
ಬ್ರಿಟನ್(ಏ.11): ಇಂಗ್ಲೆಂಡ್ ಹಾಗೂ ಲೀಡ್ಸ್‌ನ ದಿಗ್ಗಜ ಫುಟ್ಬಾಲಿಗ ನೊರ್ಮನ್ ಹಂಟರ್ ಅವರು ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಹಂಟರ್ ಚಿಕಿತ್ಸೆ ಪಡೆಯುತ್ತಿದ್ದಾರೆ.
'ವಲಸಿಗ ಜನರೇ ಬನ್ನಿ ನಮ್ಮನೆಯಲ್ಲೇ ಉಳಿಯಿರಿ' ನಿರಾಶ್ರಿತರಿಗೆ ಮುಕ್ತ ಆಹ್ವಾನ ಕೊಟ್ಟ ಫುಟ್ಬಾಲ್ ಲೆಜೆಂಡ್ ಭುಟಿಯಾ
76 ವರ್ಷ ವಯಸ್ಸಿನ ಹಂಟರ್, 1960-70ರ ದಶಕದಲ್ಲಿ ತಾರಾ ಆಟಗಾರರಾಗಿ ಮಿಂಚಿದ್ದರು. ಅವರು 2 ಇಂಗ್ಲಿಷ್ ಪ್ರಶಸ್ತಿ ಗೆದ್ದಿದ್ದಾರೆ. ಲೀಡ್ಸ್ ಫುಟ್ಬಾಲ್ ಕ್ಲಬ್ ಪರ 540 ಪಂದ್ಯಗಳನ್ನಾಡಿದ್ದಾರೆ. 1973ರ ಯುರೋಪಿಯನ್ ಕಪ್‌ನಲ್ಲಿ ಚಾಂಪಿಯನ್ ಆದ ಲೀಡ್ಸ್ ತಂಡದಲ್ಲಿ ಹಂಟರ್ ಆಡಿದ್ದರು. ಲೀಡ್ಸ್ ಯುನೈಟೆಡ್ ಕ್ಲಬ್ ಪತ್ರಿಕಾ ಹೇಳಿಕೆ ಪ್ರಕಾರ ಹಂಟರ್‌ಗೆ ಕೋವಿಡ್ 19 ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ. ನೊರ್ಮನ್ ಹಂಟರ್ ಇಂಗ್ಲೆಂಡ್ ರಾಷ್ಟ್ರೀಯ ತಂಡದ ಪರ 28 ಬಾರಿ ಕಣಕ್ಕಿಳಿದಿದ್ದರು. 1966ರ ಇಂಗ್ಲೆಂಡ್ ಫುಟ್ಬಾಲ್ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ನೊರ್ಮನ್ ಹಂಟರ್ 1982ರಲ್ಲಿ ಫುಟ್ಬಾಲ್‌ಗೆ ವಿದಾಯ ಘೋಷಿಸಿದ್ದರು.
ಕೊರೋನಾ ವೈರಸ್‌ಗೆ ಬಲಿಯಾದ ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೊರೆಂಝೋ!
ಕೊರೋನಾ ವೈರಸ್‌ಗೂ ಫುಟ್ಬಾಲ್ ಕ್ರೀಡೆಗೂ ಅದೇನು ನಂಟೋ ಕಾಣೆ. ಕೊರೋನಾ ಕ್ರೀಡಾ ಜಗತ್ತನ್ನೇ ತಲ್ಲಣಗೊಳಿಸಿದ್ದರು, ಫುಟ್ಬಾಲ್ ಕ್ರೀಡೆಯನ್ನು ಇನ್ನಷ್ಟು ಕಾಡಿದೆ. ಸ್ಪೇನ್-ಇಟಲಿ ನಡುವಿನ ಫುಟ್ಬಾಲ್ ಟೂರ್ನಿ ಬಳಿಕ ಉಭಯ ದೇಶಗಳಲ್ಲಿ ಮರಣ ಮೃದಂಗವೇ ನಡೆದು ಹೋಗಿದೆ. ಕೊರೋನಾ ಎಫೆಕ್ಟ್‌ನಿಂದಾಗಿ ಉರುಗ್ವೆ ಫುಟ್ಬಾಲ್ ಕೋಚ್ ಸೇರಿದಂತೆ 400 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಇನ್ನು ಕ್ರಿಸ್ಟಿಯಾನೋ ರೊನಾಲ್ಡೋ 82 ಕೋಟಿ ರುಪಾಯಿ ಸಂಬಳವನ್ನು ಕ್ಲಬ್‌ಗೆ ಬಿಟ್ಟುಕೊಟ್ಟಿದ್ದಾರೆ. ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೊರೆಂಝೋ ಸ್ಯಾಂಜ್ ಹಾಗೂ ಸ್ಪೇನ್‌ನ 21 ವರ್ಷದ ಫುಟ್ಬಾಲ್ ಕೋಚ್ ಕೊರೋನಾದಿಂದ ಪ್ರಾಣ ಬಿಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
"
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.