ಎಎಫ್‌ಸಿ ಕಪ್‌: ಭಾರತಕ್ಕೆ ಹ್ಯಾಟ್ರಿಕ್ ಸೋಲಿನ ಶಾಕ್‌

By Kannadaprabha News  |  First Published Jan 24, 2024, 12:03 PM IST

1964ರಲ್ಲಿ ರನ್ನರ್‌-ಆಪ್‌ ಆಗಿದ್ದು ಭಾರತದ ಈ ವರೆಗಿನ ಶ್ರೇಷ್ಠ ಪ್ರದರ್ಶನ. ಆ ಬಳಿಕ 4 ಬಾರಿ ಭಾರತ ಟೂರ್ನಿಯಲ್ಲಿ ಆಡಿದರೂ ಗುಂಪು ಹಂತದಲ್ಲೇ ಹೊರಬಿದ್ದಿದೆ. 2019ರಲ್ಲಿ 1 ಪಂದ್ಯ ಗೆದ್ದಿದ್ದ ಭಾರತಕ್ಕೆ ಈ ಬಾರಿ ಒಂದೂ ಗೆಲುವು ಸಿಗಲಿಲ್ಲ.


ಅಲ್‌ ಖೋರ್‌(ಕತಾರ್‌): ಅತ್ಯುತ್ತಮ ಪ್ರದರ್ಶನ ನೀಡಿ ನಾಕೌಟ್‌ಗೇರುವ ನಿರೀಕ್ಷೆಯಲ್ಲಿ ಈ ಬಾರಿ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಭಾರತ ಹ್ಯಾಟ್ರಿಕ್‌ ಸೋಲಿನೊಂದಿಗೆ ತವರಿಗೆ ಹಿಂದಿರುಗಿದೆ. ಮಂಗಳವಾರ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಸಿರಿಯಾ ವಿರುದ್ಧ 0-1 ಗೋಲಿನಿಂದ ಸೋಲನುಭವಿಸಿತು. ಇದರೊಂದಿಗೆ ಸುನಿಲ್‌ ಚೆಟ್ರಿ ಬಳಗ ‘ಬಿ’ ಗುಂಪಿನಲ್ಲಿ ಅಂಕ ಖಾತೆ ತೆರೆಯದೆ ಕೊನೆ ಸ್ಥಾನದಲ್ಲೇ ಬಾಕಿಯಾಯಿತು. ಸಿರಿಯಾ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದಿದ್ದರೆ ಭಾರತಕ್ಕೆ ನಾಕೌಟ್‌ಗೇರುವ ಅವಕಾಶ ಲಭಿಸುತ್ತಿತ್ತು.

1964ರಲ್ಲಿ ರನ್ನರ್‌-ಆಪ್‌ ಆಗಿದ್ದು ಭಾರತದ ಈ ವರೆಗಿನ ಶ್ರೇಷ್ಠ ಪ್ರದರ್ಶನ. ಆ ಬಳಿಕ 4 ಬಾರಿ ಭಾರತ ಟೂರ್ನಿಯಲ್ಲಿ ಆಡಿದರೂ ಗುಂಪು ಹಂತದಲ್ಲೇ ಹೊರಬಿದ್ದಿದೆ. 2019ರಲ್ಲಿ 1 ಪಂದ್ಯ ಗೆದ್ದಿದ್ದ ಭಾರತಕ್ಕೆ ಈ ಬಾರಿ ಒಂದೂ ಗೆಲುವು ಸಿಗಲಿಲ್ಲ. 3 ಪಂದ್ಯಗಳಲ್ಲಿ ಒಂದೂ ಗೋಲು ಬಾರಿಸದ ಭಾರತ, 6 ಗೋಲುಗಳನ್ನು ಎದುರಾಳಿ ತಂಡಗಳಿಗೆ ಬಿಟ್ಟುಕೊಟ್ಟಿದೆ.

Latest Videos

undefined

ಸಾನಿಯಾ- ಶೋಯಬ್ ವಿಚ್ಚೇದನ ಕಾರಣ: ಶಾಕಿಂಗ್ ವಿಚಾರ ಬಹಿರಂಗಪಡಿಸಿದ ಪಾಕ್ ಮೀಡಿಯಾ!

