Colour Astrology: ಶುಭ ಕಾರ್ಯದಲ್ಲಿ ಕಪ್ಪು ಬಟ್ಟೆ ಯಾಕೆ ಧರಿಸ್ಬಾರದು?

By Suvarna NewsFirst Published Dec 12, 2022, 1:20 PM IST
Highlights

ಮದುವೆ, ದೇವರ ಕಾರ್ಯ ಎಂದಾಗ ಕಪ್ಪು ಬಣ್ಣ ಎಷ್ಟೇ ಇಷ್ಟವಾಗಿದ್ರೂ ಅದನ್ನು ಬಿಟ್ಟು ಬೇರೆ ಬಣ್ಣದ ಬಟ್ಟೆ ಹುಡುಕಾಟ ನಡೆಸ್ತೇವೆ. ಶುಭ ಸಂದರ್ಭದಲ್ಲಿ ಕಪ್ಪು ಧರಿಸಬಾರದು ಎಂಬುದು ಗೊತ್ತು. ಆದ್ರೆ ಅದಕ್ಕೆ ಕಾರಣವೇನು ಎಂಬುದು ಅನೇಕರಿಗೆ ತಿಳಿದಿಲ್ಲ.
 

ಬಣ್ಣಗಳು ಮನಸ್ಸಿಗೆ ಮುದ ನೀಡುತ್ತವೆ. ಪ್ರತಿಯೊಬ್ಬರೂ ಇಷ್ಟದ ಬಣ್ಣವನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಲಕ್ಕಿ ಬಣ್ಣ ಎಂದು ಮನೆ, ವಾಹನ ಸೇರಿದಂತೆ ಎಲ್ಲ ವಸ್ತುಗಳ ಖರೀದಿ ವೇಳೆ ಬಣ್ಣಕ್ಕೆ ಆದ್ಯತೆ ನೀಡ್ತಾರೆ. ಬಣ್ಣ ನಮ್ಮ ಅದೃಷ್ಟ ಬದಲಿಸುವ ಶಕ್ತಿ ಹೊಂದಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ಬಣ್ಣಕ್ಕೂ ತನ್ನದೇ ಆದ ಪ್ರಾಮುಖ್ಯತೆ ಮತ್ತು ಸ್ಥಾನ ನೀಡಲಾಗಿದೆ.  ಕೆಂಪು, ಹಳದಿ, ಹಸಿರು, ನೀಲಿ ಹೀಗೆ ಬಗೆ ಬಗೆಯ ಬಣ್ಣಗಳಲ್ಲಿ ಕಪ್ಪು ಬಣ್ಣ ಕೂಡ ಸೇರಿದೆ.  ಈ ಕಪ್ಪು ಬಣ್ಣವನ್ನು ಇಷ್ಟಪಡುವ ಅನೇಕ ಜನರಿದ್ದಾರೆ. ಆದ್ರೆ ವಿಶೇಷ ಸಂದರ್ಭದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಲು ಹಿಂದೇಟು ಹಾಕ್ತಾರೆ. ಕಪ್ಪು ಬಣ್ಣಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ  ಒಂದು ನಂಬಿಕೆ ಚಾಲ್ತಿಯಲ್ಲಿದೆ. ಹಿಂದೂ ಧರ್ಮದಲ್ಲಿ ಕಪ್ಪು ಬಣ್ಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.  ಹಾಗಾಗಿಯೇ ಅದನ್ನು ಶುಭ ಕಾರ್ಯಗಳಲ್ಲಿ  ಬಳಸುವುದನ್ನು ನಿಷೇಧಿಸಲಾಗಿದೆ. 

ಪ್ರತಿಯೊಂದು ಬಣ್ಣವು ವ್ಯಕ್ತಿಯ ಸ್ವಭಾವ ಮತ್ತು ಆಲೋಚನೆಯ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ಕಪ್ಪು ಬಣ್ಣ ನಕಾರಾತ್ಮಕ ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ಮಂಗಳ ಕಾರ್ಯಗಳ ಸಮಯದಲ್ಲಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.   

ಶುಭ ಕಾರ್ಯದಲ್ಲಿ ಕಪ್ಪು (Black)  ಬಟ್ಟೆ ಏಕೆ ಧರಿಸಬಾರದು ? : ಮೊದಲೇ ಹೇಳಿದಂತೆ ಕಪ್ಪು ಬಣ್ಣ ನಕಾರಾತ್ಮಕ (Negative) ತೆಯ ಸಂಕೇತವಾಗಿದೆ. ಇದ್ರ ಜೊತೆ ಕಪ್ಪು ಬಣ್ಣವು ರಾಹು ಗ್ರಹದೊಂದಿಗೆ ಸಂಬಂಧ ಹೊಂದಿದೆ.  ಕಪ್ಪು ಬಣ್ಣ (Color) ವು ಶನಿ ದೇವನಿಗೆ ತುಂಬಾ ಪ್ರಿಯವಾದ ಬಣ್ಣ ನಿಜ, ಆದ್ರೆ ನಕಾರಾತ್ಮಕ ಪರಿಣಾಮದ ವಿಷ್ಯ ಬಂದಾಗ ಕಪ್ಪು, ರಾಹು (Rahu )ಗ್ರಹದ ಪ್ರಭಾವಕ್ಕೆ ಬರುತದೆ.  ಕಪ್ಪು ಬಟ್ಟೆಗಳನ್ನು ಧರಿಸಿದಾಗ ನಕಾರಾತ್ಮಕ ಆಲೋಚನೆ ಬರುತ್ತದೆ. ಇದು ನಮ್ಮ ಸ್ವಭಾವದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕಪ್ಪು ಬಣ್ಣವನ್ನು ಶುಭ ಸಂದರ್ಭದಲ್ಲಿ ಧರಿಸಬಾರದು ಎನ್ನಲಾಗುತ್ತದೆ. 

