ಮನೆಯೊಡೆಯನ ಜೇಬಿಗೆ ದುಡ್ಡು ಸೇರಬೇಕು ಅಂದ್ರೆ ಹೆಣ್ಮಕ್ಕಳು ಹಿಂಗ್ ಮಾಡಲೇ ಬಾರದು!

Published : Sep 15, 2023, 02:19 PM IST
ಮನೆಯೊಡೆಯನ ಜೇಬಿಗೆ ದುಡ್ಡು ಸೇರಬೇಕು ಅಂದ್ರೆ ಹೆಣ್ಮಕ್ಕಳು ಹಿಂಗ್ ಮಾಡಲೇ ಬಾರದು!

ಸಾರಾಂಶ

ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಸದಾ ಇರಬೇಕೆಂದು ನಾವು ಬಯಸ್ತೇವೆ. ಎಷ್ಟೇ ಪ್ರಯತ್ನಿಸಿದ್ರೂ ಕೆಲವೊಮ್ಮೆ ಅದು ಸಾಧ್ಯವಾಗೋದಿಲ್ಲ. ಮನೆಯಲ್ಲಿ ಲಕ್ಷ್ಮಿ ನೆಲೆ ನಿಲ್ಲೋದೇ ಇಲ್ಲ. ಅದಕ್ಕೆಲ್ಲ ಕಾರಣ ಮನೆಯಲ್ಲಿರುವ ಮಹಿಳೆ ಹಾಗೂ ಆಕೆಯ ಚಟ.   

ಹಿಂದೂ ಧರ್ಮದಲ್ಲಿ ಮಹಿಳೆಯನ್ನು ಮನೆಯ ಮಹಾಲಕ್ಷ್ಮಿ ಎಂದೇ ಕರೆಯಲಾಗುತ್ತದೆ. ಮನೆಯಲ್ಲಿರುವ ಮಹಿಳೆ ಸುಖವಾಗಿದ್ದರೆ ಆ ಮನೆಯಲ್ಲಿ ಐಶ್ವರ್ಯ, ಸಂತೋಷ, ಆರೋಗ್ಯ ಸದಾ ಇರುತ್ತದೆ ಎಂಬ ನಂಬಿಕೆಯಿದೆ. ಮಹಿಳೆ ಇರಲಿ ಇಲ್ಲ ಪುರುಷ ಇರಲಿ ಕೆಟ್ಟ ಚಟಗಳಿಗೆ ದಾಸನಾಗಬಾರದು. ಅದ್ರಲ್ಲೂ ಮಹಿಳೆ ದೇವತೆಗೆ ಸಮಾನವಾದ ಸ್ಥಾನ ಪಡೆದಿರುವ ಕಾರಣ ಆಕೆ ಎಲ್ಲರಿಗೂ ಮಾದರಿ ಆಗುವಂತೆ ನಡೆದುಕೊಳ್ಳಬೇಕು ಎನ್ನಲಾಗುತ್ತದೆ. ಯಾರ ಮನೆಯಲ್ಲಿ ಮಹಿಳೆ ಸಂತೋಷವಾಗಿದ್ದಾಳೋ, ನೆಮ್ಮದಿಯಾಗಿದ್ದಾಳೋ ಆ ಮನೆಯಲ್ಲಿ ಯಾವುದೇ ಸಮಸ್ಯೆ ಬರಲು ಸಾಧ್ಯವಿಲ್ಲ ಎಂದು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. 

