ ಗೋಲು ಸೇನ್‌ನ ಗೆಲ್ಲಿಸಿತು.

13 ಬಾರಿ ಫೈನಲ್‌ನಲ್ಲಿ ಸೋತ ಮೊದಲಿಗ 24 ಗ್ರ್ಯಾನ್‌ಸ್ಲಾಂಗಳ ಒಡೆಯ ಜೋಕೋವಿಚ್!

4 ಬಾರಿ ಟ್ರೋಫಿ ಗೆದ್ದ  ಮೊದಲ ತಂಡ ಸ್ಪೇನ್

ಸ್ಪೇನ್ ಟೂರ್ನಿಯಲ್ಲಿ 4 ಬಾರಿ ಆದ ಮೊದಲ ತಂಡ. ಜರ್ಮನಿ 3 ಬಾರಿ ಗೆದ್ದಿದ್ದು, ಆ ದಾಖಲೆಯನ್ನು ಸ್ಪೇನ್ ಮುರಿಯಿತು. 1964ರಲ್ಲಿ ಮೊದಲ ಬಾರಿ ಟ್ರೋಫಿ ಗೆದ್ದಿದ್ದ ಸ್ಪೇನ್ ಬಳಿಕ 2008, 2012ರಲ್ಲೂ ಚಾಂಪಿಯನ್ ಆಗಿತ್ತು.

2ನೇ ಬಾರಿ: ಇಂಗ್ಲೆಂಡ್ ಯುರೋ ಕಪ್‌ನಲ್ಲಿ ತಂಡ ಸತತ 2ನೇ ಬಾರಿ ಫೈನಲ್‌ನಲ್ಲಿ ಎಡವಿ ಟ್ರೋಫಿ ತಪ್ಪಿಸಿಕೊಂಡಿತು. 2020ರ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಇಟಲಿ ವಿರುದ್ಧ ಪರಾಭವಗೊಂಡಿತ್ತು.
 

click me!