ವನಿತಾ ಹಾಕಿ ಫೈವ್ಸ್ ವಿಶ್ವಕಪ್‌ ಇಂದಿನಿಂದ

ಮಸ್ಕಟ್‌(ಒಮಾನ್‌): ಚೊಚ್ಚಲ ಆವೃತ್ತಿಯ ಮಹಿಳಾ ಹಾಕಿ ಫೈವ್ಸ್ ವಿಶ್ವಕಪ್‌ ಟೂರ್ನಿ ಬುಧವಾರದಿಂದ ಆರಂಭಗೊಳ್ಳಲಿದೆ. ಭಾರತ ತಂಡ ಆರಂಭಿಕ ಪಂದ್ಯದಲ್ಲಿ ಪೋಲೆಂಡ್‌ ವಿರುದ್ಧ ಸೆಣಸಾಡಲಿದ್ದು, ಬುಧವಾರವೇ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಅಮೆರಿಕ ಸವಾಲು ಎದುರಾಗಲಿದೆ. ಟೂರ್ನಿಯಲ್ಲಿ 16 ತಂಡಗಳಿದ್ದು, ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ‘ಸಿ’ ಗುಂಪಿನಲ್ಲಿರುವ ಭಾರತ ಗುಂಪು ಹಂತದ ಕೊನೆ ಪಂದ್ಯದಲ್ಲಿ ಜ.25ಕ್ಕೆ ನಮೀಬಿಯಾ ವಿರುದ್ಧ ಸೆಣಸಾಡಲಿದೆ. ಪ್ರತಿ ಗುಂಪಿನ ಅಗ್ರ-2 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿಲಿವೆ. ಪುರುಷರ ಟೂರ್ನಿ ಜ.28ಕ್ಕೆ ಆರಂಭಗೊಳ್ಳಲಿದೆ.

ಯೂತ್‌ ಗೇಮ್ಸ್‌: ರಾಜ್ಯದ ಧ್ರುವ, ರೀತುಶ್ರೀಗೆ ಬೆಳ್ಳಿ

ಚೆನ್ನೈ: ಇಲ್ಲಿ ನಡೆಯುತ್ತಿರುವ 6ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ ಕರ್ನಾಟಕ ಮಂಗಳವಾರ 2 ಪದಕ ಗೆದ್ದಿದೆ. ಮಹಿಳೆಯರ 400 ಮೀ. ರೇಸ್‌ನಲ್ಲಿ ರೀತುಶ್ರೀ 57.50 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಗೆದ್ದರೆ, ಪುರುಷರ 400 ಮೀಟರ್‌ ಸ್ಪರ್ಧೆಯಲ್ಲಿ ಧ್ರುವ ಬಳ್ಳಾಲ್‌ 49.06 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿದರು. ಕರ್ನಾಟಕ ಕೂಟದಲ್ಲಿ ಒಟ್ಟು 3 ಪದಕ ಗೆದ್ದಿದೆ.

Australian Open 2024 ಸೆಮಿಫೈನಲ್‌ಗೆ ನೋವಾಕ್ ಜೋಕೋವಿಚ್‌ ಲಗ್ಗೆ

ಪ್ರೊ ಕಬಡ್ಡಿ: ಯು ಮುಂಬಾ, ಪುಣೆ ನಡುವಿನ ಪಂದ್ಯ ಟೈ

ಹೈದರಾಬಾದ್‌: ಯು ಮುಂಬಾ ಹಾಗೂ ಪುಣೇರಿ ಪಲ್ಟನ್‌ ನಡುವಿನ 10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ ಮಂಗಳವಾರದ ಪಂದ್ಯ 32-32 ಅಂಕಗಳಿಂದ ಟೈ ಆಗಿದೆ. ಇದರೊಂದಿಗೆ ಪುಣೆ 14 ಪಂದ್ಯಗಳಲ್ಲಿ 11 ಜಯ, 2 ಸೋಲು, 1 ಟೈಯೊಂದಿಗೆ 60 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಮುಂಬಾ 14ರಲ್ಲಿ ತಲಾ 6 ಜಯ, ಸೋಲು, 2 ಟೈನೊಂದಿಗೆ 40 ಅಂಕ ಗಳಿಸಿ 6ನೇ ಸ್ಥಾನದಲ್ಲಿದೆ. ಆರಂಭದಿಂದಲೂ ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿದ ಇತ್ತಂಡಗಳು, ಕೊನೆವರೆಗೂ ರೋಚಕತೆ ಉಳಿಸಿಕೊಂಡವು. ಮುಂಬಾದ ಗುಮಾನ್‌ ಸಿಂಗ್ 15 ರೈಡ್‌ ಅಂಕ ಗಳಿಸಿದರೆ, ಪುಣೆರಿ ಅಸ್ಲಂ 8, ಮೋಹಿತ್‌ 7 ಅಂಕ ಸಂಪಾದಿಸಿದರು.

ಇಂದಿನ ಪಂದ್ಯಗಳು:

ಹರ್ಯಾಣ-ಡೆಲ್ಲಿ, ರಾತ್ರಿ 8ಕ್ಕೆ,

ಟೈಟಾನ್ಸ್‌-ತಲೈವಾಸ್‌, ರಾತ್ರಿ 9ಕ್ಕೆ

click me!