ಹೆಣ್ಣು (Woman) ಭಾಗ್ಯವನ್ನೂ ತರಬಲ್ಲಳು, ಬಡತನ (Poverty) ವನ್ನೂ ತರಬಲ್ಲಳು. ಹೆಣ್ಣಿನ ಕೆಟ್ಟ ಚಟಗಳಿಂದ ಮನೆ ಹಾಳಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಹೆಣ್ಣಿನ ದುರ್ಗುಣ ಕುಟುಂಬ ಅಂಧಃಪತನಕ್ಕೆ ಕಾರಣವಾಗುತ್ತದೆ. ಹಿಂದೂ ಧರ್ಮ (Hinduism ) ದಲ್ಲಿ  ಸ್ತ್ರೀ ಹೇಗೆ ಇರಬೇಕು ಎನ್ನುವ ಬಗ್ಗೆ ಹೇಳಲಾಗಿದೆ. ಹಾಗೆಯೇ ಆಕೆಯ ಕೆಟ್ಟ ಚಟಗಳ ಬಗ್ಗೆಯೂ ಹೇಳಲಾಗಿದೆ. ಸ್ತ್ರೀಯರ  ಕೆಲವು ಕೆಟ್ಟ ಅಭ್ಯಾಸಗಳು ಮನೆಯ ಸುಖ ಹಾಳು ಮಾಡುತ್ತದೆ. ಕೆಟ್ಟ ಚಟವುಳ್ಳ ಮಹಿಳೆ ನೆಲೆಸುವ ಮನೆಯಲ್ಲಿ ಲಕ್ಷ್ಮಿ ಬಹುಕಾಲ ನೆಲೆಸಲು ಎಂದಿಗೂ ಸಾಧ್ಯವಿಲ್ಲ. ಅಲ್ಲಿ ದರಿದ್ರ ಲಕ್ಷ್ಮಿ ನೆಲೆ ನಿಲ್ಲುತ್ತಾಳೆ. ಇದ್ರಿಂದ ಆರ್ಥಿಕ ಸಮಸ್ಯೆ ಮಾತ್ರವಲ್ಲ ಅನಾರೋಗ್ಯ, ಅಸಂತೋಷ, ಕುಟುಂಬ ನಾಶವಾಗುವ ಅಪಾಯವಿರುತ್ತದೆ. ಮಹಿಳೆ ಯಾವ ಕೆಟ್ಟ ಚಟಗಳಿಂದ ದೂರ ಇರಬೇಕು ಎಂಬುದು ಇಲ್ಲಿದೆ.

ಗೌರಿ, ಗಣೇಶ ಪೂಜೆ ಮಾಡುವಾಗ ಲಕ್ಷಣವಾಗಿ ರೆಡಿ ಆದರೆ ಎಷ್ಟು ಚೆಂದ ಅಲ್ವಾ?

ಮಹಿಳೆ ಕೆಟ್ಟ ಚಟ ಎನ್ನುವುದು ಬರೀ ಆಕೆ ಸ್ವಭಾವವನ್ನು ಮಾತ್ರ ಅವಲಂಬಿಸಿಲ್ಲ. ಆಕೆ ಮಾಡುವ ಕೆಲಸವೂ ಇದ್ರಲ್ಲಿ ಬರುತ್ತದೆ. ಅಡುಗೆ ಮನೆಯಲ್ಲಿ ಮಹಿಳೆ ಮಾಡುವ ಕೆಲಸವೂ ಕುಟುಂಬದ ಏಳ್ಗೆಯ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ಮಹಿಳೆ ಹೆಚ್ಚು ರೊಟ್ಟಿ ಹಿಟ್ಟನ್ನು ಕಲಸುವುದಲ್ಲದೆ ಉಳಿದ ಹಿಟ್ಟನ್ನು ಫ್ರಿಜ್ ನಲ್ಲಿಟ್ಟು ಅದನ್ನು ಮರುದಿನ ಬಳಕೆ ಮಾಡಿದ್ರೆ ಅದು ಕೂಡ ಕೆಟ್ಟ ಹವ್ಯಾಸದಲ್ಲೇ ಬರುತ್ತದೆ. ಹೀಗೆ ಮಾಡಿದ್ರೆ ಮನೆಯ ಸಂತೋಷ ಹಾಗೂ ಸಮೃದ್ಧಿ ಹಾಳಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. 

ಹಿಂದು ಧರ್ಮದಲ್ಲಿ ಅತಿಥಿ ದೇವೋಭವ ಎಂದು ಹೇಳಲಾಗಿದೆ. ಮನೆಗೆ ಬಂದ ಅತಿಥಿಯನ್ನು ಪ್ರೀತಿಯಿಂದ ಕಾಣಬೇಕು. ಮನೆಗೆ ನೆಂಟರು ಬಂದಾಗ ಕೋಪಗೊಳ್ಳುವುದು, ಅವರನ್ನು ಸ್ವಾಗತಿಸದೇ ಇರುವುದು, ಅವರನ್ನು ಸರಿಯಾಗಿ ಉಪಚರಿಸದೆ ಇದ್ದಾಗ ಅದು ಮನೆಯ ಸಂತೋಷದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. 

