ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಹೆಸರಿನ ಮೊದಲಕ್ಷರ ಹೀಗಿರಬೇಕು...

By Suchethana D  |  First Published Oct 21, 2024, 5:51 PM IST

27 ನಕ್ಷತ್ರಗಳ ಆಧಾರದ ಮೇಲೆ ನಿಮ್ಮ ಹುಟ್ಟಿನ ಹೆಸರಿನ ಮೊದಲಕ್ಷರ ಹೇಗಿರಬೇಕು ಗೊತ್ತಾ? ಇಲ್ಲಿದೆ ಫುಲ್​ ಡಿಟೇಲ್ಸ್​
 


ಹಿಂದೂ ಶಾಸ್ತ್ರದ ಪ್ರಕಾರ, ಹುಟ್ಟಿದ ನಕ್ಷತ್ರದ ಆಧಾರದ ಮೇಲೆ ಮಗುವಿನ ಹೆಸರನ್ನು ಇಡಲಾಗುತ್ತದೆ.  ಆಕಾಶ ಮಂಡಲವನ್ನು 12 ಭಾಗಗಳನ್ನಾಗಿ ಮಾಡಲಾಗಿದೆ. ಇದೇ  12 ಜನ್ಮ ರಾಶಿಗಳು. ಇದನ್ನು 27 ನಕ್ಷತ್ರ ಮಂಡಲವಾಗಿಯೂ ವಿಭಾಗಿಸಲಾಗಿದೆ.   ಪ್ರತಿ ರಾಶಿಗೆ 2.25 ನಕ್ಷತ್ರಗಳು ಬರುತ್ತವೆ. ಒಂದು ರಾಶಿಯಲ್ಲಿ ನಾಲ್ಕು ಪಾದಗಳು ಇರುತ್ತವೆ. ರಾಶಿ ಒಂದೇ ಆಗಿದ್ದರೂ ಪಾದಗಳ ಆಧಾರದ ಮೇಲೆ ವ್ಯಕ್ತಿಗಳ ಹಣೆಬರಹ, ಸ್ವಭಾವ, ನೋಟ ಎಲ್ಲವೂ ಬದಲಾಗುತ್ತವೆ. ಒಬ್ಬ ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಬೇರೆ ಬೇರೆ ಗ್ರಹಗಳು ಬೇರೆ ಬೇರೆ ಮನೆಯಲ್ಲಿ ಇರುತ್ತವೆ. ಜೊತೆಗೆ ಅವು ಬೇರೆ ನಕ್ಷತ್ರಗಳನ್ನೂ ಹಾದುಹೋಗುತ್ತಿರುತ್ತವೆ.   

ಹಾಗಿದ್ದರೆ ಯಾವ ರಾಶಿಯಲ್ಲಿ, ಯಾವ ಪಾದದಲ್ಲಿ ಹುಟ್ಟಿದವರ ಜನ್ಮ ಜಾತಕದ ಪ್ರಕಾರ ಮೊದಲ ಅಕ್ಷರ ಏನಿಡಬೇಕು ಎನ್ನುವ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಹಿಂದೆಲ್ಲಾ ಜನ್ಮ ನಕ್ಷತ್ರದ ಆಧಾರದ ಮೇಲೆಯೇ ಹೆಸರುಗಳನ್ನುಇಡಲಾಗುತ್ತಿತ್ತು. ಈಗ ಅದನ್ನು ಕೆಲವರು ಮಾತ್ರ ಮಾಡುತ್ತಿದ್ದಾರೆ. ಈಗ ಹೆಚ್ಚಾಗಿ ಬಹುತೇಕ ಮಂದಿ ಫ್ಯಾನ್ಸಿ ಹೆಸರುಗಳನ್ನು ಇಲ್ಲವೇ ಅಜ್ಜ-ಅಜ್ಜಿಯ ಹೆಸರನ್ನು ಮಕ್ಕಳಿಗೆ ಇಡುತ್ತಾರೆ. ಆದರೆ ಕೆಲವರು ಜನ್ಮ ರಾಶಿಗೆ ಅನುಗುಣವಾಗಿ ಹೆಸರು ಇಟ್ಟರೂ, ಕರೆಯುವುದಕ್ಕಾಗಿ ಬೇರೆ ಹೆಸರನ್ನು ಇಡುತ್ತಾರೆ. ಹೆಸರು ಏನೇ ಇಡಲಿ, ಜನ್ಮ ರಾಶಿ ಮತ್ತು ಪಾದಕ್ಕೆ ಅನುಗುಣವಾಗಿ ಯಾವ ಹೆಸರು ಬರುತ್ತದೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಕ್ರಮವಾಗಿ ಒಂದು, ಎರಡು, 3 ಮತ್ತು ನಾಲ್ಕನೇ ಪಾದದ ಹೆಸರುಗಳನ್ನು ಇಲ್ಲಿ ವಿವರಿಸಲಾಗಿದೆ. 

