ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಹೈದರಾಬಾದ್‌ಗೆ ಗೆಲುವು

By Suvarna NewsFirst Published Feb 20, 2020, 10:10 PM IST
Highlights

ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಹೈದರಾಬಾದ್ ತಂಡದ ಮುಖಾಮುಖಿ ಆಟಕ್ಕುಂಟು ಲೆಕ್ಕಿಕ್ಕಿಲ್ಲದ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಹೈದರಾಬಾದ್ ಗೌರವ ಕಾಪಾಡಿಕೊಂಡಿತು. 

ಗುವಾಹಟಿ(ಫೆ.20): ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಹೈದರಾಬಾದ್ ತಂಡ ಅಂತಿಮ ಲೀಗ್ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿತು. ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯ ಅಭಿಮಾನಿಗಳಿಗೆ ಮನರಂಜನೆ ನೀಡಿತು. 

ಲಿಸ್ಟನ್ ಕೊಲಾಕೊ (12 ಮತ್ತು 41ನೇ ನಿಮಿಷ), ಮಾರ್ಸೆಲೋ ಪೆರೆರಾ (13 ಮತ್ತು 88ನೇ ನಿಮಿಷ) ಮತ್ತು ಮೊಹಮ್ಮದ್ ಯಾಸಿರ್  (55ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ನಾರ್ಥ್ ಈಸ್ಟ್ ಯುನೈಟೆಡ್ ತಂಡವನ್ನು 5-1 ಗೋಲುಗಳ ಅಂತರದಲ್ಲಿ ಹೈದರಾಹಾದ್ ಮಣಿಸಿತು.  ಹೈದರಾಬಾದ್ ಎಫ್ ಸಿ ಕೊನೆಯ ಸ್ಥಾನದಲ್ಲಿದ್ದರೂ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಗೌರವವನ್ನು ಕಾಯ್ದುಕೊಂಡಿತು. ನಾರ್ಥ್ ಈಸ್ಟ್ ಪರ ಆ್ಯಂಡ್ರ್ಯು ಕಿಯೊಗ್ 35ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು. ಇದು ಹೈದರಾಬಾದ್ ತಂಡ ಮನೆಯಂಗಣದ ಹೊರಗಡೆ ಗಳಿಸಿದ ಮೊದಲ ಜಯ.

ಹೈದರಾಬಾದ್ ಗೆ ಕೊನೆಯ ಸ್ಥಾನಕ್ಕಿಂತ ಅತಿ ಕಡಿಮೆ ಅಂಕ ಗಳಿಸಿದ ಕುಖ್ಯಾತಿಯಿಂದ ಮುಜುಗರಕ್ಕೆ ಒಳಗಾಗಬಾರದು ಎಂಬುದು ಮುಖ್ಯ ಗುರಿಯಾಗಿತ್ತು. ಅದೇ ರೀತಿಯಲ್ಲಿ ಆಟ ಪ್ರದರ್ಶಿಸಿದ ತಂಡಕ್ಕೆ ಪ್ರಥಮಾರ್ದದಲ್ಲಿ 3-1 ಗೋಲಿನಿಂದ ಮುನ್ನಡೆ. 12ನೇ ನಿಮಿಷದಲ್ಲಿ ಲಿಸ್ಟನ್ ಕೊಲಾಕೊ ಗಳಿಸಿದ ಗೋಲಿನಿಂದ ಹೈದರಾಬಾದ್ ಮೇಲುಗೈ ಸಾಧಿಸಿತು. 

ಮತ್ತೊಂದು ನಿಮಿಷ ಕಳೆಯುತ್ತಿದ್ದಂತೆ ಮಾರ್ಸೆಲೊ ಪೆರೆರಾ ಗಳಿಸಿದ ಗೋಲು ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟಿತು.  35ನೇ ನಿಮಿಷದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಪರ ಆ್ಯಂಡ್ರ್ಯು ಕಿಯೊಗ್ ಗಳಿಸಿ ಗೋಲಿನಿಂದ ಖಾತೆ ತೆರೆಯುವಂತಾಯಿತು. 41ನೇ ನಿಮಿಷದಲ್ಲಿ ಲಿಸ್ಟನ್ ಕೊಲಾಕೊ ವೈಯಕ್ತಿಕ ಎರಡನೇ ಗೋಲು ಗಳಿಸುವ ಮೂಲಕ 3-1 ಅಂತರದಲ್ಲಿ ಮುನ್ನಡೆ ಕಾಯ್ದಕೊಂಡಿತು.

click me!