ಭಾರತದ ಜನಪ್ರಿಯ ಗಣೇಶ ಪೆಂಡಾಲ್ಸ್ ಯಾವುವು?

ಮೊದಲೇ ಹೇಳಿದಂತೆ ಮಹಿಳೆ ಮನೆಯಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ನಡೆದುಕೊಳ್ಳಬೇಕು. ಆಕೆಯೇ ಆಲಸ್ಯ ತೋರಿದ್ರೆ ಉಳಿದವರು ಕೂಡ ಅದನ್ನೇ ಪಾಲನೆ ಮಾಡ್ತಾರೆ. ಮಹಿಳೆ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಏಳುವುದನ್ನು ರೂಢಿಸಿಕೊಳ್ಳಬೇಕು. ಸೂರ್ಯಾಸ್ತದ ಸಮಯದಲ್ಲಿ ಮಲಗುವ ರೂಢಿ ಬೆಳೆಸಿಕೊಳ್ಳಬಾರದು. ಈ ಎರಡೂ ಕೆಲಸವನ್ನು ಮಹಿಳೆ ಮಾಡಿದ್ರೆ ಮನೆಯಲ್ಲಿ ಬಡತನ ಕಾಡುತ್ತದೆ. ಮಕ್ಕಳೂ ತಾಯಿಯನ್ನೇ ಅನುಸರಿಸುವ ಕಾರಣ ಅವರ ಆರೋಗ್ಯದ ಮೇಲೂ ಇದು ಪ್ರಭಾವ ಬೀರುತ್ತದೆ.

ಮಹಿಳೆ ಏಕಾದಶಿ, ಅಮವಾಸ್ಯೆ ಮತ್ತು ಗುರುವಾರದಂದು ತಲೆ ಸ್ನಾನ ಮಾಡಬಾರದು. ಹಿಂದೂ ಧರ್ಮದ ಪ್ರಕಾರ, ಯಾವ ಮಹಿಳೆ ಉಪವಾಸ, ವೃತಾಚರಣೆ ಮಾಡುವುದಿಲ್ಲವೋ, ದೇವರ ಪೂಜೆ ಮಾಡುವುದಿಲ್ಲವೋ ಆ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.   

ಅಡುಗೆ ಮನೆ ಸ್ವಚ್ಛತೆ ಕೂಡ ಮುಖ್ಯವಾಗುತ್ತದೆ. ರಾತ್ರಿ ಅಡುಗೆ ಮನೆಯ ಪಾತ್ರೆಗಳನ್ನೆಲ್ಲ ಹಾಗೆ ಬಿಟ್ಟು ಮಲಗುವುದು ಕೆಟ್ಟ ಅಭ್ಯಾಸವಾಗಿದೆ. ಇದು ಕುಟುಂಬದ ಏಳ್ಗೆಗೆ ಅಡ್ಡಿಯುಂಟು ಮಾಡುತ್ತದೆ. ಬೆಳಿಗ್ಗೆ ಎದ್ದ ನಂತ್ರ ಮನೆ ಸ್ವಚ್ಛಗೊಳಿಸಿ, ಸ್ನಾನ ಮಾಡಿ, ದೇವರ ಪೂಜೆ ಮಾಡಿಯೇ ಆಹಾರ ಸೇವನೆ ಮಾಡ್ಬೇಕು. ಇದನ್ನು ಬಿಟ್ಟು ನೇರವಾಗಿ ಆಹಾರ ಸೇವನೆ ಮಾಡಿದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ. 

PREV
Read more Articles on
click me!

Recommended Stories

ರಾಹು ಬುಧ ಯುತಿ 2026: ಈ ರಾಶಿಗ ಅದೃಷ್ಟ 2026 ರಿಂದ ಹೊಳೆಯುತ್ತದೆ, ಸಂಪತ್ತು ಪಕ್ಕಾ
ಈ ಐದು ರಾಶಿಗೆ ಗ್ರಹಗಳು ಅನುಕೂಲಕರವಾಗಿವೆ, ಮುಟ್ಟಿದ್ದೆಲ್ಲಾ ಚಿನ್ನ