Latest Videos

ಯಾವ ತಾರೀಖಿನಂದು ಹುಟ್ಟಿದ ವ್ಯಕ್ತಿ ನಿಮ್ಮ ಸಂಗಾತಿಯಾಗಬಹುದು? ಸುಖ ಸಂಸಾರಕ್ಕೆ ಸಂಖ್ಯಾಶಾಸ್ತ್ರ ಸೂತ್ರ...
ಅಶ್ವಿನಿ: ಚು, ಚೆ, ಚೊ ಮತ್ತು ಲ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಭರಣಿ: ಲಿ, ಲು, ಲೆ, ಲೊ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಕೃತ್ತಿಕಾ: ಅ, ಇ, ಉ, ಏ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ರೋಹಿಣಿ: ಒ, ವ, ವಿ, ವು, (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಮೃಗಶಿರ: ವೆ, ವೊ, ಕ, ಕಿ, (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಆರಿದ್ರಾ: ಕು, ಘ, ಌ, ಚ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಪುನರ್ವಸು: ಕೆ. ಕೊ, ಹ, ಇ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಪುಷ್ಯ: ಹು, ಹೆ, ಹೊ, ಡ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಆಶ್ಲೇಷ: ಡಿ, ಡು, ಡೆ, ಡೊ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಮಖ: ಮ, ಮ, ಮು, ಮೆ, (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಪುಬ್ಬ: ವೊ, ಟ, ಟೆ, ಟು (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಉತ್ತರ: ಟೆ, ಟೊ, ಪ, ಪಿ, (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಹಸ್ತ: ಪು, ಷ, ಣ, ಠ, (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಚಿತ್ರಳ ಪೆ, ಪೊ, ರ, ರಿ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಸ್ವಾತಿ: ರು, ರೆ, ರೊ, ತ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ವಿಶಾಖಾ: ತಿ, ತು, ತೆ, ತೊ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಅನುರಾಧ: ನಟ, ನಿ, ನು, ನೆ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಜ್ಯೇಷ್ಠ: ನೊ, ಯ, ಯಿ, ಯು, (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಮೂಲ: ಯೆ, ಯೊ, ಬ, ಬಿ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಪೂರ್ವಾಷಾಢ: ಬು, ಧ, ಭ, ಢ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಉತ್ತರಾಷಾಢ: ಬೆ, ಬೊ, ಜ, ಜೆ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಶ್ರವಣ: ಶಿ, ಶು, ಶೆ, ಶೊ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಧನಿಷ್ಠ: ಗ, ಗಿ, ಗು, ಗೆ, (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಶತಭೀಷ: ಗೊ, ಸ, ಸಿ, ಸು (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಪೂರ್ವಾಭಾದ್ರ: ಸೆ, ಸೊ, ದ, ದಿ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ಉತ್ತಾಭಾಧ್ರ: ದ, ಖ, ಝ, ಥ (ಕ್ರಮವಾಗಿ 1,2,3 ಮತ್ತು 4ನೇ ಪಾದ)
ರೇವತಿ: ದೆ, ದೊ, ಚ, ಚಿ (ಕ್ರಮವಾಗಿ 1,2,3 ಮತ್ತು 4ನೇ ಪಾದ)
 

click me!