ಕೆಲವರನ್ನು ನೋಡಿ “ಇವರಿಗೆ ಅಹಂಕಾರ, ಸೊಕ್ಕು, ಬಿಗುಮಾನʼ ಎಂದೆಲ್ಲ ಭಾವಿಸುತ್ತೇವೆ. ಕೆಲ ರಾಶಿಯ ಜನರ ವರ್ತನೆ ಕಂಡಾಗ ಇಂಥ ತಪ್ಪು ತಿಳಿವಳಿಕೆ ಮೂಡುವುದು ಹೆಚ್ಚು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಜನ ತಪ್ಪಾಗಿ ಅರ್ಥೈಸಿಕೊಳ್ಳುವ ರಾಶಿಗಳು ಇವು.
ಹೆಚ್ಚು ಮಾತನಾಡದ, ಎಲ್ಲರೊಂದಿಗೂ ಸಹಜವಾಗಿ ಬೆರೆಯದ ಎಷ್ಟೋ ಜನರನ್ನು ನೋಡಿ “ಇವರಿಗೆ ಸೊಕ್ಕು, ಬಿಗುಮಾನ, ಸರಿಯಾಗಿ ಮಾತನಾಡುವುದಿಲ್ಲ, ನಮ್ಮೊಂದಿಗೆ ಓಪನ್ ಆಗಿರುವುದಿಲ್ಲʼ ಎಂದೆಲ್ಲ ಅಂದುಕೊಳ್ಳುತ್ತೇವೆ. ಅವರ ಗುಣವೇ ಹಾಗಿರಬಹುದು, ಅವರಲ್ಲಿ ಚೂರು ನಾಚಿಕೆಯ ಸ್ವಭಾವ ಇರಬಹುದು ಅಥವಾ ಅವರು ಮುಕ್ತವಾಗಿ ಒಡನಾಡುವ ಬಗ್ಗೆ ಹಿಂಜರಿಕೆ ಹೊಂದಿರಬಹುದು ಎಂದು ಭಾವಿಸುವುದೇ ಇಲ್ಲ. ಇದು ಸಹಜವಾಗಿ ಎಲ್ಲರಲ್ಲೂ ಕಂಡುಬರುವ ಪ್ರವೃತ್ತಿ. ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು, ಎಲ್ಲರೊಂದಿಗೆ ಸದಾಕಾಲ ಮಾತನಾಡುತ್ತಲೇ ಇರಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಕೆಲವರು ಹೇಗೆ ಮುಕ್ತವಾದ ವರ್ತನೆ ಹೊಂದಿರುತ್ತಾರೋ ಹಾಗೆಯೇ ಕೆಲವರು ಸ್ವಲ್ಪ ಬಿಗುಮಾನವೆಂದು ಕಂಡುಬರುವ ಸ್ವಭಾವ ಹೊಂದಿರುತ್ತಾರೆ. ಇವರ ನಾಚಿಕೆಯ ಗುಣಸ್ವಭಾವವೇ ಇವರನ್ನು ಅಹಂಕಾರಿಗಳು ಎಂದು ಕಾಣಿಸುವಂತೆ ಮಾಡುತ್ತದೆ. ಕೆಲ ರಾಶಿಯ ಜನರಿಗೆ ಇಂಥ ಅನುಭವ ಹೆಚ್ಚು. ಸ್ವಭಾವತಃ ಇವರು ಸರಳ ಮನೋಸ್ಥಿತಿ ಹೊಂದಿದ್ದರೂ ಇವರು ಸಂವಹನದಿಂದ ದೂರವುಳಿಯುವ ಕಾರಣ ಹಾಗೂ ತಮ್ಮದೇ ನಾಚಿಕೆಯಲ್ಲಿ ಮುದುಡುವ ಕಾರಣದಿಂದ ಬೇರೆಯವರಿಗೆ ಅಹಂಕಾರಿಗಳು ಎಂಬಂತೆ ಕಂಡುಬರುತ್ತಾರೆ. ಈ ರಾಶಿಗಳ ಜನರನ್ನು ತಪ್ಪಾಗಿ ತಿಳಿಯುವುದೇ ಹೆಚ್ಚು.
