ಫಿಫಾ ವಿಶ್ವಕಪ್ ನಾಕೌಟ್‌ ಸೆಣಸಾಟಕ್ಕೆ ವೇದಿಕೆ ಸಿದ್ಧ! ನಾಕೌಟ್‌ನಲ್ಲಿ ಪಂದ್ಯ ಡ್ರಾ ಆದ್ರೆ ಫಲಿತಾಂಶ ನಿರ್ಧಾರ ಹೇಗೆ?

Kannadaprabha News   | Kannada Prabha
Published : Jun 29, 2026, 08:42 AM IST
Fifa Worldcup 2026- Knockout Matches

ಸಾರಾಂಶ

ಫಿಫಾ ಫುಟ್ಬಾಲ್‌ ವಿಶ್ವಕಪ್‌ ಈಗ ಅಂತಿಮ-32ರ ನಾಕೌಟ್‌ ಹಂತವನ್ನು ತಲುಪಿದೆ. ಈ ಮಾಡು ಇಲ್ಲವೇ ಮಡಿ ಸುತ್ತಿನಲ್ಲಿ ಗೆದ್ದ ತಂಡಗಳು ಪ್ರಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದರೆ, ಸೋತ ತಂಡಗಳು ಟೂರ್ನಿಯಿಂದ ಹೊರಬೀಳಲಿವೆ. ಈ ಹಂತದ ಪಂದ್ಯಗಳು, ಎದುರಾಳಿಗಳು ಮತ್ತು ಡ್ರಾ ನಿಯಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ನ್ಯೂಯಾರ್ಕ್‌: ಫಿಫಾ ಫುಟ್ಬಾಲ್‌ ವಿಶ್ವಕಪ್‌ ಮಹತ್ವದ ಘಟ್ಟ ತಲುಪಿದ್ದು, ಇನ್ನೇನಿದ್ದರೂ ಮಾಡು ಇಲ್ಲವೇ ಮಡಿ ಸ್ಥಿತಿ. ಅಂತಿಮ-32ರ ಸುತ್ತಿಗೆ ಸೋಮವಾರ ಚಾಲನೆ ದೊರೆಯಲಿದ್ದು, ಪ್ರತಿ ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳ ಜೊತೆಗೆ, ಅತ್ಯುತ್ತಮ ಆಟವಾಡಿ 3ನೇ ಸ್ಥಾನ ಗಳಿಸಿದ 8 ತಂಡಗಳು ಈ ಹಂತಕ್ಕೆ ಪ್ರವೇಶಿಸಿವೆ.

ಈ ಸುತ್ತಿನಲ್ಲಿ ಗೆಲ್ಲುವ ತಂಡ ಪ್ರಿ ಕ್ವಾಟರ್‌ ಫೈನಲ್‌ ಅಂದರೆ ಅಂತಿಮ-16ರ ಸುತ್ತು ಪ್ರವೇಶಿಸಲಿದ್ದು, ಸೋಲುವ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ.

ಈ ಬಾರಿ ದಾಖಲೆಯ 48 ತಂಡಗಳೊಂದಿಗೆ ಆರಂಭಗೊಂಡ ಟೂರ್ನಿಯಲ್ಲಿ ಉರುಗ್ವೆ, ಟರ್ಕಿ ಸೇರಿ ಕೆಲ ಪ್ರಮುಖ ತಂಡಗಳು ಅಂತಿಮ-32ರ ಸುತ್ತಿಗೆ ಪ್ರವೇಶಿಸಲು ವಿಫಲವಾಗಿವೆ. ಆದರೆ 3 ಡ್ರಾ ಸಾಧಿಸಿದ ಕೇಪ್‌ ವರ್ಡೆ, ಕಾಂಗೋ, ಈಜಿಪ್ಟ್, ಬೋಸ್ನಿಯಾ-ಹರ್ಜೆಗೋವಿನಾನದಂತಹ ತಂಡಗಳು ನಾಕೌಟ್‌ ಹಂತಕ್ಕೇರಿ ಅಚ್ಚರಿ ಮೂಡಿಸಿವೆ. ಜು.4ರ ವರೆಗೂ ಅಂತಿಮ-32ರ ಸುತ್ತು ನಡೆಯಲಿದ್ದು, ಜು.5ಕ್ಕೆ ಪ್ರಿ ಕ್ವಾರ್ಟರ್‌ ಆರಂಭಗೊಳ್ಳಲಿದೆ.