Aries ರಾಶಿಯ ವ್ಯಕ್ತಿ ಎಷ್ಟೆಲ್ಲಾ ವಿಶೇಷ ಗುಣ ಹೊಂದಿದ್ದಾರೆ ಗೊತ್ತಾ!?

ಕಪ್ಪು ಬಣ್ಣದ ಬಗ್ಗೆ ವಾಸ್ತು (Vastu) ಹೇಳೋದೇನು? : ವಾಸ್ತು ಶಾಸ್ತ್ರದಲ್ಲಿ ಕಪ್ಪು ಬಣ್ಣದ ಬಟ್ಟೆ ಬಳಕೆಯನ್ನು ನಿಷೇಧಿಸಲಾಗಿದೆ. ಕಪ್ಪುಬಣ್ಣದ ಬಟ್ಟೆಗಳನ್ನು ಧರಿಸುವುದು ಅಥವಾ ಕಪ್ಪು ಬಣ್ಣಕ್ಕೆ ಸಂಬಂಧಿಸಿದ ಯಾವುದೇ ವಸ್ತುವನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ ಎನ್ನುತ್ತದೆ ವಾಸ್ತು. ವಾಸ್ತು ಪ್ರಕಾರ ಕಪ್ಪು ಬಣ್ಣವನ್ನು ಅತಿಯಾಗಿ ಬಳಸಿದರೆ ಅದು ಮನೆ ಮತ್ತು ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ವಾಸ್ತು (Vastu ) ಶಾಸ್ತ್ರದಲ್ಲಿ  ಕಪ್ಪು ಬಣ್ಣವನ್ನು ಶಕ್ತಿ, ಔಪಚಾರಿಕತೆ, ದುಷ್ಟತೆ, ಸಾವು, ಶೋಕ, ಖಿನ್ನತೆ,ನ ನಿರಾಸೆಯಂತಹ ಭಾವನೆಗೆ ಹೋಲಿಕೆ ಮಾಡಲಾಗುತ್ತದೆ. 

PALMISTRY: ನಿಮ್ಮ ಕೈಯ್ಯಲ್ಲಿ ಈ ಅದೃಷ್ಟರೇಖೆ ಇದೆಯಾ? ನೋಡಿಕೊಳ್ಳಿ..

ಕಪ್ಪು ಬಣ್ಣದ ಬಗ್ಗೆ ವಿಜ್ಞಾನ (Science) ಹೇಳೋದೇನು? : ಕಪ್ಪು ಬಣ್ಣದ ಬಗ್ಗೆ  ಮನೋ ವಿಜ್ಞಾನದಲ್ಲೂ ಕೆಲ ವಿಷ್ಯಗಳನ್ನು ಹೇಳಲಾಗಿದೆ. ಕಪ್ಪು ಬಣ್ಣವು ಶಕ್ತಿ ಮತ್ತು ವರ್ಗವನ್ನು ತೋರಿಸುತ್ತದೆ. ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವ ವ್ಯಕ್ತಿ ತನ್ನನ್ನು ತಾನು ಇತರರಿಗಿಂತ ಭಿನ್ನವಾಗಿ ತೋರಿಸಲು ಆಶಿಸುತ್ತಾನೆ. ಮನೋವಿಜ್ಞಾನವು ಕಪ್ಪು ಬಟ್ಟೆಗಳನ್ನು ನಕಾರಾತ್ಮಕ ಶಕ್ತಿ ಜೊತೆ ಹೋಲಿಕೆ ಮಾಡುವುದಿಲ್ಲ. ಅದರ ಪ್ರಕಾರ, ಕಪ್ಪು ಬಟ್ಟೆಗಳನ್ನು ಧರಿಸುವುದು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿಯ ವ್ಯಕ್ತಿತ್ವವನ್ನು ಹೊರಹಾಕುತ್ತದೆ. ಆದ್ರೆ ಯಾವಾಗ್ಲೂ ಕಪ್ಪು ಬಟ್ಟೆ ಧರಿಸುವ ಅಥವಾ ಕಪ್ಪು ಬಟ್ಟೆ ಧರಿಸಲು ಇಷ್ಟಪಡುವ ವ್ಯಕ್ತಿ ಮೇಲೆ ಬಣ್ಣದ ನಕಾರಾತ್ಮಕ ಪರಿಣಾಮ ಕಾಣುತ್ತದೆ. ಅವರ ಮನಸ್ಸು ಯಾವಾಗ್ಲೂ ಅಶಾಂತಿಯಿಂದ ಕೂಡಿರುತ್ತದೆ ಎಂದು ಮನೋವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. 
 

click me!