• ಸಿಂಹ (Leo)
ಚೀರ್ ಪುಲ್ (Cheerful) ಆಗಿ, ಮುಕ್ತವಾಗಿರುವ (Open) ಜನರೆಂದು ಕಂಡುಬಂದರೂ ಸಿಂಹ ರಾಶಿಯವರು ಆಳವಾದ ವ್ಯಕ್ತಿತ್ವ (Personality) ಹೊಂದಿರುವುದರಿಂದ ಬಿಗುಮಾನ ಇರುವಂತೆ ತೋರುತ್ತಾರೆ. ಅಪರಿಚಿತರು ಮೊದಲ ನೋಟದಲ್ಲಿ ಇವರನ್ನು ವಿಚಿತ್ರ ಹಾಗೂ ನಿಗೂಢ (Mysterious) ವರ್ತನೆ ಹೊಂದಿರುವಂತೆ ಭಾವಿಸುವುದೇ ಹೆಚ್ಚು. ಖಡಕ್ ಧೋರಣೆಯ ವಿಚಿತ್ರ ಬಿಗುಮಾನಿಗಳು ಎಂದು ಅಂದುಕೊಳ್ಳುತ್ತಾರೆ. ಕೆಲವೊಮ್ಮೆ ಸ್ವಲ್ಪ ಅಂಜುಬುರುಕುತನ (Timid) ಪ್ರದರ್ಶಿಸಿದಾಗ ಈಗೋ (Ego) ದಿಂದ ಕೂಡಿರುವ ವ್ಯಕ್ತಿ ಎಂದು ತಪ್ಪಾಗಿ ಭಾವಿಸಲಾಗುತ್ತದೆ. ತಮಗೆ ಹೊಂದಾಣಿಕೆಯಾಗದ ವಿಚಾರದ ಬಗ್ಗೆ ನಾಲ್ಕು ಜನರ ನಡುವೆ ಹೆಚ್ಚು ಚರ್ಚೆಗೆ ಇಳಿಯದ ಗುಣ ಹೊಂದಿರುವುದರಿಂದ ಇವರನ್ನು “ಸೊಕ್ಕುʼ (Arrogance) ಎಂದು ಪರಿಗಣಿಸುವುದು ಹೆಚ್ಚು. ಇವರ ಸ್ನೇಹಿತರೇ ಇವರನ್ನು ಅರಿತುಕೊಳ್ಳುವುದಿಲ್ಲ.
undefined
ಪಂಚ ಮಹಾಪುರುಷ ಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು?; ಇವು ನಿಮಗೆ ಅದೃಷ್ಟ ತರಲಿವೆ
• ಮೇಷ (Aries)
ಸ್ವತಂತ್ರ (Independent) ಧೋರಣೆ, ಅನ್ವೇಷಣಾತ್ಮಕ ಬುದ್ಧಿ ಹೊಂದಿರುವ ಮೇಷ ರಾಶಿಯ ಜನ ಕೆಲವು ವಿಚಾರಗಳಲ್ಲಿ ಸ್ವಲ್ಪ ಹಿಂಜರಿಕೆಯನ್ನೂ ಹೊಂದಿರುತ್ತಾರೆ. ಈ ಗುಣವೇ ಇವರನ್ನು ಈಗೋದಿಂದ ಕೂಡಿರುವ ವ್ಯಕ್ತಿಯೆಂದು ತಪ್ಪಾಗಿ ಭಾವಿಸುವಂತೆ (Misunderstand) ಮಾಡುತ್ತದೆ. ಸಾಮಾಜಿಕ ಸಂದರ್ಭಗಳಲ್ಲಿ ಹೆಚ್ಚು ಒಡನಾಡದ ಇವರನ್ನು ಅಹಂಕಾರಿಗಳು ಎನ್ನುವಂತೆ ತಪ್ಪಾಗಿ ಪರಿಗಣಿಸಲಾಗುತ್ತದೆ. ಇವರಲ್ಲಿ ನಾಚಿಕೆಯ (Shyness) ಸ್ವಭಾವವೂ ಇರುವುದಿಂದ ಕೆಲವರು ಹೆಚ್ಚು ಮಾತನಾಡದ ಗುಣವನ್ನೂ ಹೊಂದಿರಬಹುದು. ಇದೂ ಸಹ ಇವರನ್ನು ತಪ್ಪಾಗಿ ಭಾವಿಸಲು ಸಹಕಾರಿಯಾಗುತ್ತದೆ. ಹೆಚ್ಚು ಒಡನಾಡದ ಗುಣದಿಂದಾಗಿ ಬಿಗುಮಾನದ ಜನ ಎಂದು ಗುರುತಿಸಲ್ಪಡುತ್ತಾರೆ.