ರೋಚಕ ಗುಂಪು ಹಂತ: ಗುಂಪು ಹಂತದ ಪಂದ್ಯಗಳಲ್ಲಿ ರೋಚಕತೆಗೆ ಕೊರತೆ ಇರಲಿಲ್ಲ. ಕೇಪ್‌ ವರ್ಡೆ, ಘಾನಾ, ಕಾಂಗೋದಂತಹ ಸಣ್ಣ ಫುಟ್ಬಾಲಿಂಗ್‌ ರಾಷ್ಟ್ರಗಳು ಬಲಿಷ್ಠರ ಎದುರು ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದವು. ಇನ್ನು, ತಾರೆಯರಾದ ಮೆಸ್ಸಿ, ರೊನಾಲ್ಡೋ, ಎಂಬಾಪೆ, ಹಾಲ್ಯಾಂಡ್‌, ಕೇನ್‌ ಎಲ್ಲರೂ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಈ ಆಟಗಾರರ ಮೇಲೆ ಮುಂದಿನ ಸುತ್ತುಗಳಲ್ಲೂ ನಿರೀಕ್ಷೆ ಇದ್ದು, ‘ಗೋಲ್ಡನ್‌ ಬೂಟ್‌’ (ಟೂರ್ನಿಯಲ್ಲಿ ಗರಿಷ್ಠ ಗೋಲು ಬಾರಿಸಿದ ಆಟಗಾರನಿಗೆ ಸಿಗುವ ಪ್ರಶಸ್ತಿ)ಗೆ ರೇಸ್‌ ಜೋರಾಗಿದೆ.

ಪಂದ್ಯ ಡ್ರಾ ಆದರೆ ಹೇಗೆ?

ಗುಂಪು ಹಂತದ ಪಂದ್ಯಗಳಲ್ಲಿ ಉಭಯ ತಂಡಗಳು ಡ್ರಾ ಸಾಧಿಸಿದರೆ, ಆಗ ಅಂಕ ಹಂಚಿಕೆ ಮಾಡಲಾಗುತ್ತಿತ್ತು. ಆದರೆ, ನಾಕೌಟ್‌ ಹಂತದಲ್ಲಿ ಫಲಿತಾಂಶ ಹೊರಬೀಳಲೇ ಬೇಕು. ನಿಗದಿತ 90 ನಿಮಿಷಗಳಲ್ಲಿ ಯಾವುದೇ ತಂಡ ಗೆಲುವು ಸಾಧಿಸದಿದ್ದರೆ, ಆಗ 30 ನಿಮಿಷಗಳ ಹೆಚ್ಚುವರಿ ಆಟ ನಡೆಯಲಿದೆ. ಆಗಲೂ ವಿಜೇತ ತಂಡ ನಿರ್ಧಾರವಾಗದಿದ್ದರೆ, ಶೂಟೌಟ್‌ ಮೂಲಕ ಗೆಲ್ಲುವ ತಂಡವನ್ನು ನಿರ್ಧರಿಸಲಾಗುತ್ತದೆ.

ಅಂತಿಮ-32ರ ಸುತ್ತಿನ ಎದುರಾಳಿಗಳು

ದಕ್ಷಿಣ ಆಫ್ರಿಕಾ vs ಕೆನಡಾ, ಬ್ರೆಜಿಲ್‌ vs ಜಪಾನ್‌, ಜರ್ಮನಿ vs ಪರಗ್ವೆ, ನೆದರ್‌ಲೆಂಡ್ಸ್ vs ಮೊರಾಕ್ಕೊ, ಐವರಿ ಕೋಸ್ಟ್‌ vs ನಾರ್ವೆ, ಫ್ರಾನ್ಸ್‌ vs ಸ್ವೀಡನ್‌, ಮೆಕ್ಸಿಕೋ vs ಈಕ್ವೆಡಾರ್‌, ಇಂಗ್ಲೆಂಡ್‌ vs ಕಾಂಗೋ, ಬೆಲ್ಜಿಯಂ vs ಸೆನೆಗಲ್‌, ಅಮೆರಿಕ vs ಬೋಸ್ನಿಯಾ-ಹರ್ಜೆಗೋವಿನಾ, ಸ್ಪೇನ್‌ vs ಆಸ್ಟ್ರಿಯಾ, ಪೋರ್ಚುಗಲ್‌ vs ಕ್ರೊವೇಷಿಯಾ, ಸ್ವಿಜರ್‌ಲೆಂಡ್‌ vs ಅಲ್ಜೀರಿಯಾ, ಆಸ್ಟ್ರೇಲಿಯಾ vs ಈಜಿಪ್ಟ್‌, ಅರ್ಜೆಂಟೀನಾ vs ಕೇಪ್‌ ವರ್ಡೆ, ಕೊಲೊಂಬಿಯಾ vs ಘಾನಾ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

FIFA World Cup 2026 ಡೆಂಬೆಲೆ ಹ್ಯಾಟ್ರಿಕ್‌: ನಾರ್ವೆ ವಿರುದ್ಧ ಗೆದ್ದ ಫ್ರಾನ್ಸ್‌ ನಾಕೌಟ್ ಪ್ರವೇಶ
ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ವಿಶ್ವದಾಖಲೆ; ಬ್ರೆಜಿಲ್ ದಂತಕಥೆಯ ರೆಕಾರ್ಡ್ ಬ್ರೇಕ್ ಮಾಡಿದ ಅರ್ಜೆಂಟೀನಾ ಕ್ಯಾಪ್ಟನ್!