• ತುಲಾ (Libra)
ತುಲಾ ರಾಶಿಯ ಜನ ತಮ್ಮಲ್ಲಿ ಹಿಂಜರಿಕೆ ಇರುವಾಗ ಮಾತನಾಡುವ ಸಮಯದಲ್ಲಿ ಕಣ್ಣುಗಳನ್ನು (Eye) ನೋಡುವುದಿಲ್ಲ. ಬೇರೊಂದು ಕಡೆ ನೋಡುತ್ತ ಮಾತನಾಡುತ್ತಾರೆ. ಈ ಸ್ವಭಾವ ಇವರನ್ನು ಅಹಂಕಾರಿಗಳು ಎಂದು ಪರಿಗಣಿಸುವಂತೆ ಮಾಡುತ್ತದೆ. ಇವರಲ್ಲಿ ಸೂಪಿರಿಯಾರಿಟಿ ಕಾಂಪ್ಲೆಕ್ಸ್ (Superiority Complex) ಇದೆ ಎಂದು ಭಾವಿಸುವಂತಾಗುತ್ತದೆ. ಹಿರಿಯರೊಂದಿಗೆ ಮಾತುಕತೆ ನಡೆಸುವ ಸಮಯದಲ್ಲಿ ಈ ಗುಣ ಹೆಚ್ಚು ವ್ಯಕ್ತವಾಗುತ್ತದೆ. ಮಾತುಕತೆಯಲ್ಲಿ ಆಸಕ್ತಿ (Interest) ಇಲ್ಲವೇನೋ ಎಂದು ಕಂಡುಬರುತ್ತದೆ. ಅಸಲಿಗೆ, ಹೇಗೆ ಭಾವನೆಗಳನ್ನು (Feelings) ವ್ಯಕ್ತಪಡಿಸಬೇಕು ಎನ್ನುವುದು ಇವರಿಗೆ ಗೊತ್ತಿರುವುದಿಲ್ಲ.
ಗಟ್ಟಿಮೇಳದ ಬಾಯ್ ಬಡ್ಕಿ ಅಮೂಲ್ಯನಂತಹ ಹೆಂಡತಿಯ ಬಾಯಿ ಮುಚ್ತಾರೆ ಈ ಚಾಣಾಕ್ಷರು..!
• ಮಿಥುನ (Gemini)
ಸ್ವಾಭಿಮಾನ ಮತ್ತು ವರ್ಚಸ್ಸಿನ (Charisma) ಮಿಥುನ ರಾಶಿಯ ಜನ ಕೆಲವೊಮ್ಮೆ ಅಂತರ್ಮುಖಿತನ ಪ್ರದರ್ಶಿಸುತ್ತಾರೆ. ಈ ಸಮಯದಲ್ಲೆಲ್ಲ ಇವರನ್ನು ಅಹಂಕಾರಿಗಳೆಂದು ಪರಿಭಾವಿಸುವುದೇ ಹೆಚ್ಚು. ಜನರೊಂದಿಗೆ ಆತ್ಮೀಯತೆಯಿಂದ ಒಡನಾಡುವುದು ಕಷ್ಟಕರವೆಂದು ಭಾವಿಸುವ ಗುಣವೂ ಮಿಥುನ ರಾಶಿಯ ಜನರಲ್ಲಿರುವುದರಿಂದ ಇವರನ್ನು ತಪ್ಪಾಗಿ ಭಾವಿಸುವ ಸಾಧ್ಯತೆ ಹೇರಳ. ಈಗೋದಿಂದ ಕೂಡಿರುವ ವ್ಯಕ್ತಿಯನ್ನಾಗಿ ಪರಿಗಣಿಸಲಾಗುತ್ತದೆ. ಆದರೆ, ಅಂತರಾಳದಿಂದ (Depth) ಇವರಲ್ಲಿ ನಾಚಿಕೆ ಇರುತ್ತದೆ.